Advertisement

ಸೀನಿಯರ್ ಗಿಂತ ಸಲಹೆಗಾರರು ಬೇಕೆ?

03:45 AM Feb 21, 2017 | |

ಎಷ್ಟೋ ವಿಚಾರಗಳಲ್ಲಿ ಪಾಠ ಹೇಳಿಕೊಡುವ ಅಧ್ಯಾಪಕರಿಗಿಂತ ನಿಮ್ಮ ಕಣ್ಣೆದುರೇ ಪದವಿ ಪೂರೈಸಿ ಕ್ಯಾಂಪಸ್‌ನಿಂದ ಹೊರ ನಡೆದ ಸೀನಿಯರ್ ಹೆಚ್ಚು ತಿಳಿದುಕೊಂಡವರಾಗಿರುತ್ತಾರೆ; ವರ್ತಮಾನದ ಆಗುಹೋಗುಗಳನ್ನು ಬಲ್ಲವರಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ “ಅಪ್‌ಡೇಟ್‌’ ಆಗಿರುತ್ತಾರೆ. ಪದವಿಯ ನಂತರದ ಓದು ಮತ್ತು ಕೆಲಸದ ಕುರಿತು ಮಾರ್ಗದರ್ಶನ ನೀಡಲು ಸೀನಿಯರ್ಗಿಂತ ಸೂಕ್ತರಾದವರು ಸಿಗುವುದು ಕಷ್ಟ.

Advertisement

“ಯಾವನ್ನ ಬೇಕಾದ್ರೂ ಕದಿಯಬಹುದು, ಆದ್ರೆ ಕಲಿತ ವಿದ್ಯೆಯನ್ನ ಕದಿಯೋಕೆ ಆಗುತ್ತಾ?’, ‘ಯಾವುªಕ್ಕೂ ಡಿಗ್ರಿ ಅಂತ ಒಂದಿರ್ಲಿ, ಮೊದು ಓದು. ಆಮೇಲೆ ಬೇಕಿದ್ರೆ ನಿಂಗಿಷ್ಟ ಬಂದಿದ್ನ ಮಾಡು’, ‘ಓದೋ ಟೈಮಲ್ಲಿ ಸರಿಯಾಗಿ ಓದಿದ್ರೆ ಮುಂದಿನ್‌ ಜೀವ° ಚೆನ್ನಾಗಿರುತ್ತೆ’ ಇನ್ನು ಮುಂತಾದ ರೂಢಿಗತ ತಿಳಿವಳಿಕೆಯ ಮಾತುಗಳು ಕಾಲೇಜು ವಿದ್ಯಾರ್ಥಿಗಳ ಕಿವಿಗೆ ಆಗಾಗ ಬೀಳುತ್ತಲೆ ಇರುತ್ತವೆ. ‘ಕಾಲ ಬದಲಾದ್ರೂ ತಾವು ತಿಳಿದುಕೊಂಡವರೆಂದು ನಂಬಿದವರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಗೊಣಗುವ ಮೂಲಕ “ದೊಡ್ಡವರ’ ಕಿಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೂಂದರಲ್ಲಿ ಬಿಡುವುದಕ್ಕಷ್ಟೆ ಲಾಯಕ್ಕೆಂದು ಉದಾಸೀನ ತೋರುವ ಕಾಲೇಜು ವಿದ್ಯಾರ್ಥಿಗಳು, ಅದರಲ್ಲೂ ಇನ್ನೇನು ಪದವೀಧರರಾಗಲಿರುವವರು, ಹಾಗೆ ಗೊಣಗುವ ಮುನ್ನ ಕೆಲ ‘ಸೀನಿಯರ್‌’ಗಳ ಮಾತಿಗೆ ಕಿವಿಯಾಗುವ ಸಂಯಮ ಮತ್ತು ಸದವಕಾಶವನ್ನು ದಕ್ಕಿಸಿಕೊಳ್ಳಬೇಕಾಗುತ್ತದೆ.

ಯಾರು ಏನೇ ಹೇಳಿದರೂ, ಓದು ಮುಗಿದ ಮೇಲೆ ಅದಕ್ಕೆ ತಕ್ಕ ಕೆಲಸ ಸಿಕ್ಕರಷ್ಟೆ ಬಹುತೇಕರಿಗೆ ಸಮಾಧಾನ. “ಕೆಲಸನಾ? ಈಗ್ಲೆà ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳೋದು? ಡಿಗ್ರಿ ಎಕ್ಸಾಂ ಮುಗಿದು ರಿಸಲ್ಟ್ ಬರ್ಲಿ, ಆಮೇಲೆ ಕೆಲ್ಸ ಹುಡ್ಕೊàಕೆ ಅಲೆಯೋದು ಇದ್ದಿದ್ದೇ’ ಅಂತ ತಾತ್ಸಾರ ಮನೋಭಾವ ತಾಳುವ ಮುನ್ನ, “ಕೆಲ್ಸ ತಗೊಳ್ಳೋದು ಅಷ್ಟು ಸುಲಭನಾ? ಕೆಲ್ಸ ತಗೊಳ್ಳೋಕೆ ನಾನು ಡಿಗ್ರಿಯಲ್ಲಿ ಕಲಿತಿರೋದಷ್ಟೆ ಸಾಕಾ? ಮತ್ತೇನಾದ್ರೂ ಹೊಸದಾಗಿ ಕಲಿಯಬೇಕಾ?’ ಅಂತೆಲ್ಲ ಪ್ರಶ್ನಿಸಿಕೊಂಡು ತಮಗೆ ತಾವೇ ಉತ್ತರ ಕಂಡುಕೊಳ್ಳಲು ಇದು ಸಕಾಲ.

ನೀವು ಎಂಜಿನಿಯರಿಂಗ್‌, ಜರ್ನಲಿಸಂ, ಬಿ.ಕಾಂ., ಬಿ.ಎಸ್ಸಿ., ಬಿ.ಎ., ಎಂ.ಕಾಂ., ಎಂ.ಎಸ್ಸಿ., ಎಂ.ಟೆಕ್‌, ಏನನ್ನೇ ಓದುತ್ತಿದ್ದರೂ, ಪದವಿ ಅಂತಿಮ ವರ್ಷದಲ್ಲಿದ್ದರೆ ಓದು ಮುಗಿದ ಮೇಲೆ ಮುಂದೇನು ಎಂಬ ಪ್ರಶ್ನೆಯನ್ನು ಎದುರುಗೊಳ್ಳಬೇಕಿರುವುದು ಅನಿವಾರ್ಯ. ಕಾಲೇಜಿನಲ್ಲಿ ಕಲಿಸದ ಒಂದಿಷ್ಟು ಕೌಶಲ ಮತ್ತು ವಿಷಯಗಳ ಕುರಿತು ತಿಳಿದಿದ್ದರಷ್ಟೆ ಉದ್ಯೋಗದಾತರ ಗಮನ ಸೆಳೆಯಲು ಸಾಧ್ಯವೆಂಬ ಅರಿವು, ಈಗಾಗಲೇ ನಿಮ್ಮ ಹಾಗೆಯೇ ಓದು ಮುಗಿಸಿ, ಒಂದಿಷ್ಟು ದಿನ ಕೆಲಸಕ್ಕಾಗಿ ಅಲೆದಾಡಿ ಸಾಕಷ್ಟು ಪರಿತಪಿಸಿ ಕೊನೆಗೂ ಎಲ್ಲೋ ಒಂದು ಕಡೆ ಕೆಲಸ ಗಿಟ್ಟಿಸಿಕೊಂಡಿರುವ ಸೀನಿಯರ್‌ಗಳ ಮೂಲಕ ನಿಮಗೂ ದಾಟಿಕೊಂಡಿರಬಹುದು. ಸೀಮಿತ ಸಂಖ್ಯೆಯಲ್ಲಷ್ಟೆ ಲಭ್ಯವಿರುವ ನಿಮ್ಮ ಓದಿಗೆ ತಕ್ಕ ಕೆಲಸಗಳು ನಿಮ್ಮ ಪಾಲಿಗೂ ಒಲಿಯಬೇಕೆಂದರೆ, ಅದಕ್ಕೆ ಅಗತ್ಯ ಪೂರ್ವಭಾವಿ ತಾಲೀಮು ನಡೆಸುವುದು ಬೇಡವೆ? ಪದವಿ ಮುಗಿಯುವವರೆಗೂ ಕಾದು ನೋಡಿ, ಆನಂತರ “ಈ ಸಾಫ್ಟ್ವೇರ್‌ ಕಲಿತರೆ, ಇಂತಹ ಕೋರ್ಸು ಮಾಡಿದ್ರೆ ಕೆಲ್ಸ ಸಿಗುತ್ತಂತೆ’ ಎಂಬುದನ್ನು ಮನಗಂಡು, ಅದಕ್ಕಾಗಿ ಮತ್ತೆ ಆರು ತಿಂಗಳಿನಿಂದ ಒಂದು ವರ್ಷ ವ್ಯಯಿಸಬೇಕಾದ ಸಂದರ್ಭ ಎದುರುಗೊಳ್ಳುವ ಬದಲು, ಪದವಿ ಅಂತಿಮ ವರ್ಷದಲ್ಲಿದ್ದಾಗಲೇ ಸೀನಿಯರ್‌ಗಳ ಮಾರ್ಗದರ್ಶನ ಪಡೆದುಕೊಂಡು ನಿಮ್ಮ ಓದಿಗೆ ಸಂಬಂಧಿಸಿದ ಕ್ಷೇತ್ರಕ್ಕೆ ಪೂರಕವಾದ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಅಗತ್ಯವಿದ್ದರೆ ಅದಕ್ಕೆಂದೇ ಇರುವ ತರಬೇತಿ ಶಾಲೆಗಳ ಕದ ತಟ್ಟಬಹುದು. ಆದರೆ, ಕೇವಲ ಜಾಹಿರಾತುಗಳನ್ನು ನೋಡಿ ಆಕರ್ಷಿತರಾಗಿ ಯಾವುದಾದರೂ “ಕ್ರಾಶ್‌ ಕೋರ್ಸ್‌’ಗೆ ಸೇರುವ ಬದಲು ಈಗಾಗಲೇ ಇಂತಹ ಕೋರ್ಸುಗಳನ್ನು ಪೂರೈಸಿರುವವರ ಬಳಿ ಅದರ ಸಾಧಕ-ಬಾಧಕಗಳ ಕುರಿತು ಸಮಾಲೋಚಿಸುವುದು ಸೂಕ್ತ. ಉದ್ಯೋಗದಾತರು ಮತ್ತು ತಮ್ಮಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳ ನಡುವೆ “ಮಾನವ ಸಂಪನ್ಮೂಲ’ದ ಸೇತುವೆಯಾಗಿ ಕಾರ್ಯ ನಿರ್ವಹಿಸುವ ತರಬೇತಿ ಸಂಸ್ಥೆಗಳನ್ನು ಗುರುತಿಸಿ, ಪ್ರವೇಶ ಪಡೆಯುವುದು ಉತ್ತಮ.

ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ ಬಳಕೆ ವ್ಯಾಪಕವಾಗಿರುವುದರಿಂದ, ನಿಮ್ಮ ಓದಿನ ವ್ಯಾಪ್ತಿಗೆ ಅನುಗುಣವಾಗಿ ತಂತ್ರಾಂಶಗಳ ಬಳಕೆಯಲ್ಲಿ ಸಾಧ್ಯವಾದಷ್ಟೂ ಪದವಿ ಪೂರೈಸುವ ಮುನ್ನವೇ ಪಳಗುವುದು ಉದ್ಯೋಗ ಅರಸುವ ವೇಳೆ ನಿಮ್ಮ ನೆರವಿಗೆ ಬರಲಿದೆ. ಆಸಕ್ತಿಯೊಂದಿದ್ದರೆ, ಕೆಲವು ತಂತ್ರಾಂಶಗಳನ್ನು ಹೇಳಿಕೊಡುವವರ ನೆರವು ಪಡೆಯದೆ ನೀವೇ ಕಲಿಯುವುದೂ ಸಾಧ್ಯ.

Advertisement

ಅಂಕಪಟ್ಟಿಗಷ್ಟೇ ಮನ್ನಣೆ ನೀಡದೆ, ನೀವು ಮೈಗೂಡಿಸಿಕೊಳ್ಳುವ ಕೌಶಲಗಳಿಗೆ ಹೆಚ್ಚು ಆದ್ಯತೆ ನೀಡುವ ಉದ್ಯೋಗದಾತರೆ ಹೆಚ್ಚಿರುವಾಗ, ನೀನ್ನೂ “ಒಳ್ಳೆ ಮಾರ್ಕ್ಸ್ ತೆಗೆದಿರೋ ನಂಗೆ ಕೆಲ್ಸ ಸಿಗೋದೇನು ಕಷ್ಟನಾ?’ ಎಂಬ ಅತ್ಯುತ್ಸಾಹಕ್ಕೆ ಜೋತು ಬಿದ್ದರೆ ಮುಂದೆ ನಿರಾಶರಾಗುವ ಸಂಭವವೂ ಇದೆ.

ಎಷ್ಟೋ ವಿಚಾರಗಳಲ್ಲಿ ನಿಮಗೆ ಪಾಠ ಹೇಳಿಕೊಡುವ ಅಧ್ಯಾಪಕರಿಗಿಂತ ನಿಮ್ಮ ಕಣ್ಣೆದುರೇ ಪದವಿ ಪೂರೈಸಿ ಕ್ಯಾಂಪಸ್‌ನಿಂದ ಹೊರ ನಡೆದ ಸೀನಿಯರ್ ಹೆಚ್ಚು ತಿಳಿದುಕೊಂಡವರಾಗಿರುತ್ತಾರೆ; ವರ್ತಮಾನದ ಆಗುಹೋಗುಗಳನ್ನು ಬಲ್ಲವರಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ “ಅಪ್‌ಡೇಟ್‌’ ಆಗಿರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಪದವಿ ನಂತರದ ಓದು ಮತ್ತು ಕೆಲಸದ ಕುರಿತು ಮಾರ್ಗದರ್ಶನ ನೀಡಲು ನಿಮ್ಮ ಸೀನಿಯರ್ಗಿಂತ ಸೂಕ್ತರಾದವರು ಸಿಗುವುದು ಕಷ್ಟವೆನ್ನುವುದು ವಾಸ್ತವ.

– ಎಚ್‌.ಕೆ.ಶರತ್‌, ಹಾಸನ

Advertisement

Udayavani is now on Telegram. Click here to join our channel and stay updated with the latest news.

Next