Advertisement

ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲ

07:05 AM Sep 13, 2017 | Harsha Rao |

ಒಡಲೊಳಗಿನ ಸಂಕಟವನ್ನು  ತೋರ್ಪಡಿಸದೆ ಆಕೆ ನನ್ನ ಕೈಗೆ ಹೂವಿತ್ತಳು. ಅವಳ ಕಣ್ಣುಗಳು ಹೇಳುತ್ತಿದ್ದವು: ನನಗೆ ಹೂವನ್ನಷ್ಟೇ ಮಾರುವುದಕ್ಕೆ ಬರುತ್ತದೆ..

Advertisement

ನನ್ನ ಮಗನ ಮುಖ ನೋಡಿ ನನಗೆ ನಗು ಬರುತ್ತಿತ್ತು. ಆದರೆ ಮೊಮ್ಮಗನ ಎದುರು ನಗೋದು ಚೆನ್ನಾಗಿರಲ್ಲ ಅಂತ ಸುಮ್ಮನಿ¨ªೆ. ಅವನ ಮಗ ಅವನಿಗೆ ತಿರುಗಿ ಉತ್ತರ ಕೊಟ್ಟಾಗ ಏನಾಗಬಹುದು ಅನ್ನೋ ಪರಿವೆ ನನಗಿದೆ. ಅಲ್ಲ, ಮನೇಲೂ  ಮಾತಾಡಬಾರದು ಅಂದ್ರೆ ಇನ್ನೇಲ್ಲಿ ಮಾತಾಡಬೇಕು ನಾವು?! ಎನ್ನುತ್ತಾ,  ಹೂ ಕೊಳ್ಳಲು ಹೋದ ನನ್ನ ಕಡೆ ತಿರುಗಿ “ಯಾವ ಹೂ ಬೇಕಮ್ಮಾ?’ ಎಂದಾಗ ಅವಳ ಕಣ್ಣಲ್ಲಿ ಮೊದಲ ಬಾರಿಗೆ ನೋವಿನ ಛಾಯೆ ನೋಡಿದ್ದು ನಾನು.     ಬನಶಂಕರಿಯ ಆ ಬೀದಿಯಲ್ಲಿ ಎಷ್ಟೋ ಜನ ಹೂ ಮಾರುವವರು ಇದ್ದಾರೆ. ಅಷ್ಟೊಂದು ಜನರ ಪೈಕಿ ಈ ಅಜ್ಜಿ ಹೂವಮ್ಮ ನನಗೆ ನೆಚ್ಚು .ಯಾವಾಗಲು ಹೂ ನಗೆ,ಅಕ್ಕರೆ ಸೂಸುತ್ತಾ ಹೂ ಮಾರುವ ಹೆಂಗಸು ಆಕೆ. ಎÇÉೋ ಒಮ್ಮೆ ಮಳೆ ಹನಿದಾಗ ನಮಗೇ ಏಕೆ ದೇವರು ಕಷ್ಟ ಕೊಡುತ್ತಾನೆ ಎಂದು ಕೊರಗುವ ಮಗಳಿಗೋ/ ಗೆಳತಿಗೋ ತಲೆಗೊಂದು ಮೊಟಕಿ, ಸ್ವಾರ್ಥಿಗಳಾಗಬಾರದು ನಾವು. ಹೂಗಳ ಬಗ್ಗೆ ಮಾತ್ರ ಯೋಚಿಸದೆ, ಹೂ ಗಿಡಗಳ ಬಗ್ಗೆಯೂ ಯೋಚಿಸು.

ಮಳೆ ಸುರಿಯದಿದ್ದರೆ ಗಿಡ ಒಣಗುತ್ತದೆ. ಅದೇ ಕಾರಣಕ್ಕೆ ಹೂವು ಸಿಗುವುದೇ ಇಲ್ಲ. ಆಗ ಬದುಕಿನ ಗತಿಯೇನು? ಮಳೆ ಬೀಳಬೇಕು, ಬೆಳೆ ಆಗಬೇಕು. ಹೂವು ಅರಳಬೇಕು, ನಾವು ಬಾಳಬೇಕು ಎಂದು ಸರಳವಾಗಿ ಸರ್ವೇ ಜನಾಃ ಸುಖೀನೋ ಭವಂತು ಎಂಬ ಸಾರ್ವಕಾಲಿಕ  ಸತ್ಯವನ್ನು  ಮನವರಿಕೆ ಮಾಡಿಸುತ್ತಿದ್ದಳು. ವಿಶಾಲವಾಗಿ ಚಿಂತಿಸಲು ಒಳ್ಳೆಯ ಮನಸ್ಸಿದ್ದರೆ ಸಾಕಲ್ಲವಾ ಎಂದು ಹೇಳುತ್ತಾ ಚಿಂತನೆಗೆ ಹಚ್ಚಬಲ್ಲ ಹೂವಮ್ಮ  ಇಂದು ಮೊದಲಬಾರಿಗೆ ಇನ್ನೊಬ್ಬರೊಂದಿಗೆ ತನ್ನ ನೋವನ್ನು ಹಂಚಿಕೊಂಡದ್ದನ್ನು ನೋಡಿದ್ದು.  

ಬಹುಷಃ ಆಕೆ ಹೂವಮ್ಮನ ಪರಿಚಯದವಳ್ಳೋ/ಗೆಳತಿಯೋ ಇರಬಹುದು. ಅದಕ್ಕೆ ಪ್ರತಿಯಾಗಿ ಆಕೆ – ನಿಮ್ಮ ಸೊಸೆ ಬಿಡಿ ,ನಿಮ್ಮ  ಮಗನಿಗೆ ಬುದ್ಧಿ ಬೇಡವೇ? ನೀವೇನು ಅವನ ದುಡಿಮೇಲಿ ಬದುಕುತ್ತಿಲ್ಲ. ಮಳೆ ಗಾಳಿ, ಬಿಸಿಲೆನ್ನದೆ ಇಲ್ಲಿ ಹೂ ಮಾರಿ ನಿಮ್ಮ ಬದುಕನ್ನು  ನೀವು ನೋಡಿಕೊಳ್ತಾ ಇದ್ದೀರಾ. ನಾಲ್ಕು  ಜನರನ್ನು ಕರೆಸಿ ಮಾತಾಡಿ ಎಂದಳು. ಅದಕ್ಕೆ ಪ್ರತಿಯಾಗಿ ಹೂವಮ್ಮ  ತನ್ನ  ಎಂದಿನ ನಗು ಸೂಸುತ್ತಾ,  ಈ ಸಮಸ್ಯೆಗಳೆÇÉಾ ತಾತ್ಕಾಲಿಕ. ನನ್ನ ಮಗ, ಸೊಸೆಗೆ ನನ್ನ ಮೇಲೆ ಪ್ರೀತಿ ಇÇÉಾ ಎಂದಲ್ಲ. ಅವರು ಹಾಗೂ ನಾನು ನಮ್ಮ ಪ್ರೀತಿಯನ್ನು  ವ್ಯಕ್ತಪಡಿಸುವ ರೀತಿಯಲ್ಲಿ ಸಂಘರ್ಷ ಉಂಟಾಗುತ್ತದೆ. ಕಾಲವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಹೂವನ್ನು ನನ್ನ ಕೈಗಿತ್ತಳು. ಅವಳ ಕಣ್ಣುಗಳು ಹೇಳುತ್ತಿದ್ದವು: ನನಗೆ ಮಾರಲು ಬರುವುದು ಹೂಗಳನ್ನು , ಮುಳ್ಳುಗಳನ್ನಲ್ಲ…

-ಪೂರ್ಣಿಮಾ ಹೆಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next