Advertisement
ಸದ್ಯ ಆರೋಪಿ ಕಪಾಲಿ ಮೋಹನ್ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಶೋಧ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು. ಲೇವಾದೇವಿ ವ್ಯವಹಾರ ನಡೆಸುತ್ತಿರುವ ಕಪಾಲಿ ಮೋಹನ್, ಸಾಲದ ರೂಪದಲ್ಲಿ ಸಾರ್ವಜನಿಕರಿಗೆ ಹಣ ನೀಡಿ, ಅವರಿಂದ ಅಧಿಕ ಪ್ರಮಾಣದ ಬಡ್ಡಿ ಪಡೆಯುತ್ತಿದ್ದರು. ಭದ್ರತೆಗಾಗಿ ಖಾಲಿ ಚೆಕ್ ಮತ್ತು ಆನ್ ಡಿಮ್ಯಾಂಡ್ ಪತ್ರಗಳ ಮೇಲೆ ಹೆಚ್ಚಿನ ಮೊತ್ತದ ಹಣ ಬರೆದುಕೊಂಡು ವಂಚಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸದಾಶಿವನಗರದ ಮನೆ, ಪಿ.ಜಿ.ಹಳ್ಳಿಯಲ್ಲಿರುವ ಶ್ರೀಬಾಲಾಜಿ ಫೈನಾನ್ಸ್‌ಗಳ ಮೇಲೆ ಶನಿವಾರ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಅಮಾಯಕ ಜನರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಕರ್ನಾಟಕ ಲೇವಾದೇವಿ ಕಾಯ್ದೆ-1961 ಮತ್ತು ದುಬಾರಿ ಬಡ್ಡಿ ನಿಯಂತ್ರಣ ಕಾಯ್ದೆ-2004ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಕಪಾಲಿ ಮೋಹನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ವಂಚನೆ (420) ಪ್ರಕರಣ ದಾಖಲಿಸಲಾಗಿದೆ ಎಂದರು.