Advertisement

ಹಿರಿಯರಿಗೆ ವರದಾನ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಂ 

06:00 AM Oct 08, 2018 | |

ಬಾಂಕುಗಳಲ್ಲಿ ಈಗ ಎಫ್ಡಿ ಮಾಡಿ ಸುಖವಿಲ್ಲವೆಂದು ಎಲ್ಲರೂ ಹೇಳುತ್ತಾರೆ. ಬಡ್ಡಿ ದರಗಳು ಇಳಿದಿವೆ. ಸುಮಾರು ಶೇ.7-ಶೇ.7.5 ಆಸುಪಾಸಿನಲ್ಲಿ ಸಿಗುವ ಬಡ್ಡಿ ದರ ಹಿರಿಯ ನಾಗರಿಕರಿಗೆ ಶೇ. 7.5-ಶೇ.8 ಸಿಗಬಹುದು. ಅಂತದ್ದರಲ್ಲಿ ಬ್ಯಾಂಕಿನಿಂದ ಬೆಟರು ಹೂಡಿಕೆ ಆವುದಯ್ನಾ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಕುಣಿದಾಡುವ ಪ್ರಶ್ನೆ. ಹಿರಿಯ ನಾಗರಿಕರಿಗೆ ಪೋಸ್ಟಾಫೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಒಂದೊಳ್ಳೆ ಯೋಜನೆ. 

Advertisement

ಬಡ್ಡಿದರ ಒಂದು ವರ್ತುಲ. ಏರಿಳಿಯುತ್ತಾ ಇರುತ್ತದೆ. ಅದನ್ನು ಗಮನಿಸುತ್ತಾ ಹೂಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದೇ ಒಂದು ಮಜಾ. ಕಳೆದ ಒಂದೆರಡು ವರ್ಷಗಳಿಂದ ಸತತವಾಗಿ ಬಡ್ಡಿ ದರ ಇಳಿಕೆಯಾಗಿ ಈಗ ಸರಿ ಸುಮಾರು ಕನಿಷ್ಠ ಎನ್ನಬಹುದಾದ ಮಟ್ಟ ದಾಟಿ ವಾಪಾಸು ಏರುಗತಿಯಲ್ಲಿದೆ. 

ಅದೇನೇ ಇರಲಿ ಬಾಂಕುಗಳಲ್ಲಿ ಈಗ ಎಫ್ಡಿ ಮಾಡಿ ಸುಖವಿಲ್ಲವೆಂದು ಎಲ್ಲರೂ ಹೇಳುತ್ತಾರೆ. ಬಡ್ಡಿ ದರಗಳು ಇಳಿದಿವೆ. ಸುಮಾರು ಶೇ.7-ಶೇ.7.5 ಆಸುಪಾಸಿನಲ್ಲಿ ಸಿಗುವ ಬಡ್ಡಿ ದರ ಹಿರಿಯ ನಾಗರಿಕರಿಗೆ ಶೇ. 7.5-ಶೇ.8 ಸಿಗಬಹುದು. ಅಂತದ್ದರಲ್ಲಿ ಬ್ಯಾಂಕಿನಿಂದ ಬೆಟರು ಹೂಡಿಕೆ ಆವುದಯ್ನಾ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಕುಣಿದಾಡುವ ಪ್ರಶ್ನೆ. 

ಹಿರಿಯ ನಾಗರಿಕರ ಮಟ್ಟಿಗೆ ಪೋಸ್ಟಾಫೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಂ ಎನ್ನುವುದು ಒಂದೊಳ್ಳೆ ಯೋಜನೆ. ಎಸ್‌.ಸಿ.ಎಸ್‌.ಎಸ್‌ ಎನ್ನುವ ಹೃಸ್ವ ಹೆಸರಿನಿಂದ ಕರೆಯಲ್ಪಡುವ ಈ ಯೋಜನೆ ಹಿರಿಯ ನಾಗರಿಕರಿಗರ ಪಾಲಿಗೆ ಒಂದು ವರದಾನವೇ ಆಗಿದೆ. ಇದೀಗ ಎಸ್‌.ಸಿ.ಎಸ್‌.ಎಸ್‌ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ:

 ಅರ್ಹತೆ: ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯೋಮಾನ 60 ಆಗಿರಬೇಕು. 60 ದಾಟಿದ ಎಲ್ಲಾ ನಾಗರಿಕರಿಗೂ ಇದರಲ್ಲಿ ತೊಡಗಿಸಿಕೊಳ್ಳುವ ಅರ್ಹತೆ ಬರುತ್ತದೆ. ಆದರೆ 55 ವರ್ಷ ದಾಟಿದ್ದು ಸ್ವಯಂ ನಿವೃತ್ತಿ (ವಿಆರ್‌ಎಸ್‌) ಪಡೆದಿರುವ ನಾಗರಿಕರೂ ಕೂಡಾ ಕೈಗೆ ಬಂದ ನಿವೃತ್ತಿ ಮೊತ್ತವನ್ನು ಅ ಮಿತಿಯೊಳಗೆ ಇದರಲ್ಲಿ ಹೂಡಬಹುದು. ಅಂತಹ ಮೊತ್ತ ಕೈಸೇರಿದ 1 ತಿಂಗಳ ಒಳಗಾಗಿ ಹೂಡಿಕೆ ನಡೆಯಬೇಕು ಮತ್ತು ವಿಆರ್‌ಎಸ್‌ ಬಗ್ಗೆ ಪುರಾವೆಯನ್ನು ಒದಗಿಸಬೇಕು. 

Advertisement

ಒಬ್ಟಾತ ಒಂದೇ ಖಾತೆಯನ್ನು ತೆರೆಯಬಹುದು ಅಥವಾ ತನ್ನ ಪತ್ನಿ/ಪತಿಯೊಡನೆ ಜಂಟಿಯಾಗಿ ಇನ್ನೊಂದು ಖಾತೆಯನ್ನೂ ತೆರೆಯಬಹುದು. ಜಂಟಿ ಖಾತೆಯ ಸಂದರ್ಭಗಳಲ್ಲಿ ಎರಡನೆಯ ಹೂಡಿಕೆದಾರರ ವಯಸ್ಸು ಮುಖ್ಯವಲ್ಲ. 
ಬ್ಯಾಂಕಿನಲ್ಲೂ ಮಾಡಬಹುದು: ಮೊದಲು ಈ ಯೋಜನೆ ಕೇವಲ ಪೋಸ್ಟಾಫೀಸಿನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಈ ಖಾತೆಯನ್ನು ಸ್ಟೇಟ್‌ ಬ್ಯಾಂಕ್‌, ಕಾರ್ಪೋರೇಶನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಐಸಿಐಸಿಐ ಇತ್ಯಾದಿ ಬ್ಯಾಂಕುಗಳಲ್ಲಿ ಕೂಡಾ ತೆರೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಯೋಜನೆಗೆ ಬ್ಯಾಂಕುಗಳು ಸಾಕಷ್ಟು ಪ್ರಚಾರ ನೀಡದ ಕಾರಣ ಜನಸಾಮಾನ್ಯರಿಗೆ ಬ್ಯಾಂಕುಗಳೂ ಕೂಡಾ ಈ ಯೋಜನೆಯನ್ನು ಒದಗಿಸುವ ವಿಚಾರ ಗೊತ್ತೇ ಇಲ್ಲ. ಕೆಲವೊಮ್ಮೆ ಬ್ಯಾಂಕು ಸಿಬ್ಬಂದಿಗಳಿಗೂ ಈ ವಿಚಾರ ಗೊತ್ತಿಲ್ಲದೆ ಇರುವುದೂ ಇದೆ. ಆದರೆ, ಈ ಬಗ್ಗೆ ರಿಸರ್ವ್‌ ಬ್ಯಾಂಕಿನ ಸುತ್ತೋಲೆ ಇದೆ, ಹಾಗೂ ಆಯಾ ಬ್ಯಾಂಕುಗಳ ಜಾಲತಾಣದಲ್ಲಿ ಮಾಹಿತಿ ಸಿಗುತ್ತದೆ. ಆದರೆ ಕೆಲವೊಮ್ಮೆ ಈ ಸೌಲಭ್ಯ ಎಲ್ಲಾ ಬ್ರಾಂಚುಗಳಲ್ಲೂ ಇದೆಯೆಂದು ಹೇಳಲು ಬರುವುದಿಲ್ಲ. ಕೆಲವು ಯೋಜನೆಗಳು ಮುಖ್ಯವಾಗಿ ಸರಕಾರಿ ಯೋಜನೆಗಳು ಎಲ್ಲಾ ಶಾಖೆಗಳ ಮೂಲಕ ಅನುಷ್ಠಾನಕ್ಕೆ ಬಂದಿಲ್ಲ. ಪಿಪಿಎಫ್, ಎನ್‌ಪಿಎಸ್‌, ರಿವರ್ಸ್‌ ಮಾಗೇìಜ್‌, ಗೋಲ್ಡ…ಲೋನ್‌, ಚಿನ್ನದ ನಾಣ್ಯದ ಮಾರಾಟ, ಲಾಕರ್‌ ಸೌಲಭ್ಯ, ಇತ್ಯಾದಿ ಹಲವಾರು ಸೌಲಭ್ಯಗಳು ಚಿಕ್ಕ ಪುಟ್ಟ ಶಾಖೆಗಳಲ್ಲಿ ಇಲ್ಲದಿರುವ ಸಾಧ್ಯತೆಗಳಿವೆ. ಈ ಬಗ್ಗೆ ಬ್ಯಾಂಕ್‌ ಮ್ಯಾನೇಜರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಬ್ಯಾಂಕುಗಳಲ್ಲಿ ಎಸ್‌ಸಿಎಸ್‌ಎಸ್‌ ಮಾಡುವುದರ ಬಗ್ಗೆ ಹಲವರು ಫೋನ್‌/ಇಮೈಲ್‌ ಮುಖಾಂತರ ನನ್ನನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆ. ಹಾಗಾಗಿ ಈ ಸ್ಪಷ್ಟೀಕರಣ. 

ಹೂಡಿಕೆ ಮೊತ್ತ : ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮಿನಲ್ಲಿ ಕನಿಷ್ಠ ರೂ. 1,000 ಹಾಗೂ ಗರಿಷ್ಟ ರೂ. 15 ಲಕ್ಷ ರುಪಾಯಿಗಳಷ್ಟು ಮಾತ್ರ ಒಬ್ಟಾತನಿಗೆ – ವೈಯಕ್ತಿಕವಾಗಿ ಅಥವಾ ಜಂಟಿ ಖಾತೆಯಲ್ಲಿ ಮೊದಲಿಗನಾಗಿ ಹೂಡಲು ಅನುಮತಿ ಇದೆ. ಜಂಟಿ ಖಾತೆಯ ಸಂದರ್ಭದಲ್ಲಿ ಹೂಡಿಕೆಯನ್ನು ಸಂಪೂರ್ಣವಾಗಿ ಮೊದಲನೆಯ ಹೂಡಿಕೆದಾರರೇ ಮಾಡಿದ್ದಾರೆ ಎಂದು ಭಾವಿಸಲಾಗುತ್ತದೆ. ಜಂಟಿ ಖಾತೆಯ ಎರಡನೆಯ ಹೆಸರಿನ ಮೇಲೆ ಆ ಹೂಡಿಕೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. (ಹಾಂ! ಜಂಟಿ ಖಾತೆ ತನ್ನ ಪತ್ನಿ ಯಾ ಪತಿಯೊಂದಿಗೆ ಮಾತ್ರ ಸಾಧ್ಯ) ಹಾಗೂ ಈ 15 ಲಕ್ಷದ ಮಿತಿ ಒಬ್ಟಾತನ ಹಲವು ಎಸ್‌.ಸಿ.ಎಸ್‌.ಎಸ್‌. ಖಾತೆಗಳ ಒಟ್ಟಾರೆ ಮಿತಿಯಾಗಿರಬಹುದು. ಪಿಪಿಎಫ್ನಂತೆ ಒಬ್ಬನಿಗೆ ಒಂದೇ ಖಾತೆ ಇರಬೇಕೆಂಬ ಕಾನೂನು ಇಲ್ಲಿ ಇಲ್ಲ. 

ಅವಧಿ: ಈ ಯೋಜನೆ 5 ವರ್ಷ ಅವಧಿ ಉಳ್ಳದ್ದು ಆಗಿರುತ್ತದೆ. 5 ವರ್ಷಗಳ ಅಂತ್ಯದಲ್ಲಿ ಖಾತೆ ಮೆಚ್ಯೂರ್‌ ಆಗುತ್ತದೆ. ಆವಾಗ ಬೇಕೆಂದರೆ 3 ವರ್ಷಗಳ ಅವಧಿಗೆ ಅದೇ ಖಾತೆಯನ್ನು ಮುಂದುವರಿಸುವ ಅವಕಾಶವಿದೆ. ಅಥವಾ, ಆ ಖಾತೆಯನ್ನು ಮುಚ್ಚಿ ಇನ್ನೊಂದು ಹೊಸ ಖಾತೆಯನ್ನು 5 ವರ್ಷಗಳ ಮಟ್ಟಿಗೆ ತೆರೆಯಬಹುದು. ಹಾಗಾಗಿ ಈ ಯೋಜನೆಯ ಬಡ್ಡಿ ದರವನ್ನು ಬ್ಯಾಂಕುಗಳ 5 ವರ್ಷಗಳ ಎಫ್.ಡಿ. ಬಡ್ಡಿ ದರಗಳೆದುರು ಪರಾಮರ್ಶಿಸಿ ನೋಡಬೇಕು. 

ಅವಧಿಪೂರ್ವ ಹಿಂಪಡೆತ: ಈ ಖಾತೆ 5 ವರ್ಷದ್ದೆಂದು ಹೇಳಿದರೂ 1 ವರ್ಷದ ಬಳಿಕ ಖಾತೆಯನ್ನು ಮುಚ್ಚಿ ದುಡ್ಡನ್ನು ಹಿಂಪಡೆಯಬಹುದು. ಆದರೆ ಇದಕ್ಕೆ ಪೆನಾಲ್ಟಿ ಅಥವಾ ತಪ್ಪು ದಂಡ ಬೀಳುತ್ತದೆ. ಎರಡು ವರ್ಷಗಳ ಒಳಗಾಗಿ ಖಾತೆಯನ್ನು ಮುಚ್ಚಿದರೆ ಶೇ.1.5 ತಪ್ಪುದಂಡ ಹಾಗೂ ಎರಡು ವರ್ಷಗಳ ಬಳಿಕ ಖಾತೆಯನ್ನು ಮುಚ್ಚಿದರೆ ಶೇ.1 ತಪ್ಪು ದಂಡವೂ ಬೀಳುತ್ತದೆ. 5 ವರ್ಷಗಳ ಬಳಿಕದ 3 ವರ್ಷಗಳ ಊರ್ಜಿತ ಅವಧಿಯಲ್ಲಿ ಹಿಂಪಡೆದರೆ ತಪ್ಪುದಂಡ ಇರುವುದಿಲ್ಲ. 

ಬಡ್ಡಿ ದರ: ಎಸ್‌ಸಿಎಸ್‌ಎಸ್‌ ಸ್ಕೀಮಿನ ಬಡ್ಡಿ ದರ ಅಕ್ಟೋಬರ್‌ 1, 2018 ರ ಬಳಿಕ ಶೇ.8.7 ಆಗಿದೆ. (ಆ ಮೊದಲು ಅದು ಶೇ. 8.3 ಇತ್ತು) ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಒಂದು ಉತ್ತಮ ಬಡ್ಡಿದರವೆಂದು ಪರಿಗಣಿಸಬಹುದು. ಸರಕಾರದ ಸ್ಮಾಲ್‌ ಸೇವಿಂಗ್ಸ್‌ ವಿಭಾಗದಲ್ಲಿ ಬರುವ ಈ ಯೋಜನೆಯ ಬಡ್ಡಿದರ ಈ ವರ್ಗದ ಇತರ ಯೋಜನೆಗಳಂತೆಯೇ ಪ್ರತಿ ತ್ತೈಮಾಸಿಕ ಬದಲಾಗುತ್ತದೆ. ಬ್ಯಾಂಕು ಬಡ್ಡಿದರಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶೇ.8.7 ಚೆನ್ನಾಗಿದೆ. ಸದ್ಯೋ ಭವಿಷ್ಯತ್ತಿನಲ್ಲಿ ಬಡ್ಡಿ ದರಗಳು ಏರುಗತಿಯಲ್ಲಿರುವ ಕಾರಣ ಮುಂದಿನ ತ್ತೈಮಾಸಿಕದಲ್ಲಿ ಅದು ಇನ್ನಷ್ಟೂ ಏರುವ ಸಾಧ್ಯತೆಗಳಿವೆ. ಈ ಯೋಜನೆಯ ಬಡ್ಡಿದರವು ಸರಕಾರದ 5 ವರ್ಷದ ಬಾಂಡುಗಳ ಮೇಲಿನ ಬಡ್ಡಿದರಗಳಿಂದ ಶೇ.1 ಜಾಸ್ತಿ ಇರುತ್ತದೆ. ಪ್ರತಿ ಬಾರಿಯೂ ಬಡ್ಡಿದರ ಈ ಫಾರ್ಮುಲಾ ಪ್ರಕಾರ ನಿಗದಿಯಾಗುತ್ತದೆ. 

ಬಡ್ಡಿದರದ ಬದಲಾವಣೆಯ ಬಗ್ಗೆ ಒಂದು ಮಾತು ಸ್ಪಷ್ಟವಾಗಿ ತಿಳಿದಿರಬೇಕು. ಎಸ್‌ಸಿಎಸ್‌ಎಸ್‌ ಯೋಜನೆ 5 ವರ್ಷದ ಒಂದು ಕರಾರು. ಹೂಡಿಕೆಯಾದಾಗಿನ ಬಡ್ಡಿ ದರವೇ ಮುಂದಿನ 5 ವರ್ಷಗಳಿಗೂ ಅನ್ವಯವಾಗುತ್ತದೆ. ಆ ಬಳಿಕ ಉಂಟಾಗುವ ಬಡ್ಡಿದರದ ಇಳಿಕೆ ಅಥವಾ ಏರಿಕೆ ಹೊಸ ಹೂಡಿಕೆಗಳಿಗೆ ಅನ್ವಯವಾಗುತ್ತದೆಯೇ ಹೊರತು ಹಳೆಯ ಹೂಡಿಕೆಗಳಿಗಲ್ಲ. ಇದು ಮುಖ್ಯವಾದ ಮಾತು. ಆದರೆ ಪಿಪಿಎಫ್ ಖಾತೆಯಲ್ಲಿ ಈ ರೀತಿಯಿಲ್ಲ. ಪಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ಅನ್ವಯವಾಗುವ ಬಡ್ಡಿದರವನ್ನು ಚಾಲ್ತಿಯಲ್ಲಿರುವ ಎಲ್ಲಾ ಖಾತೆಗಳ ಮೇಲೂ ಆ ವರ್ಷದ ಮಟ್ಟಿಗೆ ಮಾರ್ಚ್‌ 31ರಂದು ಹಾಕಲಾಗುತ್ತದೆ.

ಬಡ್ಡಿ ಪಾವತಿ: ಈ ಯೋಜನೆಯಲ್ಲಿ ಬಡ್ಡಿ ಪಾವತಿಯನ್ನು ಪ್ರತಿ ತ್ತೈಮಾಸಿಕದಲ್ಲಿ ಒಂದು ಬಾರಿ ಮಾಡಲಾಗುವುದು. ಅಂದರೆ ಪ್ರತಿ ಎಪ್ರಿಲ್, ಜುಲೈ, ಅಕ್ಟೋಬರ್‌ ಹಾಗೂ ಜನವರಿ 1 ನೇ ದಿನಾಂಕದಂದು ಬಡ್ಡಿ ಪಾವತಿ ನಿಮ್ಮ ಎಸ್‌.ಬಿ. ಖಾತೆಗೆ ಜಮೆಯಾಗುತ್ತದೆ. ರೂ. 15 ಲಕ್ಷದ ಒಂದು ಖಾತೆಯಿದ್ದಲ್ಲಿ ಪ್ರತಿ ತ್ತೈಮಾಸಿಕದಂದು ರೂ. 32,625 ನಿಮ್ಮ ಖಾತೆಗೆ ಪಾವತಿಯಾಗುತ್ತದೆ. ಈ ಸ್ಕೀಮಿನಲ್ಲಿ ಬಡ್ಡಿ ಪಾವತಿ ಕಡ್ಡಾಯವಾಗಿ ನಡೆಯುತ್ತದೆ ಹಾಗೂ ಮೆಚ್ಯೂರಿಟಿಯವರೆಗೆ ಬಡ್ಡಿಯನ್ನು ಪೇರಿಸುತ್ತಾ ಹೋಗುವ ಚಕ್ರ ಬಡ್ಡಿ ಸೌಲಭ್ಯವಿಲ್ಲ. ಹಾಗಾಗಿ ಈ ಯೋಜನೆ ಆಗಾಗ್ಗೆ ದುಡ್ಡು ಅವಶ್ಯಕತೆ ಇರುವ ನಾಗರಿಕರಿಗೆ ಹೆಚ್ಚು ಸಹಕಾರಿ. 

ಭದ್ರತೆ: ಇದು ಭಾರತ ಸರಕಾರದ ಯೋಜನೆ, ಹಾಗಾಗಿ ಅತ್ಯಂತ ಭದ್ರ. ಯೋಜನೆಯ ಆರಂಭದಲ್ಲಿ ನಮೂದಿಸಿದ ಬಡ್ಡಿದರವನ್ನು ಕೊಡುವುದು ಸರಕಾರದ ಹೊಣೆಗಾರಿಕೆ. ಶೇರು ಮತ್ತು ಮ್ಯೂಚುವಲ್‌ ಫ‌ಂಡುಗಳ ಮಾರುಕಟ್ಟೆ ಆಧಾರಿತ ಪ್ರತಿಫ‌ಲದ ಹಂಗು ಈ ಯೋಜನೆಗೆ ಇಲ್ಲ. 

ಆದಾಯಕರ: ಈ ಯೋಜನೆಯ ಮೇಲಿನ ಆದಾಯಕರ ಸೌಲಭ್ಯವನ್ನು ಎರಡು ಮಜಲುಗಳಲ್ಲಿ ನೋಡಬಹುದು.
ಮೊದಲನೆಯದಾಗಿ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರ ವಿನಾಯಿತಿಗೆ ಅರ್ಹವಾಗಿರುತ್ತದೆ. ವಾರ್ಷಿಕ ರೂ. 1.5 ಲಕ್ಷದವರೆಗಿನ ಪಿಪಿಎಫ್, ಎಲ್ಲೆ„ಸಿ, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, ಗೃಹಸಾಲದ ಅಸಲು ಪಾವತಿ, ಮಕ್ಕಳ ಟ್ಯೂಶನ್‌ ಫೀ, ಮನೆಯ ರಿಜಿಸ್ಟ್ರೇಶನ್‌ ಫೀ, 5 ವರ್ಷದ ನಮೂದಿತ ಎಫ್ಡಿ, ಸುಕನ್ಯಾ ಸಮೃದ್ಧಿ ಇತ್ಯಾದಿ ಹಲವು ಹೂಡಿಕೆಗಳ ಜೊತೆಗೆ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ಕೂಡಾ ಕರ ವಿನಾಯಿತಿಗೆ ಸೇರಿದೆ. ಹಾಗಾಗಿ ಆದಾಯ ಕರಕ್ಕಾಗಿ ಹೂಡಿಕೆ ಮಾಡಿ ಕರವಿನಾಯಿತಿ ಪಡೆಯಲಿಚ್ಚಿಸುವವರು ಈ ಯೋಜನೆಯಲ್ಲಿ ಧಾರಾಳವಾಗಿ ಹೂಡಬಹುದು. ರೂ. 1.5 ಲಕ್ಷದ ಮಿತಿಯೊಳಗೆ ನಿಮ್ಮ ಹೂಡಿಕಾ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆದು ನಿಮಗೆ ಅಷ್ಟರ ಮಟ್ಟಿಗೆ ಕರ ವಿನಾಯಿತಿ ಲಭಿಸುತ್ತದೆ. ಒಟ್ಟು ಕರ ಲಾಭ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ಇರುತ್ತದೆ (ಶೇ.5, ಶೇ.20 ಯಾ ಶೇ.30) (ಗಮನಿಸಿ: 80ಸಿ ಸೌಲಭ್ಯವು ಅಂತಹ ಹೂಡಿಕೆ ಮಾಡಿದ ವರ್ಷಕ್ಕೆ ಮಾತ್ರ ಸೀಮಿತವಾಗಿದೆ. ಒಂದು ಹೂಡಿಕೆಯ ಲಾಭ ಒಂದೇ ಬಾರಿ. ಪ್ರತಿ ವರ್ಷ ಅದೇ ಹೂಡಿಕೆಯ ಮೇಲೆ ಕರಲಾಭ ಸಿಗಲಾರದು) ಆದರೆ, ಈ ಯೋಜನೆಯ ಹೂಡಿಕೆಯಿಂದ ಪ್ರತಿ ಬಾರಿ ಕೈಸೇರುವ ಬಡ್ಡಿಯ ಮೇಲೆ ಯಾವ ಕರವಿನಾಯಿತಿಯೂ ಇರುವುದಿಲ್ಲ. ಒಂದೊಂದು ಪೈಸೆಯೂ ನಿಮ್ಮ ಆದಾಯವೆಂದು ಪರಿಗಣಿಸಲ್ಪಡುತ್ತದೆ. ಈ ಬಡ್ಡಿ ಆದಾಯವನ್ನು ನಿಮ್ಮ “ಇತರ ಆದಾಯ’ (Other income) ದೊಡನೆ ಸೇರಿಸಿ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ತೆರಿಗೆ ಕಟ್ಟಬೇಕು. ಪಿಪಿಎಫ್ನಲ್ಲಿ ಇರುವಂತೆ ಕರಮುಕ್ತ ಬಡ್ಡಿ ಈ ಯೋಜನೆಯಲ್ಲಿ ಇಲ್ಲ. ಆದರೆ ಬ್ಯಾಂಕ್‌ ಎಫ್.ಡಿ. ಗಳಿಗೂ ಇದೇ ಕಾನೂನು ಅನ್ವಯವಾಗುತ್ತದೆ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆದರೆ ಮೂಲತಃ ಕರಾರ್ಹರಲ್ಲದ ವ್ಯಕ್ತಿಗಳಿಗೆ ಈ ವಿಚಾರ ಬಾಧಕವಾಗದು. 

ಇದರ ಮೇಲಿನ ಬಡ್ಡಿ ಕೇವಲ ಕರಾರ್ಹ ಮಾತ್ರವೇ ಅಲ್ಲ, ಅದರ ಮೇಲೆ ಟಿಡಿಎಸ್‌ ಕೂಡಾ ಇರುತ್ತದೆ. ಒಂದು ವಿತ್ತ ವರ್ಷದಲ್ಲಿ (ಎಪ್ರಿಲ್-ಮಾರ್ಚ್‌) ರೂ. 10,000ಕ್ಕಿಂತ ಜಾಸ್ತಿ ಬಡ್ಡಿ ಆದಾಯ ಇದ್ದಲ್ಲಿ ಬ್ಯಾಂಕ್‌/ಪೋಸ್ಟಾಫೀಸು ಅಂತಹ ಪೂರ್ತಿ ಬಡ್ಡಿಯ ಮೆಲೆ ಶೇ.10 ಟಿಡಿಎಸ್‌ ಕರ ಕಡಿತ ಮಾಡುತ್ತದೆ. ಆದರೆ 2018ರ ಬಜೆಟ್‌ ಅನುಸಾರ ಆಯಾ ವಿತ್ತ ವರ್ಷದ ಯಾವುದೇ ದಿನದಲ್ಲೂ 60 ತುಂಬಿದ ಹಿರಿಯ ನಾಗರಿಕರಿಗೆ ಈಗ ಟಿಡಿಎಸ್‌ ಕಡಿತದ ಮಿತಿಯನ್ನು ವಾರ್ಷಿಕ ಬಡ್ಡಿ ರೂ. 50,000 ಏರಿಸಲಾಗಿದೆ. ಮೂಲತಃ ಕರಾರ್ಹರಲ್ಲದವರು ತಾವು ಕರಾರ್ಹರಲ್ಲ ಎನ್ನುವ 15ಎಚ್‌ ಫಾರ್ಮ್ ಅನ್ನು ತುಂಬಿದರೆ ಟಿಡಿಎಸ್‌ ಕಡಿತ ಆಗಲಾರದು. ಆದರೆ ಕರಾರ್ಹರಾದವರು ಸುಖಾಸುಮ್ಮನೆ ಕರ ತಪ್ಪಿಸಲು 15ಎಚ್‌ ತುಂಬುವುದು ಅಪರಾಧ. ಇತ್ತೀಚೆಗೆ ಕರ ಇಲಾಖೆ ಪ್ರತಿಯೊಬ್ಬರ 15ಎಚ್‌ (ಹಾಗೂ 15ಜಿ) ಫಾರ್ಮುಗಳ ಜಾಡುಹಿಡಿಯುತ್ತಿದೆ. ಸುಳ್ಳು ಮಾಹಿತಿ ನೀಡಿದವರಿಗೆ ಈಗಾಗಲೇ ನೋಟೀಸು ಬರಲು ಆರಂಭವಾಗಿದೆ.

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next