Advertisement
ಸರ್ಕಾರದ ಕಾಯ್ದೆಗಳು, ಆದೇಶಗಳು ಸಮರ್ಪಕವಾಗಿ ಜಾರಿಯಾಗದೆ ಕೇವಲ ಕಾಗದದ ಮೇಲೆ ಮಾತ್ರ ಉಳಿಯುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ. ಕಳೆದ ಸೋಮವಾರ ಭೀಮನ ಅಮಾವಾಸ್ಯೆ ದಿನದಂದು ಧರ್ಮ ದರ್ಶನದ ಸಾಲಿನಲ್ಲಿ ಸಾವಿರಾರು ಜನರು ಕ್ಯೂ ನಿಂತಿದ್ದರು. ಹಲವು ಹಿರಿಯ ನಾಗರಿಕರು ನೇರ ದರ್ಶನದ ಸರದಿ ಸಾಲನ್ನು ಹುಡುಕಿದರು. ಆದರೆ, ಹಿರಿಯ ನಾಗರಿಕರ ನೇರ ದರ್ಶನಕ್ಕೆ ಯಾವ ವ್ಯವಸ್ಥೆಯೂ ಇರಲಿಲ್ಲ. ಹಿರಿಯ ನಾಗರಿಕರು ದೇವಾಲಯದ ಸಿಬ್ಬಂದಿಯನ್ನು ಕೇಳಿದರೆ ಸರ್ಕಾರ ಮಾಡಿದೆ ಅಷ್ಟೇ, ನಮ್ಮಲ್ಲಿ ಇನ್ನೂ ವ್ಯವಸ್ಥೆ ಮಾಡಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿತು.
Related Articles
Advertisement
ಆದೇಶ ಜಾರಿ ಪ್ರಾಧಿಕಾರದ ಕರ್ತವ್ಯ: ಅಮಾವಾಸ್ಯೆ, ಹುಣ್ಣಿಮೆ, ವಿಶೇಷದ ದಿನಗಳಲ್ಲಿ ದರ್ಶನಕ್ಕಾಗಿ ಧರ್ಮದರ್ಶನ ಸಾಲಿನಲ್ಲಿ ನಿಂತರೆ ಕನಿಷ್ಠ 6 ತಾಸಿನಿಂದ 8 ತಾಸು ಸಮಯಾವಕಾಶ ತಗುಲುತ್ತದೆ. ಹಿರಿಯ ನಾಗರಿಕರು, ಅದರಲ್ಲೂ ಕಾಯಿಲೆ ಉಳ್ಳವರು ಹೆಚ್ಚು ಹೊತ್ತು ನಿಲ್ಲಲಾಗದೇ ಬಸವಳಿಯುತ್ತಿದ್ದಾರೆ. ರಾಜ್ಯ ಸರ್ಕಾರ ತಂದಿರುವ ಆದೇಶವನ್ನು ಜಾರಿಗೊಳಿ ಸಬೇಕಾ ದುದು ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಆದರೆ, ಜಾರಿಯಲ್ಲಿ ವಿಳಂಬವಾಗುತ್ತಿದೆ.
ಪ್ರಾಧಿಕಾರ ಆದೇಶ ಪಾಲಿಸಲಿ: ಹಿರಿಯ ನಾಗರಿಕರಿಗೆ ನೇರ ದರ್ಶನ ವ್ಯವಸ್ಥೆಗಾಗಿ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗದ ಪ್ರವೇಶದ್ವಾರ 4ರಲ್ಲಿ ವ್ಯವಸ್ಥೆ ಮಾಡ ಲಾಗುತ್ತಿದೆ. ಓರ್ವ ಸಿಬ್ಬಂದಿಯನ್ನು ನೇಮಿಸಿ ವಯಸ್ಸಿನ ದೃಢೀಕರಣ ಪರಿಶೀಲಿಸಿ ಹಿರಿಯ ನಾಗರಿಕರಿಗೆ ನೇರ ದರ್ಶನ ವ್ಯವಸ್ಥೆ ಮಾಡುವುದಾಗಿ ಪ್ರಾಧಿಕಾರದ ನಿರ್ಗಮಿತ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಜೂ.23ರಂದು ಉದಯವಾಣಿ ಪತ್ರಿಕೆಗೆ ತಿಳಿಸಿದ್ದರು. ಆದರೆ, ಈ ಆದೇಶ ಇನ್ನೂ ಜಾರಿಗೆ ಬಂದಿಲ್ಲ.
ವಿಶೇಷ ದಿನಗಳಲ್ಲಿ ಸ್ವಾಮಿ ದರ್ಶನಕ್ಕೆ ಬಂದಾಗ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು. ಸರ್ಕಾರ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ನೇರ ದರ್ಶನಕ್ಕೆ ಆದೇಶ ನೀಡಿದೆ. ಈ ಆದೇಶವನ್ನು ಬೆಟ್ಟದಲ್ಲಿ ಜಾರಿಗೊಳಿಸಬೇಕು. ●ಸಾವಿತ್ರಮ್ಮ, ಹಿರಿಯ ನಾಗರಿಕರು. ಮಂಡ್ಯ.
ಹಿರಿಯ ನಾಗರಿಕರು, ದಿವ್ಯಾಂಗರು, ಗರ್ಣಿಣಿ ಮಹಿಳೆಯರು, ಮಗುವಿನ ಜೊತೆ ಬಂದಿರುವ ಮಹಿಳೆಯರನ್ನು 500ರೂ ದರ್ಶನದ ವಿಶೇಷ ದರ್ಶನ ಸಾಲಿನಲ್ಲಿ ನೇರವಾಗಿ ಬಿಡಲು ಸಿಬ್ಬಂದಿಗೆ ತಿಳಿಸಿ ಸೂಚನೆ ನೀಡಲಾಗಿದೆ. ಒಂದೊಮ್ಮೆ ಆ ರೀತಿ ಸಮಸ್ಯೆಯಾಗಿದ್ದಲ್ಲಿ 500 ರೂ. ವಿಶೇಷ ಪ್ರವೇಶ ದ್ವಾರದ ಬಳಿ ಬೋರ್ಡ್ ಹಾಕಲು ಕ್ರಮವಹಿಸಲಾಗುವುದು. 2 ಎಕರೆಯಲ್ಲಿದ್ದ ಜೋಳದ ●ಗೀತಾ ಹುಡೇದ, ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ ಕಾರ್ಯದರ್ಶಿ
-ವಿನೋದ್ ಎನ್.ಗೌಡ