Advertisement

ಅಪ್ಪ- ಮಗನಿಂದ ಸ್ವಾರ್ಥ ರಾಜಕಾರಣ

05:18 PM Oct 27, 2018 | |

ಶಿಕಾರಿಪುರ: ಇಲ್ಲಿನ ಶಾಸಕರು ಹಾಗೂ ಅವರ ಪುತ್ರರ ವರ್ತನೆ ಸಂವಿಧಾನದಲ್ಲಿ ಬಂದ್ಯಾ ಭಾವ ಹೋದ್ಯಾ ಭಾವ ಎನ್ನುವಂತಾಗಿದೆ‌ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದರು.

Advertisement

ಶುಕ್ರವಾರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಗ್ರಾಪಂನಿಂದ ಲೋಕಸಭೆಯವರೆಗೂ ಮತದಾರರು 5 ವರ್ಷಕ್ಕಾಗಿ ರಾಜಕಾರಣಿಗಳನ್ನು ಆರಿಸಿ ಕಳಿಸುತ್ತಾರೆ. ಆದರೆ ಶಿಕಾರಿಪುರದಲ್ಲಿ ಇಲ್ಲಿನ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಅಪ್ಪನಿಗಾಗಿ ಮಗ ಮಗನಿಗಾಗಿ ಅಪ್ಪ ಎಂದು ಆರು ತಿಂಗಳಿಗೊಮ್ಮೆ ಅಧಿ ಕಾರವನ್ನು ಹಂಚಿಕೊಳ್ಳುತ್ತಾ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ. ಸಾರ್ವಜನಿಕರ ಜೊತೆ ಆಟವಾಡುತ್ತಿರುವ ಇಂತಹ ಚುನಾವಣೆಯನ್ನು ಕಂಡು ನನಗೆ ಕಣ್ಣೀರು ಬರುವಂತಾಗಿದೆ ಎಂದರು.

ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಕುಬಟೂರಿನಿಂದ ಶಿವಮೊಗ್ಗದವರೆಗೂ ನಾನು ಪಾದಯಾತ್ರೆ ಮಾಡಿದ್ದು ಶೋಕಿಗಾಗಿ ಅಲ್ಲ. ತಾಲೂಕಿನ ಸಂಪೂರ್ಣ ನೀರಾವರಿ ಯೋಜನೆ ಮಾಡಲು ಎಂದರು. ಶಿಕಾರಿಪುರದಲ್ಲಿ ಅರಣ್ಯ ಭೂಮಿ ಅರ್ಜಿಗಳು ಬಾಕಿ ಇದ್ದ ಸಮಯದಲ್ಲಿ
ನಾನು ವಿಧಾನಸಭಾ ಅಧ್ಯಕ್ಷನಾಗಿದ್ದೆ. ಆಗ ಪ್ರಾಮಾಣಿಕತೆಯಿಂದ ಹಗಲು ರಾತ್ರಿ ಶ್ರಮಪಟ್ಟು ಎರಡು ವರ್ಷಗಳಿಂದ ಕೊಳೆಯುತ್ತ ಬಿದ್ದಿದ್ದ
4 ಸಾವಿರ ಅರ್ಜಿಗಳನ್ನು ಇಥ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ಅದರಿಂದ ಅರ್ಜಿಗಳು ಶೀಘ್ರ ಇತ್ಯರ್ಥವಾಗುವ ಹಂತ ತಲುಪಿವೆ.
 ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next