Advertisement

ಸ್ವಯಂ ಔಷಧ: ಎಚ್ಚರಿಕೆ ಅಗತ್ಯ

10:41 PM Jan 06, 2020 | Sriram |

ಇತ್ತೀಚಿನ ದಿನಗಳಲ್ಲಿ ಜನರು ಸ್ವಯಂ ವೈದ್ಯರಾ ಗುತ್ತಿದ್ದಾರೆ. ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವುದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಕಾಯಿಲೆ ಉಲ್ಬಣಿಸಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಮಾತ್ರ ವೈದ್ಯರ ನೆನಪಾಗಿ ಆಸ್ಪತ್ರೆಯತ್ತ ತೆರಳುತ್ತೇವೆ.

Advertisement

ಜ್ವರ, ತಲೆನೋವು, ಮೈಕೈ ನೋವು… ಹೀಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಬಂದಾಗ ಬಹುತೇಕರು ಮೆಡಿಕಲ್‌ ಶಾಪ್‌ಗ್ಳಿಂದ ಯಾವುದೇ ವೈದ್ಯರ ಸಲಹೆ ಪಡೆಯದೆ, ಔಷಧದ ಬಗ್ಗೆ ಹೆಚ್ಚು ತಿಳಿದುಕೊಳ್ಳದೆ ಸೇವಿಸುವುದು ಸಾಮಾನ್ಯ. ಹೆಚ್ಚಿನವರು ಸಣ್ಣಪುಟ್ಟ ಕಾಯಿಲೆ ಎಂದುಕೊಂಡು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ.

ಔಷಧಗಳ ಬಗ್ಗೆ ಸರಿಯಾದ ಅರಿವಿಲ್ಲದೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾ ಗಬುಹುದು. ದೀರ್ಘ‌ ಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಬೇರೆಬೇರೆ ಔಷಧಗಳು ಬೇರೆಬೇರೆ ರೀತಿಯ ಪರಿಣಾಮವನ್ನು ಬೀರುತ್ತವೆ. ಇದರಿಂದಾಗಿ ವೈದ್ಯರ ಸಲಹೆ ಪಡೆದೇ ಔಷಧ ಸೇವಿಸುವುದು ಅಗತ್ಯ. ಅಧಿಕ ಔಷಧಗಳ ಸೇವನೆ ಯಿಂದ ಆತಂಕ, ಖನ್ನತೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಔಷಧವನ್ನು ಸರಿಯಾದ ಪ್ರಮಾಣ ಮತ್ತು ಸೂಚನೆಗಳು ಇಲ್ಲದೆ ಸೇವಿಸುವುದರಿಂದ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಪ್ರತಿರೋಧಿಸಬಹುದು. ಇದನ್ನು ಮೈಕ್ರೋಬಿಯಲ್‌ ರೆಸಿಸ್ಟೆನ್ಸ್‌ ಎನ್ನಲಾಗುತ್ತದೆ.ಸ್ವಯಂ ಔಷಧ ಸೇವನೆ ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಆ್ಯಂಟಿ ಬಯೋಟಿಕ್‌ ಎಂದುಕೊಂಡು ತತ್‌ಕ್ಷಣಕ್ಕೆ ಹತೋಟಿಗೆ ಬರುವ ಔಷಧಗಳನ್ನು ಸೇವಿಸುವುದು ಕೂಡ ಒಳಿತಲ್ಲ. ಕಾಯಿಲೆಯ ತೀವ್ರತೆ, ಎಷ್ಟು ದಿನಗಳು, ಪುನರಾ ವರ್ತನೆಯ ಆಧಾರದ ಮೇಲೆ ರೋಗ ಲಕ್ಷಣಗಳನ್ನು ಪರೀಕ್ಷಿಸಿದ ಬಳಿಕ ವೈದ್ಯರ ಸಲಹೆ ಅನುಸರಿಸಬೇಕು. ಈ ಬಗ್ಗೆ ಸರಿಯಾದ ಜಾಗೃತಿ, ಮಾಹಿತಿಯ ಅಗತ್ಯ ಪ್ರತಿಯೊಬ್ಬರಲ್ಲಿಯೂ ಇರಬೇಕು.

Advertisement

-   ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next