Advertisement

Madikeri ಗಾಂಜಾ ಮಾರಾಟ: ಅಸ್ಸಾಂ ಮೂಲದ ಆರೋಪಿ ಬಂಧನ

12:50 AM Dec 06, 2023 | Team Udayavani |

ಮಡಿಕೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಸ್ಸಾಂ ಮೂಲದ ಅಬ್ದುಲ್‌ ಮಜೀದ್‌ (31) ಎಂಬಾತನನ್ನು ವೀರಾಜಪೇಟೆ ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.

Advertisement

ಆರೋಪಿಯು ಪ್ರಸ್ತುತ ವೀರಾಜಪೇಟೆಯ ಕಡಂಗಮರೂರು ಗ್ರಾಮದ ನಿವಾಸಿಯಾಗಿದ್ದಾನೆ. ಆತನಿಂದ 300 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ.ಕಡಂಗಮರೂರು-ಬೊಳ್ಳುಮಾಡು ಜಂಕ್ಷನ್‌ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.

ವೀರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್‌. ಮೋಹನ್‌ ಕುಮಾರ್‌, ಸಿಪಿಐ ಬಿ.ಎಸ್‌. ಶಿವರುದ್ರ, ಪಿಎಸ್‌ಐ ಸಿ.ಸಿ. ಮಂಜುನಾಥ, ಬಿ.ಎಸ್‌. ವಾಣಿಶ್ರೀ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next