Advertisement
ಬೆವರಿನಲ್ಲಿ ತೊಯ್ದುಕೊಂಡೇ ಕೆಲಸ ಮಾಡುತ್ತೇವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರೋಗಿಗಳ ಸೇವೆಯಲ್ಲಿ ಧನ್ಯತಾ ಭಾವವಿದೆ’
ಆರೋಗ್ಯ ಇಲಾಖೆ ನಮಗೆ ಎಲ್ಲ ರೀತಿಯ ಸುರಕ್ಷಾ ಕಿಟ್‌ಗಳನ್ನು ಒದಗಿಸಿದೆ. ತಲೆಯಿಂದ ಪಾದದವರೆಗೂ ಮುಚ್ಚುವ ದಿರಿಸುಗಳು ಅದರಲ್ಲಿವೆ. ಲೆಗ್ಗಿಂಗ್ಸ್, ಇಡೀ ದೇಹ ಮುಚ್ಚುವ ಗೌನ್, ಅದರ ಮೇಲೆ ಪ್ಲಾಸ್ಟಿಕ್ ಕವರ್ ಮಾದರಿಯ ಇನ್ನೊಂದು ದಿರಿಸು, ಗಾಗಲ್ಸ್, ಮಾಸ್ಕ್, ಗ್ಲೌಸ್ ಸೇರಿದಂತೆ ಐದಾರು ದಿರಿಸುಗಳನ್ನು ಧರಿಸಿಯೇ ದಿನನಿತ್ಯವೂ ಚಿಕಿತ್ಸೆಗೆ ತೆರಳಬೇಕು ಎನ್ನುತ್ತಾರೆ.
Related Articles
Advertisement
ಫೋನ್‌ನಲ್ಲಿ ವಿಚಾರಣೆಇತರ ರೋಗಿಗಳಂತೆ ಆಗಾಗ್ಗೆ ಹೋಗಿ ಕೋವಿಡ್ ರೋಗಿಗಳನ್ನು ವಿಚಾರಿಸುವುದಕ್ಕೆ ಆಗುವುದಿಲ್ಲ. ಕೌಂಟರ್‌ನಲ್ಲಿರುವ ದೂರವಾಣಿ ಸಂಖ್ಯೆಯನ್ನು ಪ್ರತಿ ರೋಗಿಗೂ ನೀಡಲಾಗುತ್ತದೆ. ಅವರಿಗೆ ಆಹಾರ, ಬಾಯಾರಿಕೆ ಅಗತ್ಯವಿದ್ದಲ್ಲಿ ಅವರೇ ಕರೆ ಮಾಡುತ್ತಾರೆ. ಸಿಬಂದಿಯೂ ಆಗಾಗ ಯೋಗಕ್ಷೇಮ ವಿಚಾರಿಸುತ್ತಾರೆ. ಆಸ್ಪತ್ರೆಯಲ್ಲೂ ಸ್ನಾನ; ಮನೆಯಲ್ಲೂ ಸ್ನಾನ
ಕೆಲಸ ಮುಗಿದ ತತ್‌ಕ್ಷಣ ಆಸ್ಪತ್ರೆಯಲ್ಲೇ ಸ್ನಾನ ಮಾಡುತ್ತೇವೆ. ಸಮವಸ್ತ್ರವನ್ನು ಹೈಪೋಕ್ಲೋರೈಡ್‌ಗೆ ಹಾಕಿ ರೋಗಾಣು ಮುಕ್ತಗೊಳಿಸಿ ಮನೆಗೆ ಹೋಗುತ್ತೇವೆ. ನೇರ ಬಚ್ಚಲು ಮನೆಗೆ ಹೋಗಿ ಮತ್ತೆ ಸ್ನಾನ ಮಾಡಿ ಬಟ್ಟೆಯನ್ನೆಲ್ಲ ಬಿಸಿನೀರಿನಲ್ಲಿ ತೊಳೆದ ಬಳಿಕವಷ್ಟೇ ಮನೆಯೊಳಗಡೆ ಹೋಗುತ್ತೇವೆ. ನಮ್ಮ ಮನೆಯಲ್ಲಿ ಪತಿ ಮತ್ತು ಮಗಳು ಇದ್ದಾರೆ. ಅವರೊಂದಿಗೆ ಸಾಮಾಜಿಕ ಅಂತರದಲ್ಲೇ ಇರುತ್ತೇನೆ ಎಂದು ತಮ್ಮ ಇತ್ತೀಚಿನ ದಿನಚರಿ ಬಗ್ಗೆ ಶಕಿಲಾ ವಿವರಿಸುತ್ತಾರೆ.