Advertisement

ಸ್ವ ಉದ್ಯೋಗದಿಂದ ಸ್ವಾವಲಂಬನೆ

12:35 PM Jan 23, 2018 | Team Udayavani |

ಆಳಂದ: ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹುದ್ದೆಗೆ ಅಲೆದಾಡದೆ ಕೌಶಲ್ಯವುಳ್ಳ ಯುವಕರು, ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಸ್ವಾಲಂಬನೆ ಸಾಧಿಸಬೇಕು ಎಂದು ಉದ್ಯಮಿ ಕ್ಷೇತ್ರದಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಕ್ಯಾಡ್‌ಮ್ಯಾಕ್ಸ್‌ ಸಲುಶನ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅರುಣಕುಮಾರ
ಪಾಟೀಲ ಅವರು ಹೇಳಿದರು.

Advertisement

ಪಟ್ಟಣದ ಶರಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿ ಪ್ರಗತಿ ಬಂಧು 13 ಸ್ವ ಸಹಾಯ ಗುಂಪುಗಳ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲಸ ಇಲ್ಲ ಎಂದು ಸುಮ್ಮನೆ ಚಿಂತಿತರಾಗಿ ಕುಳಿತುಕೊಳ್ಳದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳಾ ಸ್ವಸಹಾಯ ಗುಂಪುಗಳ ಹೆಚ್ಚು ಕ್ರಿಯಾಶೀಲವಾದಷ್ಟು ಹೆಚ್ಚಿನ ರೀತಿಯಲ್ಲಿ ಗುಡಿ ಕೈಗಾರಿಕೆ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಮಾತನಾಡಿ, ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರಾಜ್ಯದ ವಿವಿಧ ಹಳ್ಳಿಗಳ್ಳಲಿ ಸಮಾಜಮುಖೀ ಸೇವೆ ಕಾರ್ಯಗಳು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ. ತಾಲೂಕಿನಲ್ಲಿ ಸಂಸ್ಥೆಗೆ ಉತ್ತಮ ಸಹಕಾರ ಲಭಿಸಿರುವ ಪ್ರಯುಕ್ತ ಹೆಚ್ಚಿನ ಕಾರ್ಯಕ್ರಮ ಕೈಗೊಳ್ಳಲು ಪ್ರೇರಣೆಯಾಗಿದೆ. ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸ್ಥೆ ಕಾರ್ಯಕ್ರಮಗಳ ಲಾಭಪಡೆದುಕೊಳ್ಳಿ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಸ್ವಸಹಾಯ ಸಂಘಗಳ
ಮೂಲಕ ಪ್ರತಿ ಕುಟುಂಬದ ಆರ್ಥಿಕ ಸಹಾಯವಾಗಬಲದು ಎಂದು ಹೇಳಿದರು.

Advertisement

ಸಂಸ್ಥೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಕುಮಟಾ ಮಾತನಾಡಿ, ತಾಲೂಕಿನ 137 ಗ್ರಾಮಗಳಲ್ಲಿ 2094
ಪ್ರಗತಿ ಬಂಧು ಸ್ವ ಸಹಾಯ ಗುಂಪುಗಳ ರಚನೆಯಾಗಿವೆ. ಒಟ್ಟು 19840 ಸದಸ್ಯರು ಇದ್ದಾರೆ. ನಮ್ಮ ಸಂಸ್ಥೆ ತಾಲೂಕಿನಲ್ಲಿ ಕೆಲಕಡೆ ಅಂತರ್ಜಲ ಹೆಚ್ಚಳಕ್ಕೆ ಶ್ರಮಿಸುತ್ತಿದ್ದಾರೆ. ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ
ಉಂಟಾದಾಗ ಸಂಸ್ಥೆಯಿಂದ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗಿದೆ ಎಂದು ಹೇಳಿದರು.

ವಿಎಸ್‌ಎಸ್‌ಎನ್‌ ಅಧ್ಯಕ್ಷ ಶಂಕರರಾವ ಹತ್ತಿ, ಪುರಸಭೆ ಸದಸ್ಯ ಸುನೀಲ ಹಿರೋಳಿಕರ ಮಾತನಾಡಿದರು. ಅಧ್ಯಕ್ಷ ಅಂಬಾದಾಸ ಪವಾರ, ಇನ್ನೊರ್ವ ಸದಸ್ಯ ಮಲ್ಲಪ್ಪ ಹತ್ತರಕಿ, ಅಶೋಕ ಇಟಾಮಳೆ, ಎಪಿಎಂಸಿ ಸದಸ್ಯ ರೇವಣಪ್ಪ ನಾಗೂರೆ, ಶಿವಾ ನಾಗೂರೆ, ಸಿದ್ಧಾರೂಢ ಕಂಟೆ ಇದ್ದರು. ಶರಣು ಗೋಳೆ ನಿರೂಪಿಸಿದರು. ರತ್ನಾ ಬಳಗನೂರ
ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next