ಬಾಗಲಕೋಟೆ: ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡದಿದ್ದರೆ ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಹಾಗೂ ರಾಹುಲ್ ಗಾಂಧಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಿಂದ ಮುಸ್ಲಿಂರಿಗೆ ಅನ್ಯಾಯವಾಗಿದೆ ಎಂದು ಅಲೆಕ್ಸಾಂಡರ್, ಸಾಂಗ್ಲಿಯಾನ, ರಾಯರಡ್ಡಿಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಜಾತ್ಯತೀತ ಪಕ್ಷ ಅಲ್ಲ. ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ
ತಂದೆ ತಾಯಿ ಸಮಾನರು. ಅವರನ್ನು ಗೌರವಿಸುತ್ತೇವೆ ಎಂದರು.
ನರೇಂದ್ರ ಮೋದಿ ಮತ್ತೆ ಭಾರತದ ಪ್ರಧಾನಿಯಾದರೆ ಕೇವಲ ಜಮ್ಮು ಕಾಶ್ಮೀರ ಸಮಸ್ಯೆ ಅಷ್ಟೇ ಅಲ್ಲ ಪಾಕಿಸ್ತಾನದ ಸಮಸ್ಯೆಯನ್ನೂ ಬಗೆಹರಿಸುತ್ತಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಶರಣಾಗತಿ ಪ್ರತೀಕ ಎಂದರು.
ಇಂದಿರಾ ರೀತಿಯೇ ಸಿಎಂಗೂ ಅವನತಿ: ಮಾಧ್ಯಮದ ವಿರುದಟಛಿ ಹೋಗಿದ್ದಕ್ಕೆ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡರು. ಅದೇ ರೀತಿ ಮಾಧ್ಯಮದವರ ಸುದ್ದಿಗೆ ಹೋಗಿರುವ ಕುಮಾರಸ್ವಾಮಿ ಅವರಿಗೆ ಕೊನೆಗಾಲ ಬಂದಿದೆ. ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುಳೇದಗುಡ್ಡದಲ್ಲಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭ ದಲ್ಲಿ ಇಂದಿರಾ ಗಾಂಧಿ ಪತ್ರಿಕಾ ಸ್ವಾತಂತ್ರ್ಯಹರಣ ಮಾಡುವ ಪ್ರಯತ್ನ ಮಾಡಿದ್ದರು. ಅದರ ವಿರುದ್ಧ ಹೋರಾಡಿ ಜೈಲಿಗೆ ಹೋಗಿದ್ದೆವು. ಅಷ್ಟೇ ಅಲ್ಲ ಮತ್ತೆ ಪತ್ರಿಕಾ ಸ್ವಾತಂತ್ರ್ಯಮರಳಿ ತಂದೆವು ಎಂದು ಹೇಳಿದರು.