Advertisement

Mangalore: ಗಾಂಜಾ ಮಾರಾಟ; ಬಂಧನ

11:58 PM Dec 21, 2023 | Team Udayavani |

ಮಂಗಳೂರು: ನಗರದ ನ್ಯೂಚಿತ್ರಾ ಜಂಕ್ಷನ್‌ ಬಸವನಗುಡಿಯಿಂದ ಕಂಡತ್‌ಪಳ್ಳಿ ಮಂಡಿ ಕಡೆಗೆ ಹೋಗುವ ರಸ್ತೆಯ ದಕ್ಷಿಣದಲ್ಲಿರುವ ಗೋಡೌನ್‌ ಬಳಿಕ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂದರು ಠಾಣೆ ಪೊಲೀಸವರು ಬಂಧಿಸಿದ್ದಾರೆ.

Advertisement

ಲವೇಶ್‌ ರಾಕೇಶ್‌ ಜೈನ್‌ ಬಂಧಿತ ಆರೋಪಿ. ಗಾಂಜಾ ಹಾಗೂ ಗಾಂಜಾ ಆ್ಯಶ್‌ವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ. ಆತನನ್ನು ತಪಾಸಣೆಗೆ ಒಳಪಡಿಸಿದಾಗ 4500 ರೂ. ಮೌಲ್ಯದ 92 ಗ್ರಾಂ ಗಾಂಜಾ 3500 ರೂ. ಮೌಲ್ಯದ 8 ಗ್ರಾಂ ಗಾಂಜಾ ಆ್ಯಶ್‌ ಪತ್ತೆಯಾಗಿದೆ. ಉಳಿದಂತೆ 6.38 ಲಕ್ಷ ರೂ. ಮೌಲ್ಯದ ವಿವಿಧ ತೂಕದ ಚಿನ್ನದ ಬ್ರಾಸ್‌ಲೆಟ್‌, ಬಿಳಿ ಕಲ್ಲು ಅಳವಡಿಸಿದ 9 ಚಿನ್ನದ ಪೆಂಡೆಂಟ್‌, 25 ಸಾವಿರ ರೂ. ಮೌಲ್ಯದ ಮೊಬೈಲ್‌, 500 ರೂ. ಮೌಲ್ಯದ ತೂಕ ಮಾಪನ, 70 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಮೇಲೆ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next