Advertisement
ಶಿರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಮ್‌ಗಾರ್ಡ್, ಕಾರ್ಕಳ ತಾಲೂಕಿನ ಬೆಳ್ಮಣ್ಣು ಮಂಜರಪಲ್ಕೆ ನಿವಾಸಿ ಸುಜಿತ್ ಶೆಟ್ಟಿ ಸುಮಾರು 10ಕ್ಕೂ ಅಧಿಕ ಯುವತಿಯರೊಂದಿಗೆ ತೆಗೆಸಿಕೊಂಡಿದ್ದ ಸೆಲ್ಫೀಗಳು ಗುರುವಾರ ಮತ್ತು ಶುಕ್ರವಾರ ಹೆಚ್ಚಿನ ವಾಟ್ಸಪ್ ಗ್ರೂಪ್‌ಗ್ಳಲ್ಲಿ ಹರಿದಾಡುತಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಕೊಂಡು ಅಮಾನತು ಮಾಡಲಾಗಿದೆ.
ಯುವತಿಯರ ಮಾನ ಹರಾಜು
ವಾಟ್ಸಪ್ ಗ್ರೂಪ್ ಗಳಲ್ಲಿ ಸೆಲ್ಫೀಗಳನ್ನು ಹರಿಯಬಿಟ್ಟಿರುವ ವ್ಯಕ್ತಿಗಳು ಯುವಕನೊಂದಿಗೆ ಯುವತಿಯರ ಫೋಟೋ ಕೂಡ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಯುವತಿಯರ ಮುಖ ಸ್ಪಷ್ಟವಾಗಿದೆ. ಪರಿಣಾಮ ವಾಟ್ಸಪ್‌ನಲ್ಲಿ 10ಕ್ಕೂ ಅಧಿಕ ಯುವತಿಯರ ಮಾನ ಹರಾಜಾದಂತಾಗಿದೆ. ಈ ಬಗ್ಗೆ ಯಾರೂ ದೂರು ಕೊಟ್ಟಿಲ್ಲವಾದರೂ ಐಟಿ ಕಾಯ್ದೆಯಂತೆ ಪೊಲೀಸರು ಯುವತಿಯರ ಫೋಟೋ ಅಪ್‌ಲೋಡ್ ಮಾಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳ ಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆತನೇ ಹರಿಯಬಿಟ್ಟನೇ?
ಸೆಲ್ಫೀ ಚಿತ್ರ ಯುವಕನ ಮೊಬೈಲ್‌ನಲ್ಲಿ ಮಾತ್ರ ಇರುತ್ತದೆ. ವಾಟ್ಸಪ್‌ಗೆ ಆತನೇ ಅಪ್‌ಲೋಡ್ ಮಾಡಿದನೇ ಅಥವಾ ಆತನ ಮೊಬೈಲಿನಿಂದ ಶೇರ್ ಮಾಡಿಕೊಂಡು ಬೇರೆಯವರು ಮಾಡಿದರೇ ಎನ್ನುವುದು ಸ್ಪಷ್ಟವಾಗಿಲ್ಲ.
Related Articles
ಪಡುಬಿದ್ರಿ ಘಟಕಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಹಿಂದೆ ಆ ಯುವಕನ ವಿರುದ್ಧ ಯಾವುದೇ ದೂರುಗಳಿರಲಿಲ್ಲ. ಇಲಾಖಾ ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ. ಪ್ರಶಾಂತ್ ಶೆಟ್ಟಿ, ಜಿಲ್ಲಾ ಕಮಾಂಡೆಂಟ್
Advertisement