Advertisement

ರಾಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕ ಅನುಷ್ಠಾನ ಕಷ್ಟ ಸಾಧ್ಯ

01:47 PM Sep 14, 2020 | Suhan S |

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒಳ್ಳೆಯ ಆದರ್ಶಗಳು ಇದ್ದಂತೆ ಕಾಣುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಷ್ಟಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಆರ್‌. ಇಂದಿರಾ ಅಭಿಪ್ರಾಯಪಟ್ಟರು.

Advertisement

ಗಾಂಧಿ ವಿಚಾರ ಪರಿಷದ್‌ ವತಿಯಿಂದ ಮೈಸೂರು ವಿವಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣನೀತಿ-ಶಿಕ್ಷಣಮಾಧ್ಯಮಕುರಿತುವಿಷಯಮಂಡನೆ  ಮಾಡಿದ ಅವರು, ಸಂವಿಧಾನದಲ್ಲಿರುವ ಮೂಲಕ ಆಶಯಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ. ಕೆಲವೇ ಕೆಲವು ಅಂಶಗಳು ಹೊಸದಾಗಿ ಸೇರಿಸಲಾಗಿದೆ. ಆದರೆ ಇಂದಿನ ಶಿಕ್ಷಣದ ಮೂಲಕ ಸಮಾನತೆ ಸೃಷ್ಟಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಶಿಕ್ಷಣಎನ್ನುವುದುಖಾಸಗಿ ವಲಯಕ್ಕೆ ಬಂದು ನಿಂತಿದೆ ಎಂದರು.

ಹೊಸ ಶಿಕ್ಷಣ ನೀತಿಯಲ್ಲಿ ಮಾಧ್ಯಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಕಡ್ಡಾಯ ಎಂದು ಹೇಳಲಾಗುತ್ತಿದೆ. ಆದರೆ, ಈ ನೀತಿ ಖಾಸಗಿ ಶಾಲೆಗಳಲ್ಲಿ ಖಂಡಿತವಾಗಿ ಅನ್ವಯವಾಗುವುದಿಲ್ಲ. ಇಂದು ಶೇ.70 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯುತ್ತಿದ್ದಾರೆ. ಜೊತೆಗೆ ಇನ್ನೂ ಹಲವು ಕಡೆ ಕನ್ನಡದಲ್ಲಿಯೇ ಉಪನ್ಯಾಸ ನೀಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯಿಂದ ಕನ್ನಡ ಮಾಧ್ಯಮ ಕಲಿತ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆಯೂ ಚಿಂತಿಸಬೇಕು ಎಂದರು.

ಖಾಸಗಿ ಹುನ್ನಾರ: ಮೈಸೂರು ವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಮುಜಾಫ‌ರ್‌ ಅಸಾದಿ, ಹೊಸ ಶಿಕ್ಷಣ ನೀತಿಯನ್ನು ನಾವು ವಿರೋಧಬಾಸದಿಂದ ನೋಡಬೇಕು. ನೆಹರು ಮತ್ತು ಗಾಂಧಿಯ ಶಿಕ್ಷಣ ನೀತಿಯ ಮಾದರಿಗಳನ್ನು ಹೊಸ ಶಿಕ್ಷಣ ಪದ್ಧತಿಯಲ್ಲಿಕೈಬಿಡಲಾಗಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ-ಖಾಸಗೀಕರಣ ಕುರಿತು ಮಾತನಾಡಿದ ಚಿಂತಕ ಶಿವಸುಂದರ್‌, ಕೇಂದ್ರ ಸರ್ಕಾರ ಈಗ ಪ್ರಕಟಿಸಿರುವ ಅಂಶಗಳೇ ಕೊನೆಯಲ್ಲ. ಮುಂದಿನದಿನಗಳಲ್ಲಿ ಇನ್ನೂಜನವಿರೋಧಿ ಅಂಶಗಳನ್ನು ಸೇರಿಸುವ ಎಲ್ಲಾ ಲಕ್ಷಣಗಳು ಘೋಚರಿಸುತ್ತಿದೆಎಂದರು.

ವಿಚಾರಸಂಕಿರಣವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್‌ ಉದ್ಘಾಟಿಸಿದರು. ಈ ವೇಳೆ ಪತ್ರಕರ್ತಜಿ.ಪಿ. ಬಸವರಾಜು, ಕೃಷ್ಣಪ್ರಸಾದ್‌, ಚಿಂತಕ ಪ್ರೊ. ಪಂಡಿತಾರಾಧ್ಯ ಇತರರಿದ್ದರು.

Advertisement

ಎನ್‌ಇಪಿ ತಿರಸ್ಕಾರ ನಿರ್ಣಯ :  ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ ಇಪಿ)ಜನಸಾಮಾನ್ಯರಬದಲುಕಾರ್ಪೊರೇಟ್‌ ವಲಯದ ಒಳಿತು ಬಯಸುತ್ತಿದ್ದು, ಇದನ್ನು ತಿರಸ್ಕರಿಸುವ ನಿರ್ಣಯವನ್ನು ವಿಚಾರ ಸಂಕಿರಣದಲ್ಲಿ ತೆಗೆದುಕೊಳ್ಳಲಾಯಿತು. “ಶಿಕ್ಷಣ ಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ಸ್ಪಷ್ಟತೆ ಹಾಗೂ ಅಗತ್ಯ ಮುನ್ನೋಟಗಳನ್ನು  ಎನ್‌ಇಪಿ ಒಳಗೊಂಡಿಲ್ಲ. ಹಲವಾರು ವೈರುಧ್ಯ ಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಈ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕೆಂದು ಸಭೆ ಒತ್ತಾಯಿಸುತ್ತದೆ’ ಎಂದು ಗಾಂಧಿ ವಿಚಾರ ಪರಿಷತ್‌ ಅಧ್ಯಕ್ಷರೂ ಆಗಿರುವ ಪ.ಮಲ್ಲೇಶ್‌ ನಿರ್ಣಯ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next