Advertisement

ಗ್ರಾಮೀಣ ಜನಜೀವನ ಸುಧಾರಣೆಗೆ ಸೆಲ್ಕೋ ಸಾಥ್‌

02:51 PM Mar 24, 2022 | Team Udayavani |

ಯಾದಗಿರಿ: ವಿದ್ಯುತ್‌ ಅಭಾವದಿಂದ ಗ್ರಾಮೀಣ ಭಾಗದ ಜನ ಇಂದಿಗೂ ಸಂಕಷ್ಟದ ಬದುಕು ದೂಡುತ್ತಿದ್ದು, ಸೋಲಾರ್‌ನಿಂದ ಚಲಿಸುವಂಥ ಯಂತ್ರೋಪಕರಣಗಳು ಜೀವನ ಬದಲಿಸುವ ಸಾಧನಗಳಾಗಿವೆ ಎಂದು ಸುಲೇಪೇಟ್‌ ಸೌರ ಉದ್ಯಮಿ ನಿರ್ಮಲಾ ಗಾಣಾಪುರ ಅಭಿಪ್ರಾಯಪಟ್ಟರು.

Advertisement

ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಬುಧವಾರ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜೀವನ ನಿರ್ವಹಣೆ ಜೊತೆಗೆ ಸಮಾಜದ ಇತರ ಮಹಿಳೆಯರ ಬಲರ್ವಧನೆಗೆ ಸೆಲ್ಕೊ ಸಂಸ್ಥೆ ಸಹಕಾರಿಯಾಗಿದೆ. ಮಹಿಳೆಯರ ಸಬಲೀಕರಣ, ಏಳ್ಗೆಗೆ ಸೆಲ್ಕೋ ಸಾಕಷ್ಟು ಒತ್ತು ನೀಡಿದೆ. ವಿದ್ಯುತ್‌ ಕಡಿತದಿಂದ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸೆಲ್ಕೊ ಸಂಸ್ಥೆಯು ವಿದ್ಯುತ್‌ ದೀಪ, ರೊಟ್ಟಿ ಮಾಡುವ ಯಂತ್ರಗಳು, ಝರಾಕ್ಸ್‌ ಮಷೀನ್‌, ಹೊಲಿಗೆ ಯಂತ್ರ, ಖಾರ ಕುಟ್ಟುವ ಯಂತ್ರ ಸೇರಿದಂತೆ ಸುಮಾರು 40ಕ್ಕೂ ಅಧಿಕ ಯಂತ್ರೋಪಕರಣಗಳನ್ನು ಸೋಲಾರ್‌ ಸಹಾಯದಿಂದಲೇ ನಡೆಸುತ್ತಿರುವುದು ನಿಜಕ್ಕೂ ಉಪಯುಕ್ತಕರ ಎಂದರು.

ಇಂಥ ಸೌಲಭ್ಯ ಗ್ರಾಮೀಣ ಭಾಗದ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಸಣ್ಣ ಉದ್ಯಮ ಸ್ಥಾಪಿಸಿ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸ್ವಸಹಾಯ ಸಂಘ, ಸೆಲ್ಕೋ ಸಂಸ್ಥೆ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಕಲಿಕೆ ಟ್ರಸ್ಟ್‌ ಜಿಲ್ಲಾ ಮುಖ್ಯಸ್ಥ ಗಿರೀಶ್‌ ಮಾತನಾಡಿ, ಸೋಲಾರ್‌ ಜೀವನದ ಅವಿಭಾಜ್ಯ ಅಂಗವಾಗಿದೆ. ಇದೊಂದು ಖಾಲಿಯಾಗದ ಇಂಧನ ಮೂಲ. ಸೌರ ಇಂಧನ ಮೂಲಕ ಉದ್ಯೋಗ ಸೃಜನೆಗೂ ಆದ್ಯತೆ ನೀಡಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಇದೊಂದು ಬೃಹತ್‌ ಉದ್ಯಮವಾಗಿ ಬೆಳೆಯುವುದರಲ್ಲಿ ಶಂಕೆ ಬೇಡ. ಸೆಲ್ಕೋ ಸೋಲಾರ್‌ ಲೈಟ್‌ ಸಂಸ್ಥೆ ಅನೇಕ ರೀತಿಯ ಯಂತ್ರೋಪಕರಣಗಳಿಗೆ ಸೋಲಾರ್‌ ಅಳವಡಿಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

Advertisement

ಬೆಂಗಳೂರಿನ ಸೆಲ್ಕೋ ಉಪ ಮಹಾ ಪ್ರಬಂಧಕ ಸುದೀಪ್ತ್ ಘೋಷ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಬೆಂಗಳೂರು ಸೆಲ್ಕೊ ಸಹಾಯಕ ಮಹಾ ಪ್ರಬಂಧಕ ಕರಿಸ್ವಾಮಿ ಕೆ. ನಿರೂಪಿಸಿದರು. ಕ್ಷೇತ್ರ ವ್ಯವಸ್ಥಾಪಕ ಯಲ್ಲಾಲಿಂಗ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next