Advertisement

ಹಿರಿಯ ನಿರ್ದೇಶಕ ರಾಜಶೇಖರ್‌ ಇನ್ನಿಲ್ಲ

10:53 PM Nov 02, 2019 | Lakshmi GovindaRaju |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹ.ಸೂ. ರಾಜಶೇಖರ್‌ ಶನಿವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಸಕ್ರಿಯವಾಗಿದ್ದ ಹ.ಸೂ.ರಾಜ ಶೇಖರ್‌ ಅವರು, ಆರಂಭದಲ್ಲಿ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ, ನಂತರ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಸಕ್ರಿಯವಾಗಿದ್ದರು.

ಹ.ಸೂ.ರಾಜಶೇಖರ್‌ ಅವರು ಕನ್ನಡ ದಲ್ಲಿ “ಖದೀಮರು’, “ಭೈರವಿ’, “ಶಾಕ್‌’, “ಕರ್ಫ್ಯೂ’ “ಟಾರ್ಗೆಟ್‌’, “ಗರುಡ’, “ಧೈರ್ಯ’, “ಪಾಪಿಗಳ ಲೋಕದಲ್ಲಿ’, “ಬಣ್ಣದ ಹೆಜ್ಜೆ’, “ರಫ್ ಆ್ಯಂಡ್‌ ಟಫ್’, “ಇನ್ಸ್‌ಪೆಕ್ಟರ್‌ ಜಯಸಿಂಹ’, ತುಳು ಭಾಷೆಯಲ್ಲಿ “ಒರಿಯರ್ದೋರಿ ಅಸಲ್‌’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. “ಮುತ್ತಿನ ಹಾರ’, “ಬಣ್ಣದ ಗೆಜ್ಜೆ’, “ಯುಗ ಪುರುಷ’ ಚಿತ್ರಗಳಿಗೆ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಅವರ ನಿರ್ದೇಶನದಲ್ಲಿ ದೇವರಾಜ್‌, ಸಾಯಿಕುಮಾರ್‌ ಸೇರಿ ಹಲವರು ನಟಿಸಿದ್ದರು. ರಾಜಜಶೇಖರ್‌ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್‌ ಸೇರಿ ಚಿತ್ರರಂಗದ ಅನೇಕ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next