Advertisement

ಸೆಲ್ಫೀ ಫೋಟೋ ಫ್ರೇಮ್ ಗೆ ಚಾಲನೆ

04:24 PM Nov 20, 2019 | Suhan S |

ಮಂಡ್ಯ: ಮಕ್ಕಳ ಸಹಾಯವಾಣಿ 1098, ನೊಡೆಲ್‌-ಬರ್ಡ್ಸ್‌ ಸಂಸ್ಥೆ ಮತ್ತು ವಿಕಸನ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಸಹಾಯ ವಾಣಿ ಸ್ನೇಹಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಸೆಲ್ಫೀ ಫೋಟೋ ಫ್ರೇಮ್ (ಸ್ವಂತಿ ಚಿತ್ರ ಫ್ರೇಮ್) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ತಹಶೀಲ್ದಾರ್‌ ಎಲ್‌.ನಾಗೇಶ್‌ ಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳ ಸಹಾಯವಾಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

18 ವರ್ಷ ವಯೋಮಿತಿ ಒಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳ  ಬಾರದು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ಕಡ್ಡಾಯವಾಗಿ ತುಂಬಿದವರಿಗೆ ಮಾತ್ರ ವಿವಾಹ ನೆರವೇರಿಸಬೇಕು ಎಂದು ಹೇಳಿದರು. ವಿಕಸನ ಸಂಸ್ಥೆಯ ಸಂಯೋಜಕ ವಿಜೇಂದ್ರ, ಆಪ್ತ ಸಮಾಲೋಚಕಿ ಮಾನಸ, ಸದಸ್ಯರಾದ ವಿನಾಯಕ್‌, ಸುಜಾತ, ಮಹೇಶ್‌, ನಂದಿನಿ, ಬರ್ಡ್ಸ್‌ ಸಂಸ್ಥೆಯ ಇಂಪನಾ, ಶೋಭಾವತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಚಿತ್ರ, ವಿನುತಕುಮಾರಿ, ಪವಿತ್ರ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next