ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ಮೂಡಿಬರುತ್ತಿರುವ ತುಳು ಚಿತ್ರರಂಗದ ಬಹು ನಿರೀಕ್ಷಿತ ಸಿನೆಮಾ ದೇವದಾಸ್ ಕಾಪಿಕಾಡ್ ಅವರ “ಅರೆ ಮರ್ಲೆರ್’ ಆ. 11ರಂದು ತೆರೆ ಕಾಣಲಿದ್ದು, ಆಡಿಯೋ ಸಿಡಿ ಬಿಡುಗಡೆ ಬುಧವಾರ ಮಂಗಳೂರಿನಲ್ಲಿ ನಡೆಯಿತು.
ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತ ನಾಡಿ, ತುಳುನಾಡಿನ ಶ್ರೀಮಂತ ಭಾಷೆ ತುಳುವಿನ ಮೇಲೆ ಇರುವ ಪ್ರೀತಿ ಯಿಂದ ಹಲವು ಸಿನೆಮಾಗಳು ಬಂದಿದ್ದು, ತುಳುನಾಡಿನಾದ್ಯಂತ ಉತ್ತಮ ಪ್ರತಿ
ಕ್ರಿಯೆ ಪಡೆದುಕೊಂಡಿವೆ. ದೇವದಾಸ್ ಕಾಪಿಕಾಡ್ ಅವರ ಮೂಲಕ ತುಳುವಿ ನಲ್ಲಿ ನೂತನ ಚಿತ್ರ “ಅರೆ ಮರ್ಲೆರ್’ ಸಿದ್ಧಗೊಳ್ಳುತ್ತಿದ್ದು, ಕರಾವಳಿಯಾದ್ಯಂತ ಬಹಳಷ್ಟು ನಿರೀಕ್ಷೆ ಮೂಡಿಸಿದೆ ಎಂದರು.
ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಮಾತನಾಡಿ, ಕರಾವಳಿಯಲ್ಲಿ ಎಲ್ಲ ಸಮುದಾಯದವರು ಜತೆಯಾಗಿ ಬಾಳುವ ವಾತಾವರಣವಿದೆ. ನಮ್ಮೊಳಗೆ ಒಮ್ಮತದ ಭಾÅತೃತ್ವ ಮೂಡಿದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಕಲಾವಿದ ರೆಲ್ಲ ಈ ನಿಟ್ಟಿನಲ್ಲಿ ವಿಶೇಷ ಆಸ್ಥೆಯಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಬಗ್ಗೆ ಸಂದೇಶ ಸಾರಬೇಕು ಎಂದರು.
ಆ. 11ರಂದು ತೆರೆಗೆ
“ಅರೆ ಮರ್ಲೆರ್’ ಚಿತ್ರದ ಕಥೆ, ಚಿತ್ರ ಕಥೆ, ಸಂಭಾಷಣೆ, ಸಂಗೀತ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ಆ. 11ರಂದು ಅರೆ ಮರ್ಲೆರ್ ಕರಾವಳಿಯಾದ್ಯಂತ ತೆರೆ ಕಾಣಲಿದೆ. ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಅರ್ಜುನ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಉದಯ್ ಬಲ್ಲಾಳ್ ಛಾಯಾಚಿತ್ರಗ್ರಹಣ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ.
ಚಿತ್ರದಲ್ಲಿ 4 ಹಾಡುಗಳಿದ್ದು, ಎಲ್ಲ ಹಾಡುಗಳ ಮಾಸ್ಟರಿಂಗ್ ಹಾಗೂ ಪ್ರೋಗ್ರಾ ಮಿಂಗ್ ಚೆನ್ನೈಯ ಕದ್ರಿಕೀಸ್‌ನಲ್ಲಿ ಮಾಡಲಾಗಿದೆ ಎಂದು ಹೇಳಿದರು.ಎಂ. ಶಶಿಧರ ಹೆಗ್ಡೆ, ವಿಜಯ್ ಕುಮಾರ್ ಕೊಡಿಯಾಲಬೈಲ್, ನವೀನ್ ಡಿ ಪಡೀಲ್, ದೇವದಾಸ್ ಪಾಂಡೇಶ್ವರ, ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಧನ್‌ರಾಜ್, ವಾಲ್ಟರ್ ನಂದಳಿಕೆ, ಮಾಧವ ಬಗಂಬಿಲ ಮುಖ್ಯ ಅತಿಥಿಗಳಾಗಿ ದ್ದರು. ಚಿತ್ರ ನಿರ್ಮಾಪಕರಾದ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ, ನಟರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ, ಅರ್ಜುನ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು. ವಿಟ್ಲ ಮಂಗೇಶ್ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು.