Advertisement

ನನ್ನ ಪ್ರತ್ಯೇಕ ರಾಷ್ಟ್ರ ವಿಚಾರಕ್ಕೆ ನಕ್ಕವರೇ ಇಂದು ಪ್ರತ್ಯೇಕವಾಗಿ ಬದುಕುವ ಸ್ಥಿತಿ ಬಂದಿದೆ

10:18 AM Mar 17, 2020 | Hari Prasad |

ನವದೆಹಲಿ: ತಲೆಮರೆಸಿಕೊಂಡಿರುವ ವಿವಾದಾತ್ಮಕ ದೇವಮಾನವ ನಿತ್ಯಾನಂದ ಸ್ವಾಮಿ ಇದೀಗ ಕೊರೊನಾ ವೈರಸ್ ವಿಚಾರದಲ್ಲಿ ತನ್ನ ಅಭಿಪ್ರಾಯವನ್ನು ಹೊರಹಾಕಿದ್ದಾನೆ. ಮತ್ತು ಸದ್ಯ ವಿಶ್ವವನ್ನೇ ಕಂಗಾಲು ಮಾಡಿರುವ ಕೊರೊನಾ ವೈರಸ್ ಈ ಭೂಮಿಯಲ್ಲಿ ಯಾರಿಗಾದರೂ ಖುಷಿಯನ್ನು ಕೊಟ್ಟಿದ್ದರೆ ಅದು ಸ್ವಯಂಘೋಷಿತ ದೇವಮಾನವ ನಿತ್ಯಾನಂದನಿಗೆ ಮಾತ್ರ. ಇದಕ್ಕೆ ಕಾರಣ ಇಲ್ಲಿದೆ ನೋಡಿ!

Advertisement

ಅನಾಮಧೇಯ ಸ್ಥಳದಿಂದ ತನ್ನ ಸಂದೇಶವನ್ನು ರವಾನಿಸಿರುವ ನಿತ್ಯಾನಂದ, ‘ನಾನು ಹೊಸ ದೇಶ ಕೈಲಾಸವನ್ನು ಸ್ಥಾಪಿಸಿ ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಿದಾಗ ಭಾರತದಲ್ಲಿ ಹಲವಾರು ನನ್ನನ್ನು ಅಪಹಾಸ್ಯ ಮಾಡಿದರು. ಇದೀಗ ಕೊರೊನಾ ಭೀತಿಗೊಳಗಾಗಿರುವ ವಿಶ್ವವೇ ಪ್ರತ್ಯೇಕವಾಗಿ ಬದುಕುವ ಕುರಿತು ಮಾತನಾಡುತ್ತಿದೆ ಮತ್ತು ಜನರ ಮಧ್ಯೆ ಅಂತರ ಕಾಪಾಡಿಕೊಳ್ಳಲು ಕರೆ ನೀಡುತ್ತಿದೆ’ ಎಂದು ಹೇಳಿದ್ದಾನೆ. ‘ಈ ವಿಚಾರದಲ್ಲಿ ಭಗವಾನ್ ಪರಶಿವನೇ ನಮ್ಮನ್ನು ಈ ಸಂಕಟದಿಂದ ಕಾಪಾಡಿದ್ದಾನೆ’ ಎಂದು ಕೈಲಾಸ ರಾಷ್ಟ್ರದ ಪ್ರಧಾನಿ(?) ನಿತ್ಯ ಹೇಳಿಕೊಂಡಿದ್ದಾನೆ.

ನಿತ್ಯಾನಂದ ಭಾರತದಿಂದ ತಲೆತಪ್ಪಿಸಿಕೊಂಡು ಪ್ರತ್ಯೇಕವಾಗಿ ಅನಾಮಧೇಯ ಸ್ಥಳದಲ್ಲಿ ವಾಸಿಸುತ್ತಿದ್ದಾನೆ. ನಂಬಲರ್ಹ ಮೂಲಗಳು ತಿಳಿಸಿರುವಂತೆ ಇಕ್ವಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಸ್ವತಂತ್ರ ರಾಷ್ಟ್ವ ಒಂದನ್ನು ಸ್ಥಾಪಿಸಿಕೊಂಡು ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅತ್ಯಾಚಾರ, ಅಪಹರಣ ಮತ್ತು ಹಿಂಸಾ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳನ್ನು ನಿತ್ಯಾನಂದ ಭಾರತದಲ್ಲಿ ಎದುರಿಸುತ್ತಿದ್ದಾನೆ ಹಾಗೂ ಇಂಟರ್ ಪೋಲ್ ಈತನ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಸಹ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next