Advertisement
ಮಂಗಳವಾರದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2014ರ ಚಾಂಪಿಯನ್, ವಿಶ್ವದ 4ನೇ ರ್‍ಯಾಂಕಿಂಗ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ 7-6 (7-2), 6-4, 6-3 ಅಂತರದಿಂದ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೋಂಗ ಅವರ ಆಟವನ್ನು ಕೊನೆಗೊಳಿಸಿದರು. ಸೋಂಗ 2008ರಷ್ಟು ಹಿಂದೆ ಇಲ್ಲಿ ಪ್ರಶಸ್ತಿ ಸುತ್ತಿಗೆ ನೆಗೆದಿದ್ದರು.
Related Articles
17 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ದೊರೆ ಎನಿಸಿರುವ 17ನೇ ಶ್ರೇಯಾಂಕದ ರೋಜರ್ ಫೆಡರರ್‌ಗೆ ಜರ್ಮನಿಯ ಮಿಸಾ ಜ್ವೆರೇವ್ ಭಾರೀ ಸವಾಲೇನೂ ಒಡ್ಡಲಿಲ್ಲ. ದ್ವಿತೀಯ ಸೆಟ್‌ನಲ್ಲಿ ಒಂದಿಷ್ಟು ಪ್ರತಿರೋಧ ಒಡ್ಡಿದರೂ ಫ್ರೆಡ್ಡಿ ಅನುಭವ ಇಲ್ಲಿ ಕೈಹಿಡಿಯಿತು. ಜ್ವೆರೇವ್‌ಗೆ ಮತ್ತೂಂದು ದೊಡ್ಡ ಬೇಟೆ ಕೈಜಾರಿತು.
Advertisement
ಫೆಡರರ್ 4 ಸಲ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಎನಿಸಿದ್ದು, 2010ರಷ್ಟು ಹಿಂದೆ ಕೊನೆಯ ಸಲ ಇಲ್ಲಿ ಪ್ರಶಸ್ತಿ ಜಯಿಸಿದ್ದರು. 2011ರಿಂದ ಸತತ 4 ವರ್ಷ ಇಲ್ಲಿ ಸೆಮಿಫೈನಲ್ ಸೋಲನುಭವಿಸುತ್ತ ಬಂದ ಫ್ರೆಡ್ಡಿ, 2015ರಲ್ಲಿ 3ನೇ ಸುತ್ತಿನಲ್ಲೇ ಎಡವಿದ್ದರು. ಕಳೆದ ವರ್ಷ ಮತ್ತೆ ಉಪಾಂತ್ಯದಲ್ಲಿ ಸೋಲುಂಡರು. ಇದು ಅವರ 13ನೇ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್.
ತನ್ನದೇ ದೇಶದ ಕಿರಿಯ ಆಟಗಾರ, ಡೇವಿಸ್ ಕಪ್ ಜತೆಗಾರ ವಾವ್ರಿಂಕ ವಿರುದ್ಧ ಫೆಡರರ್ 18-3 ಗೆಲುವಿನ ದಾಖಲೆ ಹೊಂದಿದ್ದಾರೆ.
ಕೊಕೊ ವಾಂಡೆವೆ ಮೊದಲ ಸೆಮಿಫೈನಲ್25ರ ಹರೆಯದ ಕೊಕೊ ವಾಂಡೆವೆ ಕಾಣು ತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಇದಾಗಿದೆ. 2015ರ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಈ ಕೂಟದಲ್ಲಿ ಪ್ರಚಂಡ ಫಾರ್ಮ್ ಪ್ರದ ರ್ಶಿಸುತ್ತ ಅಪಾಯಕಾರಿಯಾಗಿ ಹೊರಹೊಮ್ಮಿ ರುವ ವಾಂಡೆವೆ ಹಿಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಖ್ಯಾತಿಯ ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಅವರನ್ನೂ ಮನೆಗೆ ಕಳುಹಿಸಿದ್ದರು. ಈ ರೀತಿಯಾಗಿ ಇಬ್ಬರು ಚಾಂಪಿಯನ್ನರನ್ನು ಬಗ್ಗುಬಡಿದ ಹೆಗ್ಗಳಿಕೆ ವಾಂಡೆವೆ ಅವರದು. ಹೀಗಾಗಿ ವೀನಸ್‌ಗೆ ಸೆಮಿ ಸವಾಲು ಸುಲಭದ್ದಲ್ಲ ಎಂದೇ ಭಾವಿಸಲಾಗಿದೆ. ಫ್ರೆಂಚ್ ಓಪನ್ ಚಾಂಪಿಯನ್ ಮುಗುರುಜಾ ಕೂಡ ಅಪಾಯಕಾರಿ ಆಟಗಾರ್ತಿ ಆಗಿದ್ದರು. ಆದರೆ ವಾಂಡೆವೆ ವಿರುದ್ಧ ಮಂಕು ಬಡಿದವರಂತೆ ಆಡಿ ಅಚ್ಚರಿ ಹುಟ್ಟಿಸಿದರು.