Advertisement

ಜೀವನದ ಸಾರ್ಥಕತೆಗೆ ನಿಸ್ವಾರ್ಥ ಸೇವೆ ಅಗತ್ಯ

04:33 PM Sep 06, 2022 | Team Udayavani |

ಸೇಡಂ: ಹಿಂದುಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು ಹಿಂದುಗಳಿಗೆ ಸರ್ವಶ್ರೇಷ್ಠವಾಗಿದೆ. ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿದಾಗ ಬದುಕು ಸಾರ್ಥಕಗೊಳ್ಳಲಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಕುರುಕುಂಟಾ ಗ್ರಾಮದ ಶ್ರೀ ಸಂಗಮೇಶ್ವರ ದೇವಾಸ್ಥಾನದಲ್ಲಿ ಶ್ರಾವಣಮಾಸ ನಿಮಿತ್ತ ಹಮ್ಮಿಕೊಂಡ ಪುರಾಣ ಮಹಾಮಂಗಲ ಹಾಗೂ ಕಾಶಿ ಪೀಠದ ಜಗದ್ಗುರು ಡಾ|ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರ ತುಲಾಭಾರ, ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರಾವಣ ಮಾಸದಲ್ಲಿ ಶ್ರದ್ದೆ, ಭಕ್ತಿಯಿಂದ ಪೂಜೆ ಮಾಡಿದರೆ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ. ಹುಟ್ಟು ಸಾವುಗಳ ಮಧ್ಯೆ ಶ್ರೇಷ್ಠವಾದ ಬದುಕು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಗುರುವಿನ ಮೂಲಕ ಸಂಸ್ಕಾರ ಮತ್ತು ಶಿವದೀಕ್ಷೆ ಪಡೆದು ಬಾಳಿದರೆ ಹುಟ್ಟು ಸಾವುಗಳ ಬಂಧನದಿಂದ ಮುಕ್ತನಾಗಲು ಸಾಧ್ಯ. ಧರ್ಮದ ಬಗ್ಗೆ ಅಂತರಾಳದಿಂದ ಕೆಲಸ ಮಾಡಬೇಕು. ಸತ್ಕರ್ಮಗಳ ಮೂಲಕ ನಡೆದರೆ ಲೋಕ ಕಲ್ಯಾಣವಾಗುವುದು. ಸಮಾಜದಲ್ಲಿ ಪುಣ್ಯದ ಕೆಲಸಗಳು ಹೆಚ್ಚು ನಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ತಲಾಭಾರ ಸೇವೆ ನಡೆಯಿತು. ಚಿಮ್ಮಾ ಇದಲಾಯಿ ಹಿರೇಮಠದ ವಿಜಯಮಹಾಂತೇಶ್ವರ ಶಿವಾಚಾರ್ಯರು, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ದಿಗ್ಗಾಂವ ಸಂಸ್ಥಾನ ಹಿರೇಮಠದ ಸಿದ್ದವೀರ ಶಿವಾಚಾರ್ಯರು, ನಿಡಗುಂದಾದ ಕಂಚಾಳಕುಂಟಿ ನಂದಿಬಸವೇಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು, ಶ್ರೀ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಕೆಕೆಆರ್‌ಟಿಸಿ ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಊಡಗಿ, ಪಿಕೆಪಿಎಸ್‌ ಅಧ್ಯಕ್ಷೆ ಸಂತೋಷಿರಾಣಿ ಪಾಟೀಲ ತೆಲ್ಕೂರ, ಬಿಜೆಪಿ ತಾಲೂಕಾಧ್ಯಕ್ಷ ಪರ್ವತರೆಡ್ಡಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಲಲಿತಾ ಪವಾರ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣು ಮಹಾಗಾಂವ, ವೀರಶೈವ ಶೈಕ್ಷಣಿಕ ಕಲ್ಯಾಣ ಅಭಿವೃದ್ಧಿ ಟ್ರಸ್ಟನ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಗಣಪತರಾವ ಚಿಮ್ಮನಚೋಡಕರ್‌, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ವೀರಶೈವ ಮಹಾಸಭಾದ ಅಧ್ಯಕ್ಷ ಚಂದ್ರಶೆಟ್ಟಿ ಬಂಗಾರ, ಕಸಾಪ ತಾಲೂಕಾಧ್ಯಕ್ಷೆ ಸುಮಾ ಚಿಮ್ಮನಚೋಡಕರ್‌, ಜೆಡಿಎಸ್‌ ಮುಖಂಡ ಶಿವುಕುಮಾರ ನಿಡಗುಂದಾ, ನ್ಯಾಯವಾದಿ ಶರಣಬಸಪ್ಪ ಹಾಗರಗಿ, ನಾಗೇಂದ್ರಪ್ಪ ಸಾಹುಕಾರ ಸಿಲಾರಕೋಟ, ಶಂಕರ ಸುಲೆಗಾಂವ, ಸೂರ್ಯಕಾಂತ ಗುಗ್ಗರಿ, ನಿವೃತ್ತ ಶಿಕ್ಷಕಿ ಅಕ್ಕನಾಗಮ್ಮ ಆಡಕಿ, ಆಡಕಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮನ್ನೆ, ಅನಂತರೆಡ್ಡಿ ಪಾಟೀಲ ಬಟಗೇರಾ, ಪರ್ವತಯ್ಯಸ್ವಾಮಿ, ಜಗನ್ನಾಥರೆಡ್ಡಿ ಹಂದರಕಿ, ಶರಣು ಮೆಡಿಕಲ್‌, ಬಸವರಾಜ ಶಬಾದಕರ್‌, ತುಳಸಿರಾಮ ಪವಾರ, ಸಂಗಪ್ಪ ಕುಂಬಾರ ಇತರರಿದ್ದರು. ನಾಗಪ್ಪ ಕೊಳ್ಳಿ ಸ್ವಾಗತಿಸಿದರು. ಮುಕುಂದ ದೇಶಪಾಂಡೆ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next