Advertisement

ರೈಲು ಢಿಕ್ಕಿ: ಹಿರಿಯ ಸಿವಿಲ್‌ ಗುತ್ತಿಗೆದಾರ ಸಾವು

01:27 AM Mar 10, 2023 | Team Udayavani |

ಮಂಗಳೂರು: ರೈಲು ಢಿಕ್ಕಿ ಹೊಡೆದ ಪರಿಣಾಮ ಉಳ್ಳಾಲಬೈಲು ಗೇರು ಕೃಷಿ ಸಂಶೋಧನಾ ಕೇಂದ್ರ ಬಳಿಯ ನಿವಾಸಿ, ಹಿರಿಯ ಸಿವಿಲ್‌ ಗುತ್ತಿಗೆದಾರ ಜನಾರ್ದನ ಆಚಾರಿ (78) ಸಾವನ್ನಪ್ಪಿದ್ದಾರೆ.

Advertisement

ಗುರುವಾರ ಬೆಳಗ್ಗೆ ಮನೆಯಿಂದ ಹೊರಟವರು ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜನಾರ್ದನ ಅವರು ಸಿವಿಲ್‌ ಗುತ್ತಿಗೆದಾರರಾಗಿದ್ದು, ನೂರಕ್ಕೂ ಅಧಿಕ ಕಾರ್ಮಿಕರಿಗೆ ಕೆಲಸ ನೀಡಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ಆಗಿದ್ದರು.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next