Advertisement

ಸ್ವಾವಲಂಬನೆಗೆ ಆತ್ಮನಿರ್ಭರ ಸಹಕಾರಿ

05:27 PM Feb 27, 2022 | Shwetha M |

ವಿಜಯಪುರ: ಆತ್ಮನಿರ್ಭರ ಭಾರತ ಸ್ವಾವಲಂಬಿ ದೇಶ ನಿರ್ಮಾಣದಲ್ಲಿ ಸೇತುವೆಯಾಗಿ ಕೆಲಸ ಮಾಡುತ್ತಿದ್ದು ದೇಶ ಕಟ್ಟುವಲ್ಲಿ ಅತ್ಯಂತ ಸಹಕಾರಿ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ವಿ. ಹಲಸೆ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ನವದೆಹಲಿಯ ಐಸಿಎಸ್‌ಎಸ್‌ಆರ್‌ ಸಹಯೋಗದಲ್ಲಿ ಆತ್ಮ ನಿರ್ಭಾರ ಭಾರತ: ಸವಾಲುಗಳು ಮತ್ತು ಅವಕಾಶಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶದ ಸಂಪನ್ಮೂಲ ಸದ್ಬಳಕೆ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ವಿಷಯದಲ್ಲಿ ಆತ್ಮ ನಿರ್ಭರ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಪಿ.ಎಸ್‌. ಕಾಂಬಳೆ, ಆತ್ಮನಿರ್ಭರ ಭಾರತದ ಸವಾಲುಗಳು ಮತ್ತು ಅವಕಾಶಗಳು, ಸ್ವಾವಲಂಬನೆಯ ವಿಶೇಷತೆ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಬಿ.ಕೆ. ತುಳಸಿಮಾಲಾ, ಸ್ವಾವಲಂಬನೆ, ಬೆಳವಣಿಗೆಯ ಯಂತ್ರ ಹಾಗೂ ಆತ್ಮನಿರ್ಭರ ಭಾರತದ ಪ್ರಸ್ತುತ ವರ್ಷದಲ್ಲಿನ ಅದರ ಪರಿಣಾಮಕಾರಿ ಉಪಯೋಗದ ಕುರಿತು ಮಾತನಾಡಿದರು.

ಕುಲಸಚಿವ ಎಂ.ಎನ್‌. ಚೋರಗಸ್ತಿ, ಆರ್ಥಿಕ ಅಧಿಕಾರಿ ಎಸ್‌.ಬಿ. ಕಾಮಶೆಟ್ಟಿ, ಮಹಿಳಾ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು ಇದ್ದರು. ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಕಿಟ್‌ ಕೊಡುಗೆಯಾಗಿ ನೀಡಿದ ಪಂಕಜ್‌ ವಾಲೀಕಾರ ಅವರನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಎಂ. ಮದರಿ ಸ್ವಾಗತಿಸಿದರು. ಡಾ| ಸುರೇಶ ಕೆ.ಪಿ. ಪ್ರಾಸ್ತಾವಿಕ ಮಾತನಾಡಿದರು. ಪರವೀನಕೌಸರ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಡಾ| ಆರ್‌.ವಿ. ಗಂಗಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next