Advertisement

ಡಿಜಿಟಲ್‌ ದುನಿಯಾದಲ್ಲಿ ಮಕ್ಕಳ ಕಥೆ; ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’

04:25 PM May 06, 2022 | Team Udayavani |

ತಂತ್ರಜ್ಞಾನ ಬೆಳೆದು ಅಂಗೈಯಲ್ಲೇ ಎಲ್ಲವೂ ಅನ್ನುವಂತಾಗಿದೆ. ಇನ್ನು ಮೊಬೈಲ್‌ ಎಂಬ ಮಾಯೆ ಎಲ್ಲರನ್ನು ಆವರಿಸಿದೆ. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಮೊಬೈಲ್‌ ಗೀಳು ಬಿಟ್ಟಿದ್ದಲ್ಲ. ಇಂತಹ ತಂತ್ರಜ್ಞಾನದ ಅತಿರೇಕ ಮಕ್ಕಳಲ್ಲಿ ಹೇಗೆ ಪ್ರಭಾವ ಬೀರಿದೆ ಎಂಬ ವಿಷಯವನ್ನು ಹೊತ್ತು ಒಂದು ಸಿನಿಮಾ ತಯಾರಾಗಿದೆ.

Advertisement

“ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಹೀಗೊಂದು ವಿಭಿನ್ನ ಟೈಟಲ್‌ನ ಚಿತ್ರವನ್ನು ನಿರ್ದೇಶಕ ಮಧು ಚಂದ್ರ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ನಟ, ನಿರೂಪಕ ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಏ.13 ರಂದು ಚಿತ್ರ ರಿಲೀಸ್‌ ಆಗಲಿದೆ.  ಇದರ ಭಾಗವಾಗಿ ಇತ್ತೀಚೆಗೆ ಚಿತ್ರ ತಂಡ ತನ್ನ ಟ್ರೇಲರ್‌ ಬಿಡುಗಡೆಗೊಳಿಸಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಮ್ಮ “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಕುರಿತಾಗಿ ಮಾತನಾಡುವ ನಿರ್ದೇಶಕ “ಇಂದಿನ ಮಕ್ಕಳು ಡಿಜಿಟಲ್‌ ದುನಿಯಾದಲ್ಲಿ ಮೊಬೈಲ್‌ಗೆ ತುಂಬಾ ಅಡಿಕ್ಟ್ ಆಗಿದ್ದಾರೆ. ಪಾಲಕರು ತಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳ ಕುರಿತು ಗಮನಹರಿಸಬೇಕಾದ ಕೆಲ ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂತಹ ಮಕ್ಕಳು ಮತ್ತು ಅವರ ಪಾಲಕರನ್ನು ನನ್ನ ನಿತ್ಯದ ಬದುಕಿನಲ್ಲಿ ಗಮನಿಸಿದ್ದೆ. ಈ ಸಂಗತಿಯನ್ನು ತೆರೆ ಮೇಲೆ ತರುವ ನಿಟ್ಟಿಲ್ಲಿ ಕಥೆ ಹೆಣೆದು ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಪ್ರಸ್ತುತವಾಗಿ ಸಮಾಜ ದಲ್ಲಿ ನಡೆಯುತ್ತಿರುವ ಒಂದು ಸಾಮಾನ್ಯ ವಿಷಯವಾಗಿದೆ. ಆದರೂ ಗಂಭಿರ ಸಂಗತಿಯೂ ಹೌದು. ವಿಷಯ ವಸ್ತುವನ್ನು ಒಂದು ಮನೋರಂಜನಾನ್ಮತಕ ದೃಷ್ಟಿಯಲ್ಲಿ ಕಾಮಿಡಿ ಹಾಗೂ ಡ್ರಾಮಾ ಶೈಲಿಯಲ್ಲಿ ತೋರ್ಪಡಿಸುವ ಪ್ರಯತ್ನ ನಮ್ಮದಾಗಿದೆ’ ಎಂಬುದು ಮಧುಚಂದ್ರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next