Advertisement

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

01:50 AM May 19, 2024 | Team Udayavani |

ಮಂಗಳೂರು: ಯುವ ಲೇಖಕಿ ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಬೆಂಗಳೂರಿನ ಸ್ವಾಭಿಮಾನಿ ಕರ್ನಾಟಕ ವೇದಿಕೆಯ 2023ನೇ ಸಾಲಿನ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಲಭಿಸಿದೆ.

Advertisement

ಡಾ| ಸಿ. ಸೋಮಶೇಖರ್‌ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಮೇ 31ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ.

ಡಾ| ಎಚ್‌.ಎಸ್‌.ಎಂ. ಪ್ರಕಾಶ್‌ ಅನುವಾದಿತ ಕೃತಿ “ನಮ್ಮಂಥ ಬಲ್ಲಿದವರು”, ಪ್ರೊ| ಎಚ್‌.ಟಿ. ಪೋತೆ ಪ್ರವಾಸ ಕಥನ “ಬಾಬಾ ಸಾಹೇಬರ ಲಂಡನ್‌ ಮನೆಯಲ್ಲಿ’, ಫಾತಿಮಾ ರಲಿಯಾ ಕಥಾ ಸಂಕಲನ “ಒಡೆಯಲಾರದ ಒಡಪು’, ಸಂತೋಷ ನಾಯಕ ಕವನ ಸಂಕಲನ “ಹೊಸ ವಿಳಾಸದ ಹೆಜ್ಜೆಗಳು’ ಆಯ್ಕೆಯಾಗಿವೆ.

ಡಾ| ಸಿ. ಸೋಮಶೇಖರ್‌ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿಗೆ ಇಂದಿರಾ ಕೃಷ್ಣಪ್ಪ ವ್ಯಕ್ತಿಚಿತ್ರಣ “ಸಾವಿತ್ರಿ ಬಾಪುಲೆ’ ಮತ್ತು ಡಾ| ಎಂ.ಎಸ್‌. ಮಣಿ ಲೇಖನ ಸಂಕಲನ “ಗವಿಮಾರ್ಗ” ಕೃತಿಗೆ ಲಭಿಸಿದೆ.

ಪ್ರಶಸ್ತಿ ತಲಾ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಕರ್ನಾಟಕ ಲೇಖಕಿ ಸಂಘದ ಅಧ್ಯಕ್ಷ ಎಚ್‌.ಎಲ್‌. ಪುಷ್ಪಾ, ಲೇಖಕರಾದ ದ್ವಾರನಕುಂಟೆ ಪಾತಣ್ಣ ಹಾಗೂ ಡಾ| ಸತ್ಯಮಂಗಲ ಮಹಾದೇವ್‌ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next