Advertisement

Self-reliant: ಸ್ವಾವಲಂಬಿ ಸಾರಥಿ ಸಹಾಯಧನ

12:01 AM Oct 09, 2023 | Team Udayavani |

ರಾಜ್ಯ ಸರಕಾರದ ವತಿಯಿಂದ 2023ರ ಬಜೆಟ್‌ನಲ್ಲಿ ನಿರುದ್ಯೋಗ ಯುವಕರಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಸಹಾಯಧನ ನೀಡಲು ಘೋಷಣೆ ಮಾಡಿದ್ದು, ಸರಕಾರದ ವಿವಿಧ ನಿಗಮ ಮಂಡಳಿಗಳಿಂದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಾಲ ನೀಡುತ್ತದೆ. ಸದ್ಯ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ನಿರುದ್ಯೋಗ ಯುವಕರಿಗೆ ನಾಲ್ಕು ಚಕ್ರದ ವಾಹನ ಖರೀದಿಗೆ ಸಬ್ಸಿಡಿ ದರದಲ್ಲಿ ಸಹಾಯಧನ ನೀಡುತ್ತಿದೆ.

Advertisement

ಅರ್ಜಿ ಸಲ್ಲಿಕೆಗೆ ಅರ್ಹತೆ?
ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಹಾಗೂ 3ಬಿಗೆ ಸೇರಿರಬೇಕು.
ಅರ್ಜಿದಾರರ ವಯಸ್ಸು 21ರಿಂದ 45 ವರ್ಷ ಮಿತಿಯಲ್ಲಿರಬೇಕು.
ಲಘು ವಾಹನ ಚಾಲನ ಪರವಾನಿಗೆ ಹೊಂದಿರಬೇಕು
ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ, ಪಟ್ಟಣ ಪ್ರದೇಶದವರಿಗೆ 1.20 ಲಕ್ಷ ಒಳಗಿರಬೇಕು.

ನಿಗಮ ಮಂಡಳಿಯಿಂದ ಸಿಗುವ ಸಹಾಯಧನ
ಶೇ.50ರಷ್ಟು, ಗರಿಷ್ಠ ಮೊತ್ತ 3 ಲಕ್ಷ ರೂ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಸ್ವಂತ ಉದ್ಯೋಗ ಮಾಡಲು ಬಯಸುವ, ವಾಹನ ಪರವಾನಿಗೆ ಹೊಂದಿರುವ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಹಾಗೂ 3ಬಿಗೆ(ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಅರೆ- ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡು ಗೊಲ್ಲ, ಹಟ್ಟಿಗೊಲ್ಲ, ಮರಾಠ ಉಪ ಸಮುದಾಯಗಳು ಹೊರತು ಪಡಿಸಿ) ಸೇರಿದವರು ಅರ್ಜಿ ಸಲ್ಲಿಸಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಹಿಂದುಳಿದ ವರ್ಗಕ್ಕೆ ಅರ್ಹ ಫ‌ಲಾನುಭವಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಹಿಂದುಳಿದ ವರ್ಗಗಳ ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ //sevasindu.karnataka.gov.in ಮುಖಾಂತರ ಗ್ರಾಮ್‌ ಒನ್‌, ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಸೇವಾ ಕೇಂದ್ರದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿಗಮದ ವೆಬ್‌ಸೈಟ್‌ //www.dbcdc.karnataka.gov.in ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅ.31, 2023

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:  ಆಧಾರ್‌ ಕಾರ್ಡ್‌  ಪ್ಯಾನ್‌ ಕಾರ್ಡ್‌  ಜಾತಿ ಪ್ರಮಾಣ ಪತ್ರ  ಆದಾಯ ಪ್ರಮಾಣ ಪತ್ರ  ವಾಹನ ಪರವಾನಿಗೆ  ವಾಹನ ಖರೀದಿಗೆ ಪ್ರಸ್ತಾವನೆ  ಬ್ಯಾಂಕ್‌ ಖಾತೆ ಹೊಂದಿರಬೇಕು  ಮೊಬೈಲ್‌ ಸಂಖ್ಯೆ  ವರ್ಣರಂಜಿತ ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರಗಳು

ಮಂಜುನಾಥ ಕೇರಿ

Advertisement

Udayavani is now on Telegram. Click here to join our channel and stay updated with the latest news.

Next