Advertisement

ಕಲಬೆರಕೆ ತುಪ್ಪ ಮಾರಾಟ: ಓರ್ವ ವಶಕ್ಕೆ

09:03 AM Jul 23, 2019 | keerthan |

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಸಾರ್ವಜನಿಕರು, ಓರ್ವನನ್ನು ವಿಟ್ಲ ಪೊಲೀಸರ ವಶಕ್ಕೆ ನೀಡಿದ ಘಟನೆ ಸೋಮವಾರ ನಡೆದಿದೆ.

Advertisement

ಬಳ್ಳಾರಿ ಮೂಲದ ಇಬ್ಬರು ವಿಟ್ಲ ಸಮೀಪದ ಮಾಣಿ, ಪೆರಾಜೆ ಮತ್ತಿತರ ಕಡೆಗಳಲ್ಲಿ ಮನೆ ಮನೆಗೆ ಬಂದು ತುಪ್ಪ ಮಾರುತ್ತಿದ್ದರು. ಅರ್ಧ ಲೀಟರ್‌ಗೆ 250 ಹೇಳಿ ಚರ್ಚೆ ಬಳಿಕ ಕೇವಲ 100 ರೂಪಾಯಿಗೆ ನೀಡುತ್ತಿದ್ದರು. ಅರ್ಧ ಲೀಟರ್‌ ತುಪ್ಪವನ್ನು 100 ರೂಪಾಯಿಗೆ ಹೇಗೆ ಮಾರಾಟ ಮಾಡುತ್ತಾರೆ ಎಂದು ಸಂಶಯ ಬಂದು, ಜೋಗಿಬೆಟ್ಟಿನ ಯುವಕರು ಈತನ ಕೈಯಿಂದ ತುಪ್ಪವನ್ನು ಪಡೆದು ಪರೀಕ್ಷಿಸಿದರು. ಆಗ ಡಾಲ್ಡಕ್ಕೆ ಕೆಮಿಕಲ್‌ ಬಳಸಿ ತುಪ್ಪ ತಯಾರಿಸಿ ಮಾರುತ್ತಿರುವ ವಿಚಾರ ಸ್ಪಷ್ಟವಾಯಿತು. ಇದರ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದವನು ತನ್ನನ್ನು ಬಳ್ಳಾರಿ ಮೂಲದ ಮಣಿಕಂಠನೆಂದು ಹೇಳಿಕೊಂಡಿದ್ದಾನೆ. ಈತನ ಜತೆಗೆ ಇನ್ನೊಬ್ಬನೂ ಬಂದಿದ್ದು, ಅವನು ಕಡೇಶಿವಾಲಯದ ಕಡೆಗೆ ತುಪ್ಪು ಮಾರಲು ತೆರಳಿದ್ದ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದಿರುವಾತನನ್ನು ವಿಟ್ಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next