Advertisement

ಯೋಗದಿಂದ ಸ್ವಪ್ರೇರಣೆ, ಸ್ವಸ್ಪರ್ಧೆ, ಪರಮಾರ್ಥ ಚಿಂತನೆ

01:03 AM Nov 19, 2019 | Sriram |

ಉಡುಪಿ: ಯೋಗಾಭ್ಯಾಸದಿಂದ ಸ್ವಪ್ರೇರಣೆ, ಸ್ವಸ್ಪರ್ಧೆ ಉಂಟಾಗುತ್ತದೆ. ಸ್ವಾರ್ಥ ಚಿಂತನೆ ಅಲ್ಲ, ಪರಮಾರ್ಥ ಚಿಂತನೆ ಮೂಡುತ್ತದೆ ಎಂದು ಬಾಬಾ ರಾಮದೇವ್‌ ಹೇಳಿದರು.

Advertisement

ಉಡುಪಿಯಲ್ಲಿ ಸೋಮವಾರ ಮೂರನೆಯ ದಿನದ ಯೋಗ ಶಿಬಿರದಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಯೋಗಾಸನ ಮಾಡುತ್ತಿದ್ದರೆ ಇನ್ನಾರೋ ಪ್ರೇರಣೆ, ಸ್ಫೂರ್ತಿ ನೀಡಬೇಕಾಗಿಲ್ಲ. ತನ್ನೊಳಗೇ ಜೀವನ ಸ್ಫೂರ್ತಿ ಉಂಟಾಗುತ್ತದೆ. ಸ್ಪರ್ಧೆ ಇನ್ನೊಬ್ಬರೊಂದಿಗೆ ಮಾಡುವುದಲ್ಲ. ತಮ್ಮೊಳಗೇ ಸ್ಪರ್ಧೆ ಮಾಡುವ ಸ್ಥಿತಿ ಬರುತ್ತದೆ. ಹೀಗೆಂದ ಮಾತ್ರಕ್ಕೆ ಸ್ವಾರ್ಥಿಗಳೆಂದು ಅರ್ಥವಲ್ಲ. ಪಾರಮಾರ್ಥಿಕ ಚಿಂತನೆ ವ್ಯಕ್ತಿಗಳಲ್ಲಿ ಮೂಡುತ್ತದೆ.

ಯೋಗದಿಂದ ಕ್ರಿಯಾಶುದ್ಧಿ, ಜ್ಞಾನಶುದ್ಧಿ ಸಾಧನೆಯಾಗುತ್ತದೆ. ಬೆಳಗ್ಗೆ ಬ್ರಾಹ್ಮಿà ಮುಹೂರ್ತದಲ್ಲಿ ಎದ್ದು ಯೋಗಾಭ್ಯಾಸ ನಡೆಸಿದರೆ ಕಳ್ಳರು, ಮದ್ಯಮಾನಿಗಳು, ತಪ್ಪೆಸಗುವವರು, ಅವಿದ್ಯಾವಂತರು ಇಲ್ಲವಾಗುತ್ತಾರೆ. ಇಡೀ ಭಾರತದಲ್ಲಿ ಎಲ್ಲರೂ ಹೀಗೆ ಮಾಡಿದರೆ ಆದರ್ಶ ಭಾರತ ನಿರ್ಮಾಣವಾಗುತ್ತದೆ ಎಂದರು.
ಯೋಗ ಸಾಧನೆಯಿಂದ ಪೂರ್ಣ ವಿವೇಕ, ಭಕ್ತಿ, ಸಮರ್ಪಣ ಮನೋಭಾವ ಉಂಟಾಗುತ್ತದೆ. ವ್ಯಕ್ತಿಗಳ ಮುಖದಲ್ಲಿ ಸದಾ ಪ್ರಸನ್ನತೆ ಇರಬೇಕು. ಇದು ಸಾಧ್ಯವಾಗಲು ನಿತ್ಯಯೋಗಾಭ್ಯಾಸಿಯಾಗಬೇಕು. ನಮ್ಮ ಆಚಾರ ವಿಚಾರ ಪವಿತ್ರ ಆಗಬೇಕು. ಯೋಗವೆನ್ನುವುದು ಜೀವನಶೈಲಿ ಎಂದು ರಾಮದೇವ್‌ ಹೇಳಿದರು.

ಮೂರನೆಯ ದಿನವೂ ಜನರ ಯೋಗೋತ್ಸಾಹ ಕುಗ್ಗಿರಲಿಲ್ಲ. ಬೆಳಗ್ಗೆ ಐದು ಗಂಟೆಗೆ ಯೋಗ ಶಿಬಿರ ಆರಂಭವಾಗುವುದಾದರೂ ಜನರು ದೂರದೂರುಗಳಿಂದ ಸಮಯದೊಳಗೇ ಶಿಬಿರ ಸ್ಥಾನದಲ್ಲಿರುತ್ತಿದ್ದುದು ವಿಶೇಷ. ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಸಕ ವಿ.ಸುನೀಲ್‌ಕುಮಾರ್‌, ಗಣ್ಯರಾದ ನಾಗರಾಜ ಬಲ್ಲಾಳ್‌, ರಾಮಕೃಷ್ಣ ಶರ್ಮ ಬಂಟಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ಯೋಗಿ ಬನೋ ಪವಿತ್ರ ಬನೋ!
ಯೋಗದಿಂದ ಏನೇನು ಪಾಸಿಟಿವ್‌ನೆಸ್‌ ಬೆಳವಣಿಗೆ ಆಗುತ್ತದೆ ಎಂದು ರಾಮದೇವ್‌ ವಿವರಿಸುತ್ತಿದ್ದಂತೆ “ಯೋಗಿ ಬನೋ ಪವಿತ್ರ ಬನೋ| ಜೀವನ್‌ ಮೇ ಸಚ್ಚರಿತ್ರ ಬನೋ||’ ಎಂಬ ಹಾಡನ್ನು ಹಾಡುಗಾರರು ಹಾಡಿದರು.

Advertisement

ಸಂಸ್ಕೃತ – ಶಾಸ್ತ್ರೀಯ ಹಿನ್ನೆಲೆಯಲ್ಲಿ
ಅಧ್ಯಯನ ಮಾಡಿ
ಆಯುರ್ವೇದ ಒಂದು ಮಹಾ ವಿಜ್ಞಾನ. ಆದರೆ ಕೇವಲ ವೈಜ್ಞಾನಿಕ ಹಿನ್ನೆಲೆಯಲ್ಲಿ ಅದರ ಅಧ್ಯಯನ ನಡೆಸಿದರೆ ಪ್ರಯೋಜನವಿಲ್ಲ . ಆಯುರ್ವೇದವನ್ನು ಅದರ ಶಾಸ್ತ್ರೀಯ, ಸಂಸ್ಕೃತ ಭಾಷೆಯ ಗಂಭೀರ ಅರಿವಿನ ಆಧಾರದಲ್ಲಿಯೇ ಅಧ್ಯಯನ ನಡೆಸಬೇಕು. ಆದರೆ ಪ್ರಸ್ತುತ ಆಯುರ್ವೇದವನ್ನು ವೈಜ್ಞಾನಿಕ ನೆಲೆಯಲ್ಲಿ ಮಾತ್ರ ಕಲಿಯುತ್ತಿ¨ªಾರೆ. ಇದು ಶುದ್ಧ ತಪ್ಪು ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದರು.

ಉಡುಪಿಯಲ್ಲಿ ನಡೆಯುತ್ತಿರುವ ಯೋಗೋತ್ಸವದ ಅಂಗವಾಗಿ ರವಿವಾರ ಬೆಳಗ್ಗೆ ಯೋಗ ಶಿಬಿರ ನಡೆಸಿಕೊಟ್ಟ ಬಳಿಕ ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ ಪತಂಜಲಿ ಯೋಗಪೀಠ, ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಹರಿದ್ವಾರ ಇದರ ಉಡುಪಿ ಜಿÇÉಾ ಘಟಕದ ಮುಖಂಡರು ಪದಾಧಿಕಾರಿಗಳು ಹಾಗೂ ಯೋಗಶಿಬಿರದ ಕಾರ್ಯಕರ್ತರ ಸಭೆಯಲ್ಲಿ ಉಡುಪಿ ಎಸ್‌.ಡಿ.ಎಂ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ಆಯುರ್ವೇದವೂ ಸೇರಿದಂತೆ ಭಾರತದ ಪ್ರಾಚೀನ ಶಾಸ್ತ್ರ ಮತ್ತು ವಿದ್ಯೆಗಳು ಅತ್ಯಂತ ವೈಜ್ಞಾನಿಕವಾಗಿದ್ದು ಅವೆಲ್ಲವೂ ಸಂಸ್ಕೃತ ಭಾಷೆಯ ಮೌಲಿಕ ಸ್ಪರ್ಶ ಪಡೆದಿವೆ. ಆದ್ದರಿಂದ ಸಂಸ್ಕೃತದ ಅಧ್ಯಯನ ನಮಗೆಲ್ಲ ಅತ್ಯಂತ ಅವಶ್ಯವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next