Advertisement

ವೈದ್ಯರಲ್ಲಿ ನಿಸ್ವಾರ್ಥ ಸೇವೆ ಮುಖ್ಯ: ಶ್ರೀ

02:14 PM Jul 05, 2019 | Suhan S |

ಗದಗ: ವೈದ್ಯೋ ನಾರಾಯಣ ಹರಿ ಎಂದು ವೈದ್ಯರು ದೇವರಿದ್ದಂತೆ ಭೂಮಿ ಮತ್ತು ತಾಯಿ ನಂತರದ ಪಾತ್ರವನ್ನು ವೈದ್ಯರು ವಹಿಸಿರುತ್ತಾರೆ. ವಿದ್ಯಾರ್ಥಿಗಳು ವಿಕಲತೆ ಮೆಟ್ಟಿನಿಂತು ಸಾಧಕರಾಗಬೇಕು ಎಂದು ಸೊರಟೂರ-ಮಲ್ಲಸಮುದ್ರ ಫಕೀರೇಶ್ವರ ಸ್ವಾಮೀಜಿ ಹೇಳಿದರು.

Advertisement

ಅಕ್ಕಮಹಾದೇವಿ ದಿವ್ಯಾಂಗ ಹಾಗೂ ಉದ್ಯೋಗಸ್ಥ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಧರ್ಮಶ್ರೀ ಸೇವಾ ಸಂಸ್ಥೆ, ಶ್ರೀರಾಮ ಸೇವಾ ಟ್ರಸ್ಟ್‌ ಸಂಯುಕ್ತ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಟಾಮ್‌ ವಿಟ್ಟೆಕರರವರು ಮೇ 27 1998 ರಂದು ವಿಕಲತೆ ಮೆಟ್ಟಿ ನಿಂತು ಮೌಂಟ್ ಎವರೆಸ್ಟ್‌ ಹತ್ತಿದರು. ಅವರಂತೆ ವಿಕಲತೆ ಇದೆ ಎಂದು ಚಿಂತಿಸದೆ ಮೆಟ್ಟಿ ನಿಲ್ಲುವ ಛಲ ಹೊಂದಬೇಕು. ಚಿಂತೆ ಮಾಡದೆ ಚಿಂತಕರಾಗಬೇಕು ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಕ್ಕಮಹಾದೇವಿ ದಿವ್ಯಾಂಗ ಉದ್ಯೋಗಸ್ಥ ಮತ್ತು ವಿಕಲಚೇತನರ ವಸತಿ ನಿಲಯ ಚೇರಮನ್ನ ರಾಚಪ್ಪ ಹುಣಸಿಮರದ ಅವರು ಸಂಸ್ಥೆಯು 11 ವರ್ಷಗಳಿಂದ ವಿಕಲಚೇತನ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಉಚಿತ ವಸತಿ, ಊಟ ಮತ್ತು ಇತರೆ ಸೌಲಭ್ಯ ನೀಡುತ್ತಿದ್ದು, ಎಲ್ಲ ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ಮಾಡಲು ಸಂಸ್ಥೆಯು ಶ್ರಮಿಸುತ್ತಿದೆ ಎಂದರು.

ಸಂಸ್ಥೆಯಿಂದ ಖ್ಯಾತ ವೈದ್ಯರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಡಾ.ಆರ್‌.ಎನ್‌. ಗೋಡಬೋಲೆ ಮತ್ತು ಡಾ.ಸಿ.ಆರ್‌. ಗೋಡಬೋಲೆ ದಂಪತಿ ಮತ್ತು ಡಾ.ಮಾನ್ವಿ ದಂಪತಿ ಮತ್ತು ಡಾ. ದೇಸಾಯಿ ಮೇಡಂ ಹಾಗೂ ಡಾ.ಬಸವರಾಜ ತಳವಾರ, ಪ್ರೊ| ಶಂಕರ ಹುಣಸಿಮರದ ದಂಪತಿಯನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನಿತರಾದ ಡಾ.ಆರ್‌.ಎನ್‌. ಗೋಡಬೋಲೆ ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧದ ಮೌಲ್ಯದ ಬಗ್ಗೆ ತಿಳಿಸುತ್ತ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ನಿಸ್ವಾರ್ಥ ಸೇವೆ ಸಲ್ಲಿಸಬೇಕು. ವೈದ್ಯರು ಸಹನೆ, ತಾಳ್ಮೆಯಿಂದ ಹಾಗೂ ರೋಗಿಗಳು ಕೂಡಾ ಸಹನೆಯೊಂದಿಗೆ ಇರಬೇಕು ಎಂದು ಹೇಳಿದರು. ವಿಕಲಚೇತನ ವಿದ್ಯಾರ್ಥಿಗಳಿಗೆ ಸಂಸ್ಥೆ ಸೇವೆ ಸಲ್ಲಿಸುತ್ತಿರುವುದನ್ನು ಪ್ರಶಂಸಿಸಿದರು.

Advertisement

ಜಯಶುಭಾ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಮಾತನಾಡಿ, ಸಂಸ್ಥೆಯ ಕಾರ್ಯವು ಉತ್ತಮವಾಗಿದ್ದು, ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡುವ ಹುಣಸಿಮರದ ಸಂಸ್ಥೆಯು ಬಹಳ ಉತ್ತಮವಾಗಿದೆ ಎಂದರು.

ದೇಸಾಯಿ ಮೇಡ್‌ಂ ಹಾಗೂ ಡಾ| ಬಸವರಾಜ ತಳವಾರ ಮಾತನಾಡಿ, ಸಂಸ್ಥೆಯು ಉತ್ತಮ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಆರಂಭದಲ್ಲಿ ಉಜ್ವಲ ವಿದ್ಯಾರ್ಥಿನಿಯರ ಪ್ರಾರ್ಥನೆ ಗೀತೆ ಜರುಗಿತು. ಸೀತಾ ಮಜ್ಜಗಿ ನಿರೂಪಿಸಿದರು. ಸಂಗೀತಾ ವಂದಿಸಿದರು. ಅಕ್ಕಮಹಾದೇವಿ ದಿವ್ಯಾಂಗ ಉದ್ಯೋಗಸ್ಥ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯದ ಅಧಿಧೀಕ್ಷಕರಾದ ಮಲ್ಲಿಕಾರ್ಜುನ ಬಣಕಾರ, ಮೈಲಾರಿ ಗುಡಿಮನಿ, ರೇಣುಕಾ ಅಡಕರ, ಬಸವರಾಜ ಮಾಳ್ಳೋಜಿ, ಸಿದ್ದು ಹಿರೇಮಠ, ಶ್ರುತಿ ಮತ್ತು ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next