Advertisement
ಇದು ಬಿ.ಬಿ.ಶಿವಪ್ಪ ಅವರ ಬಗ್ಗೆ ಪಕ್ಷದಲ್ಲೇ ಹೇಳುವ ಮಾತುಗಳು. ರಾಜ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆ ಆರಂಭಿಸಿದ ಬಿ.ಬಿ.ಶಿವಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರ ಅರ್ಹತೆಗೆ ತಕ್ಕಂತೆ ಸ್ಥಾನಮಾನಗಳು ಸಿಗಲಿಲ್ಲ. ಈ ಕೊರಗು ಕೊನೆಯವರೆಗೂ ಅವರಲ್ಲಿತ್ತು. ಈ ಕಾರಣಕ್ಕಾಗಿ ಒಂದು ಬಾರಿ ಅವರೇ ಪಕ್ಷವನ್ನು ತ್ಯಜಿಸಿದ್ದರು. ರಾಜಕೀಯವಾಗಿ ಏಳು-ಬೀಳುಗಳ ನಡುವೆ ಹೆಣಗಾಡಿದ ಶಿವಪ್ಪ ಅವರಿಗೆ ಪಕ್ಷದಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು ಸಿಕ್ಕಿತ್ತು. ಒಮ್ಮೆ ಪಕ್ಷ ತೊರೆದು ಮತ್ತೆ ವಾಪಸಾದರು. ವಯಸ್ಸಿನ ಕಾರಣದಿಂದ ಹೆಚ್ಚಿನ ಸ್ಥಾನಮಾನ ಸಿಗಲಿಲ್ಲವಾದರೂ 2013ರಲ್ಲಿ ವಿಧಾನಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ ಪಕ್ಷ ಅವರಿಗೆ ಗೌರವ ನೀಡಿತ್ತು.
Related Articles
Advertisement
ನಂತರದಲ್ಲಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಂಡರಾದರೂ ಒಂದು ರೀತಿ ಪಕ್ಷದಲ್ಲಿ ಮೂಲೆಗುಂಪಾದರು.ಈ ಬಗ್ಗೆ ಅಸಮಾಧಾನ ಇದ್ದರೂ ಅವರು ಮೌನಕ್ಕೆ ಶರಣಾಗಿದ್ದರು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿಎಸ್‌ವೈ ಸಿಎಂ ಆದಾಗ ಸಂಭ್ರಮಿಸಿದರು. ಆದರೆ, ಯಡಿಯೂರಪ್ಪ ವಿರುದಟಛಿ ಅಕ್ರಮ ಗಣಿಗಾರಿಕೆಗೆ ಸಹಕಾರ, ಡಿನೋಟಿμಕೇಷನ್ ಪ್ರಕರಣಗಳ ಆರೋಪ ಬಂದಾಗ ಮೊದಲು ಅವರ ವಿರುದಟಛಿ ಮಾತನಾಡಿದ್ದೇಶಿವಪ್ಪ. ಅಷ್ಟರ ಮಟ್ಟಿಗೆ ಅವರು ಪಕ್ಷದ ಶಿಸ್ತಿಗೆ ಗೌರವ ನೀಡುತ್ತಿದ್ದರು. ತಮ್ಮನ್ನು ಬಿಜೆಪಿ ನಿರ್ಲಕ್ಷಿಸಿದಾಗ ಹಿರಿಯ ನಾಗರಿಕರ ವೇದಿಕೆ ಎಂಬ ಸಂಘಟನೆ ಕಟ್ಟಿಕೊಂಡ ಅವರು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಬಳಿಕ ಅವರು ಬಿಜೆಪಿ ವಿರುದಟಛಿ ಕೆಲಸ ಮಾಡುತ್ತಿದ್ದುದನ್ನು ಗಮನಿಸಿ, ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟಿಸುವಂತೆ ಒತ್ತಾಯಿಸಿದ್ದರು.
ಬಿಜೆಪಿಯ ಹಕ್ಕ-ಬುಕ್ಕರುರಾಜ್ಯದಲ್ಲಿ ಬಿಜೆಪಿ ಸಂಘಟನೆಯಲ್ಲಿ ಬಿ.ಬಿ.ಶಿವಪ್ಪ, ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಪ್ರಮುಖ. ರಾಜ್ಯಾದ್ಯಂತ ಓಡಾಡಿ ಪಕ್ಷ ಬೆಳೆಸಿದ ಅವರಿಬ್ಬರನ್ನೂ ಪಕ್ಷದಲ್ಲಿ ಹಕ್ಕ-ಬುಕ್ಕರೆಂದೇ ಕರೆಯಲಾಗುತ್ತಿತ್ತು. ಆದರೆ, ಪಕ್ಷದಲ್ಲಿ ಅಧಿಕಾರ ರಾಜಕಾರಣ ಹೆಚ್ಚಾದಂತೆ ಶಿವಪ್ಪ ಅವರು ಮೂಲೆಗುಂಪಾದರು. ಇದಕ್ಕೆ ಅವರ ನಿಷ್ಠುರವಾದವೂ ಕಾರಣವಾಗಿತ್ತು ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರು. ಕಾಂಗ್ರೆಸ್ಸೇತರ ಸರ್ಕಾರ ರಚನೆಗೂ ಕಾರಣಿಭೂತರು 1929ರ ಸೆಪ್ಟೆಂಬರ್ 27 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಬೇಳೂರು ಗ್ರಾಮದಲ್ಲಿ ಜನಿಸಿದ ಶಿವಪ್ಪ ಕಾμ ಬೆಳೆಗಾರರ ಕುಟುಂಬದವರು. ಹಾಸನ ಕಾμ ಪ್ಲಾಂಟರ್ ಕಾμ ಕ್ಯೂರಿಂಗ್ ವರ್ಕ್ಸ್ನ ವ್ಯವಸ್ಥಾಪಕ ಸಂಸ್ಥಾಪಕ ನಿರ್ದೇಶಕರು, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕ ಸದಸ್ಯರೂ ಆಗಿದ್ದರು. 70 ರದಶಕದಲ್ಲಿ ಸಕಲೇಶಪುರ ತಾಲೂಕು ಅಭಿವೃದಿಟಛಿ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕ ಬದುಕಿಗೆ ಪ್ರವೇಶ ಪಡೆದಿದ್ದರು. ಕಾಂಗ್ರೆಸ್‌ನಲ್ಲಿದ್ದ ಶಿವಪ್ಪ 1981ರಲ್ಲಿ ಬಿಜೆಪಿ ಸೇರಿ 1983 ರಿಂದ 1988 ರವರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾಪಕ್ಷದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೂ ಕಾರಣಿಭೂತರಾಗಿದ್ದರು. ಗಣ್ಯರ ಸಂತಾಪ
ಬಿ.ಬಿ.ಶಿವಪ್ಪ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. “ಬಿ.ಬಿ.ಶಿವಪ್ಪ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರು ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರು’
– ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸ್ನೇಹ ಜೀವಿ, ಮೃದು ಭಾಷಿಯಾಗಿದ್ದ ಶಿವಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರು. ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ ಅವರು ಪಕ್ಷದ ಅಧ್ಯಕ್ಷರಾಗಿ ರಾಜ್ಯದೆಲ್ಲೆಡೆ ಸುತ್ತಿ ಸಂಘಟನೆ ಮಾಡಿದ್ದರು. ಅವರ ಅಗಲಿಕೆಯಿಂದ ಪಕ್ಷ ಓರ್ವ ಹಿರಿಯ ಮುಖಂಡನನ್ನು ಕಳೆದುಕೊಂಡಂತಾಗಿದೆ.
– ಅನಂತಕುಮಾರ್, ಕೇಂದ್ರ ಸಚಿವ ಹಿರಿಯ ಮುತ್ಸದ್ಧಿ ನಮ್ಮ ಪಕ್ಷದ ಹಿರಿಯ ಮುಖಂಡ ಕರ್ನಾಟಕದಲ್ಲಿ ತಮ್ಮ ಸಂಘಟನಾ ಶಕ್ತಿಯಿಂದ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯರಲ್ಲಿ ಒಬ್ಬರಾದ ಬಿ.ಬಿ.ಶಿವಪ್ಪ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖೀತನಾಗಿದ್ದೇನೆ. ಹಿರಿಯ ಚೇತನದ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ನನ್ನ ನಂತರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದ ಶಿವಪ್ಪ ಅವರು ರಾಜ್ಯ ಕಂಡ ಸಜ್ಜನ ರಾಜಕಾರಣಿ. ನಾವು ರಾಜಕೀಯವಾಗಿ ಬೇರೆ ಆದರೂ ಅವರ ಮತ್ತು ನನ್ನ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ. ಸಜ್ಜನ ರಾಜಕಾರಣಿಯಾಗಿದ್ದ ಶಿವಪ್ಪ ಅವರಿಗೆ ರಾಜಕಾರಣದಲ್ಲಿ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಅವರು ಇತರೆ ರಾಜಕಾರಣಿಗಳಂತೆ ಅಲ್ಲ, ರಾಜಕಾರಣಿಗಳಿಗೆ ಮಾದರಿಯಾಗಿದ್ದರು.
– ಎ.ಕೆ.ಸುಬ್ಬಯ್ಯ, ಮಾಜಿ ಶಾಸಕ ಹಾಗೂ ಶಿವಪ್ಪ ಅವರ ಒಡನಾಡಿ