Advertisement

ಸೀನಿಯರ್‌ ಸಿಟಿಜನ್‌ ಸ್ಕೀಮ್‌

10:21 AM Aug 13, 2019 | sudhir |

ಸದ್ಯದ ಸನ್ನಿವೇಶದಲ್ಲಿ ಉತ್ತಮ ಬಡ್ಡಿದರ ನೀಡುವ ಭದ್ರವಾದ ಸರಕಾರಿ ಯೋಜನೆ ಯಾವುದಿದೆ ಎನ್ನುವ ಪ್ರಶ್ನೆಗೆ ಉತ್ತರ- 8.6% ಬಡ್ಡಿ ನೀಡುವ ಸೀನಿಯರ್‌ ಸಿಟಿಜನ್‌ ಸ್ಕೀಮ್‌.

Advertisement

ಕಳೆದ ಒಂದು ವರ್ಷದಲ್ಲಿ ಬಡ್ಡಿದರವನ್ನು 4 ಬಾರಿ ಕಡಿತಗೊಳಿಸಿ, ಆರ್‌ಬಿಐ ಸೂಚನೆ ಹೊರಡಿಸಿದೆ. ತತ್ಪರಿಣಾಮವಾಗಿ, ಬ್ಯಾಂಕುಗಳಲ್ಲಿ ಡೆಪಾಸಿಟ್‌ ಮೇಲಿನ ಬಡ್ಡಿ ದರಗಳು ಇಳಿಕೆಯಾಗಿವೆ. ಎಫ್.ಡಿ ಮೇಲಿನ ದರ ಈಗ ಸುಮಾರು 7% ಆಸುಪಾಸಿನಲ್ಲಿದೆ. ಸೀನಿಯರ್‌ ಸಿಟಿಜನ್‌ಗಳಿಗೂ ಬಡ್ಡಿ ದರ 7.5% ಸನಿಹ ದಾಟಲಾರದು. ಅಂತಹ ಸನ್ನಿವೇಶದಲ್ಲಿ ಉತ್ತಮ ಬಡ್ಡಿದರ ನೀಡುವ ಭದ್ರವಾದ ಸರಕಾರಿ ಯೋಜನೆ ಯಾವುದಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಸದ್ಯಕ್ಕೆ 8.6% ಬಡ್ಡಿ ನೀಡುವ “ಸೀನಿಯರ್‌ ಸಿಟಿಜನ್‌ ಯೋಜನೆ’ ಅಂತಹ ಒಂದು ಉತ್ತಮ ಹೂಡಿಕೆ.

ಹೂಡುವ ಮಾರ್ಗ
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯೋಮಾನ 60 ಆಗಿರಬೇಕು. 60 ದಾಟಿದ ಎÇÉಾ ನಾಗರಿಕರಿಗೂ ಇದರಲ್ಲಿ ತೊಡಗಿಸಿಕೊಳ್ಳುವ ಅರ್ಹತೆ ಬರುತ್ತದೆ. ಆದರೆ 55 ವರ್ಷ ದಾಟಿದ್ದು ನಿವೃತ್ತಿ ಅಥವಾ ಸ್ವಯಂ ನಿವೃತ್ತಿ (ವಿಆರ್‌ಎಮ್‌ಎಸ್‌) ಪಡೆದಿರುವ ನಾಗರಿಕರೂ ಕೂಡಾ ಕೈಗೆ ಬಂದ ನಿವೃತ್ತಿ ಮೊತ್ತವನ್ನು ಯೋಜನೆಯ ಮಿತಿಯೊಳಗೆ ಇದರಲ್ಲಿ ಹೂಡಬಹುದು. ಅಂತಹ ಮೊತ್ತ ಕೈ ಸೇರಿದ 3 ತಿಂಗಳ ಒಳಗಾಗಿ ಹೂಡಿಕೆ ನಡೆಯಬೇಕು ಮತ್ತು ಸ್ವಯಂ ನಿವೃತ್ತಿ ಪಡೆದಿರುವುದರ ಬಗ್ಗೆ ಪುರಾವೆಯನ್ನು ಒದಗಿಸಬೇಕು.

ಮೊದಲು ಈ ಯೋಜನೆ ಕೇವಲ ಪೋಸ್ಟಾಫೀಸಿನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಇದನ್ನು ಸ್ಟೇಟ್‌ ಬ್ಯಾಂಕ್‌, ಕಾರ್ಪೋರೇಶನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಸೇರಿ 25 ಬ್ಯಾಂಕುಗಳಲ್ಲಿ ಕೂಡಾ ತೆರೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಎಷ್ಟು ಸುರಕ್ಷಿತ?
ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಂನಲ್ಲಿ ಕನಿಷ್ಠ 1,000 ರು. ಹಾಗೂ ಗರಿಷ್ಟ 15 ಲಕ್ಷ ರುಪಾಯಿಗಳಷ್ಟನ್ನು ಮಾತ್ರ ಒಬ್ಟಾತನಿಗೆ ವೈಯಕ್ತಿಕ ಅಥವಾ ಜಂಟಿ ಖಾತೆಯಲ್ಲಿ ಒಟ್ಟಾಗಿ ಹೂಡಲು ಅನುಮತಿ ಇದೆ. ಈ ಯೋಜನೆ 5 ವರ್ಷ ಅವಧಿ ಉಳ್ಳದ್ದು. 5 ವರ್ಷಗಳ ಅಂತ್ಯದಲ್ಲಿ ಖಾತೆ ಮೆಚೂರ್‌ ಆಗುತ್ತದೆ. ಮೆಚೂÂರ್‌ ಆದ ಖಾತೆಯನ್ನು ಒಂದು ವರ್ಷದ ಒಳಗಾಗಿ, ಬೇಕೆಂದರೆ 3 ವರ್ಷಗಳ ಅವಧಿಯವರೆಗೆ ಮುಂದುವರಿಸುವ ಅವಕಾಶವಿದೆ.

Advertisement

ಈ ಯೋಜನೆಯಲ್ಲಿ ಬಡ್ಡಿ ಪಾವತಿಯನ್ನು ಪ್ರತಿ ತ್ತೈಮಾಸಿಕದಲ್ಲಿ ಒಂದು ಬಾರಿ ಮಾಡಲಾಗುವುದು. ಅಂದರೆ ಪ್ರತಿ ಜನವರಿ, ಎಪ್ರಿಲ…, ಜುಲೈ ಹಾಗೂ ಅಕ್ಟೋಬರ್‌ ಒಂದನೇ ತಾರೀಕಿನಂದು ಬಡ್ಡಿ ಪಾವತಿ ನಡೆಯುತ್ತದೆ.
ಇದು ಭಾರತ ಸರಕಾರದ ಯೋಜನೆ ಮತ್ತು ಹಾಗಾಗಿ ಅತ್ಯಂತ ಭದ್ರ.

ಯೋಜನೆಯ ಆರಂಭದಲ್ಲಿ ನಮೂದಿಸಿದ ಬಡ್ಡಿದರವನ್ನು ಕೊಡುವುದು ಸರಕಾರದ ಹೊಣೆಗಾರಿಕೆ. ಶೇರು ಮತ್ತು ಮ್ಯೂಚುವಲ್‌ ಫ‌ಂಡುಗಳ ಮಾರುಕಟ್ಟೆ ಆಧಾರಿತ ಪ್ರತಿಫ‌ಲದ ಹಂಗು ಈ ಯೋಜನೆಗೆ ಇಲ್ಲ.

ಆದಾಯ ಕರ
ಈ ಯೋಜನೆಯ ಮೇಲಿನ ಆದಾಯಕರ ಸೌಲಭ್ಯವನ್ನು ಎರಡು ಮಜಲುಗಳಲ್ಲಿ ನೋಡಬಹುದು.

ಮೊತ್ತಮೊದಲನೆಯದಾಗಿ, ಈ ಯೋಜನೆಯಲ್ಲಿ ಮಾಡಿದ ಹೂಡಿಕೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರವಿನಾಯಿತಿಗೆ ಅರ್ಹವಾಗಿರುತ್ತದೆ. ವಾರ್ಷಿಕ 1.5 ಲಕ್ಷ ರು.ವರೆಗಿನ ಪಿಪಿಎಫ್, ಎಲ್‌ಐಸಿ, ಎನ್‌ಎಸ್‌ ಸಿ, ಇಎಲ್‌ಎಸ್‌ಎಸ್‌, ಗೃಹಸಾಲದ ಅಸಲು ಪಾವತಿ, ಮಕ್ಕಳ ಟ್ಯೂಶನ್‌ ಫೀ,ಮನೆಯ ರಿಜಿಸ್ಟ್ರೇಷನ್‌ ಫೀ, 5 ವರ್ಷದ ನಮೂದಿತ ಎಫ್ಡಿ ಇತ್ಯಾದಿ ಹಲವು ಹೂಡಿಕೆಗಳ ಜೊತೆಗೆ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಂ ಕೂಡಾ ಕರ ವಿನಾಯಿತಿಗೆ ಸೇರಿದೆ. ಹಾಗಾಗಿ ಆದಾಯ ಕರಕ್ಕಾಗಿ ಹೂಡಿಕೆ ಮಾಡಿ ಕರವಿನಾಯಿತಿ ಪಡೆಯಲಿಚ್ಚಿಸುವವರು ಈ ಯೋಜನೆಯಲ್ಲಿ ಧಾರಾಳವಾಗಿ ಹಣ ಹೂಡಬಹುದು. ರೂ 1.5 ಲಕ್ಷದ ಮಿತಿಯೊಳಗೆ ನಿಮ್ಮ ಹೂಡಿಕಾ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆದು, ನಿಮಗೆ ಅಷ್ಟರಮಟ್ಟಿಗೆ ಕರವಿನಾಯಿತಿ ಲಭಿಸುತ್ತದೆ. ಒಟ್ಟು ಕರಲಾಭ ನಿಮ್ಮ ಆದಾಯದ ಸ್ಲಾಬ… ಅನುಸಾರ ಇರುತ್ತದೆ (10%, 20% ಯಾ 30%)
ಆದರೆ, ಈ ಯೋಜನೆಯ ಹೂಡಿಕೆಯಿಂದ ಕೈಸೇರುವ ಬಡ್ಡಿಯ ಮೇಲೆ ಯಾವ ಕರವಿನಾಯಿತಿಯೂ ಇರುವುದಿಲ್ಲ. ಒಂದೊಂದು ಪೈಸೆಯೂ ನಿಮ್ಮ ಆದಾಯಕ್ಕೆ ಪರಿಗಣಿಸಲ್ಪಡುತ್ತದೆ. ಈ ಬಡ್ಡಿ ಆದಾಯವನ್ನು ನಿಮ್ಮ ಇತರ ಆದಾಯದೊಡನೆ ಸೇರಿಸಿ ನಿಮ್ಮ ನಿಮ್ಮ ಆದಾಯದ ಸ್ಲಾಬ… ಅನುಸಾರ ತೆರಿಗೆ ಕಟ್ಟಬೇಕು. ಪಿಪಿಎಫ್ನಲ್ಲಿ ಇರುವಂತೆ ಕರಮುಕ್ತ ಬಡ್ಡಿ ಈ ಯೋಜನೆಯಲ್ಲಿ ಇಲ್ಲ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆದರೆ ಮೂಲತಃ ಕರಾರ್ಹರಲ್ಲದ ವ್ಯಕ್ತಿಗಳಿಗೆ ಈ ವಿಚಾರ ಬಾಧಕವಾಗದು.

ಇದರ ಮೇಲಿನ ಬಡ್ಡಿ ಕೇವಲ ಕರಾರ್ಹ ಮಾತ್ರವೇ ಅಲ್ಲ, ಅದರ ಮೇಲೆ ಟಿಡಿಎಸ್‌ ಕೂಡಾ ಇರುತ್ತದೆ. ಒಂದು ವಿತ್ತ ವರ್ಷದಲ್ಲಿ (ಏಪ್ರಿಲ…-ಮಾರ್ಚ್‌) 50,000 ರು.ಗಿಂತ ಜಾಸ್ತಿ ಬಡ್ಡಿ ಆದಾಯ ಇದ್ದಲ್ಲಿ ಬ್ಯಾಂಕ್‌/ಪೋಸ್ಟಾಫೀಸು ಅಂತಹ ಪೂರ್ತಿ ಬಡ್ಡಿಯ ಮೇಲೆ 10% ಟಿಡಿಎಸ್‌ ಕರ ಕಡಿತ ಮಾಡುತ್ತದೆ. ಮೂಲತಃ ಕರಾರ್ಹರಲ್ಲದವರು ತಾವು ಕರಾರ್ಹರಲ್ಲ ಎನ್ನುವ 15 ಎಚ್‌ಪಾರ್ಮ್ಅನ್ನು ತುಂಬಿದರೆ ಟಿಡಿಎಸ್‌ ಕಡಿತ ಆಗಲಾರದು. ಆದರೆ ಕರಾರ್ಹರಾದವರು ಸುಖಾಸುಮ್ಮನೆ ಕರ ತಪ್ಪಿಸಲು 15ಎಚ್‌ ತುಂಬುವುದು ಅಪರಾಧ. ಇತ್ತೀಚೆಗೆ ಕರ ಇಲಾಖೆ ಪ್ರತಿಯೊಬ್ಬರ 15ಎಚ್‌ (ಹಾಗೂ 15ಜಿ) ಫಾರ್ಮುಗಳ ಜಾಡು ಹಿಡಿಯುತ್ತಿದೆ. ಸುಳ್ಳು ಮಾಹಿತಿ ನೀಡಿದವರಿಗೆ ಈಗಾಗಲೇ ನೋಟೀಸು ಬರಲು ಆರಂಭವಾಗಿದೆ.

-ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next