Advertisement

ಸ್ವರ್ಣವಲ್ಲೀ ಮಠಕ್ಕೆ 14 ದಿನಗಳ ಪ್ರವೇಶಕ್ಕೆ ಸ್ವಯಂ ನಿರ್ಬಂಧ

01:19 PM Jun 02, 2021 | Team Udayavani |

ಶಿರಸಿ : ಇಲ್ಲಿಯ ಸ್ವರ್ಣವಲ್ಲೀ ಮಠಕ್ಕೆ 14 ದಿನಗಳ ಪ್ರವೇಶಕ್ಕೆ ಸ್ವಯಂ ನಿರ್ಬಂಧ ಹೇರಲಾಗಿದೆ.

Advertisement

ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳೂ ಸೇರಿದಂತೆ ಮಠದ ಸುತ್ತಲಿನ ಮನೆಗಳ ಒಟ್ಟು ೬೧ ಜನರ ಕೋವಿಡ್ ಸೋಂಕಿನ ತಪಾಸಣೆ ಮಾಡಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಜೂ 14ರ ವರೆಗೆ ಸಾರ್ವಜನಿಕ ಪ್ರವೇಶ ಸ್ವಯಂ ನಿರ್ಬಂಧ ಮುಂದುವರಿಸಲಾಗಿದೆ ಎಂದು ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಹೆಚ್ಚು ಜನ ಸೇರಬಾರದೆಂಬ ಕಾರಣದಿಂದ ಭಕ್ತಾದಿಗಳಿಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಗುರು ದೇವರ ದರ್ಶನಕ್ಕೆ ಅವಕಾಶಕಲ್ಪಿಸುವುದು ಅಸಾಧ್ಯವಾಗಿದೆ. ಈ ವಿಷಯದಲ್ಲಿ ಶಿಷ್ಯ ಭಕ್ತರಸಹಕಾರಅತ್ಯವಶ್ಯ. ತುರ್ತಾಗಿ ಅನಿವಾರ್ಯ ಕಾರಣಗಳಿಂದ ಬರ ಬಯಸುವವರು ಕೊರೋನಾ ಪರೀಕ್ಷೆಯಲ್ಲಿ ಕರೋನಾ ಇಲ್ಲವೆಂಬ ದೃಢೀಕರಣ ಪತ್ರ ಪಡೆದು ಶ್ರೀಮಠದ ಪೂರ್ವಾನುಮತಿ ಜತೆ ಬರಬಹುದು. ಯಾವುದೇ ಕಾರಣಕ್ಕೂ ಸೋಂಕಿತರಿಗೆ ಅಥವಾ ಸೋಂಕಿತರ ಸಂಪರ್ಕದಲ್ಲಿರುವವರಿಗೆ ಅವಕಾಶವಿಲ್ಲ ಎಂದು ಪ್ರಕಟನೆ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next