Advertisement

ಆತ್ಮಾಭಿಮಾನ; ಬಯೋಪಿಕ್‌ ಸಿನಿಮಾ ಜಮಾನ

06:00 AM Jun 22, 2018 | |

ಬಾಲಿವುಡ್‌ನ‌ಲ್ಲಿ ಬಯೋಪಿಕ್‌ಗಳ ದೊಡ್ಡ ಟ್ರೆಂಡ್‌ ಶುರುವಾಗಿಬಿಟ್ಟಿದೆ. ಕೆಲವು ವರ್ಷಗಳ ಹಿಂದೆ ಮಿಲ್ಕಾಸಿಂಗ್‌ ಅವರ ಜೀವನವನ್ನಾಧರಿಸಿದ “ಭಾಗ್‌ ಮಿಲ್ಕಾ ಭಾಗ್‌’ ಗೆದ್ದಿದ್ದೇ ಗೆದ್ದಿದ್ದು, ಅಲ್ಲಿಂದ ಬಯೋಪಿಕ್‌ಗಳ ಸರಮಾಲೆ ಶುರುವಾಗಿಬಿಟ್ಟಿತು. ಈ ಟ್ರೆಂಡ್‌ ಬರೀ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಬೇರೆ ಭಾಷೆಯ ಚಿತ್ರಗಳ ಕಡೆಗೂ ಬಂದಿದೆ. ಈಗಾಗಲೇ ತೆಲುಗಿನಲ್ಲಿ ಕಳೆದ ತಿಂಗಳಷ್ಟೇ ಮೊದಲ ಬಯೋಪಿಕ್‌ ಬಿಡುಗಡೆಯಾಗಿದೆ.

Advertisement

ದಿವಂಗತ ನಟಿ ಸಾವಿತ್ರಿ ಅವರ ಜೀವನವನ್ನಾಧರಿಸಿದ “ಮಹಾನಟಿ’ ಎಂಬ ಚಿತ್ರವು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಮರಾಠಿಯಲ್ಲಿ ದಾದಾ ಸಾಹೇಬ್‌ ಫಾಲ್ಕೆ ಅವರ ಕುರಿತಾದ “ಹರಿಶ್ಚಂದ್ರಾಚಿ ಫ್ಯಾಕ್ಟರಿ’, ನಟ ಭಗವಾನ್‌ ಅವರ ಕುರಿತ “ಎಕ್‌ ಅಲಬೇಲ’ ಬಿಡುಗಡೆಯಾಗಿ ಗೆದ್ದಿವೆ. ಮಲಯಾಳಂ ಚಿತ್ರರಂಗದ ಜನಕಜೆ.ಸಿ. ಡೇನಿಯಲ್‌ ಅವರ ಬದುಕಿನ ಕುರಿತಾದ “ಸೆಲ್ಯುಲಾಯ್ಡ’ ಎಂಬ ಚಿತ್ರ ಬಂದಿದೆ. ಇನ್ನು ಈ ವಿಷಯದಲ್ಲಿ ಕನ್ನಡವೂ ಹಿಂದೆ ಬಿದ್ದಿಲ್ಲ. ಬಯೋಪಿಕ್‌ ಚಿತ್ರಗಳು ದೊಡ್ಡ ಮಟ್ಟದಲ್ಲದಿದ್ದರೂ ಆಗೊಂದು ಈಗೊಂದು ಬಿಡುಗಡೆಯಾಗುತ್ತಲೇ ಇವೆ …

ಈ ವರ್ಷ ಬಾಲಿವುಡ್‌ನ‌ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನೊಮ್ಮೆ ನೋಡಿದರೆ, ಅದರಲ್ಲಿ “ಸಂಜು’, “ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’, “ಥ್ಯಾಕರೆ’, “ಗೋಲ್ಡ್‌’ … ಹೀಗೆ ಸಾಕಷ್ಟು ಚಿತ್ರಗಳು ಸಿಗುತ್ತವೆ. ವಿಶೇಷ ಮತ್ತು ವಿಚಿತ್ರವೆಂದರೆ, ಈ ಎಲ್ಲಾ ಚಿತ್ರಗಳೂ ಬಯೋಪಿಕ್‌ ಚಿತ್ರಗಳು.

ಬಯೋಪಿಕ್‌ ಎಂದರೇನು ಎಂಬ ಪ್ರಶ್ನೆ ಬೇಡ. ಸರಳವಾಗಿ ಹೇಳಬೇಕು ಎಂದರೆ ಅದು ಜೀವನ ಚರಿತ್ರೆ. ಬಯೋಗ್ರμಯ ಸರಳ ರೂಪವೇ ಈ ಬಯೋಪಿಕ್‌. ಸದ್ಯಕ್ಕೆ ಬಾಲಿವುಡ್‌ನ‌ಲ್ಲಿ ನಡೆಯುತ್ತಿರುವುದು ಇದೇ ಆತ್ಮಚರಿತ್ರೆ ಅಥವಾ ಬಯೋಪಿಕ್‌ಗಳ ಟ್ರೆಂಡ್‌ ಎಂದರೆ ತಪ್ಪಿಲ್ಲ.

ಈ ಬಯೋಪಿಕ್‌ಗಳು ಯಾವುದೇ ಚಿತ್ರರಂಗಕ್ಕೂ ಹೊಸದೇನಲ್ಲ. ಆಯಾ ಪ್ರಾಂತ್ಯದ ಮಹನೀಯರ ಕುರಿತಾದ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ, ಎಲ್ಲಾ ಕಾಲಕ್ಕೂ ಬರುತ್ತಿದ್ದವು. ಕನ್ನಡದಲ್ಲಿಯೇ ತೆಗೆದು ಕೊಂಡರೆ, ಇದುವರೆಗೂ ಹಲವು ಬಯೋಪಿಕ್‌ ಚಿತ್ರಗಳು ಬಂದಿವೆ. ಆದರೆ, ಒಂದೇ ಹೊಸದು ಎಂದರೆ ಈ ಬಯೋಪಿಕ್‌ ಎಂಬ ಹೆಸರು. ಮುಂಚೆಲ್ಲಾ ಈ ತರಹದ ಚಿತ್ರಗಳು ಐತಿಹಾಸಿಕ, ಭಕ್ತಿ ಪ್ರಧಾನ ಚಿತ್ರಗಳ ಪಟ್ಟಿಗೆ ಸೇರುತ್ತಿದ್ದವು. ಆದರೆ, ಅವೆಲ್ಲಾ ಆತ್ಮಚರಿತ್ರೆಗಳೇ ಆಗಿದ್ದವು.

Advertisement

ಉದಾಹರಣೆಗೆ, “ರಣಧೀರ ಕಂಠೀರವ’,”ಇಮ್ಮಡಿ ಪುಲಕೇಶಿ’, “ಶ್ರೀ ಕೃಷ್ಣದೇವರಾಯ’ ಮುಂತಾದ
ಚಿತ್ರಗಳನ್ನು ಐತಿಹಾಸಿಕ ಚಿತ್ರಗಳ ಪಟ್ಟಿಗೆ ಸೇರಿಸಲಾಗುತಿತ್ತು. ಇನ್ನು ದಾಸರ, ಸಂತರ ಕುರಿತಾದ ಚಿತ್ರಗಳು ಭಕ್ತಿಪ್ರಧಾನ ಚಿತ್ರಗಳ ಸಾಲಿಗೆ ಸೇರಿಸಲಾಗುತಿತ್ತು. ಆದರೆ, ಎಲ್ಲಾ ಚಿತ್ರಗಳೂ ಒಂದರ್ಥದಲ್ಲಿ ಬಯೋಪಿಕ್‌ಗಳೇ. ಏಕೆಂದರೆ, ಆ ಚಿತ್ರಗಳಲ್ಲಿ ಆ ಮಹನೀಯರ ಜೀವನ, ಸಾಧನೆ, ಸಾಹಸಗಳ ಕುರಿತಾಗಿಯೇ ಹೇಳಲಾಗುತಿತ್ತು. ಆದರೆ,
ಆ ಸಂದರ್ಭದಲ್ಲಿ ಈ ತರಹ ಬಯೋಪಿಕ್‌ ಎಂಬ ಪದವಿರಲಿಲ್ಲ. ಬಹುಶಃ ಇವೆಲ್ಲಾ ಶುರುವಾಗಿದ್ದು “ಭಾಗ್‌ ಮಿಲ್ಕ ಭಾಗ್‌’ ಚಿತ್ರದ ನಂತರವೇ ಎಂದರೆ ತಪ್ಪಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ, ಕನ್ನಡದಲ್ಲಿ ಖ್ಯಾತ ಸಂತರ, ಶರಣರ, ದಾಸರ,
ರಾಜರ, ಸಿದ್ಧಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಕುರಿತ ಚಿತ್ರಗಳು ಬಂದಿವೆ. ಅಷ್ಟೇ ಅಲ್ಲ, ಕುಖ್ಯಾತರ, ರೌಡಿಗಳ ಕುರಿತಾದ ಚಿತ್ರಗಳೂ ಬಂದಿವೆ. ಬಯೋಪಿಕ್‌  ಸೇರುವ ಆತ್ಮಚರಿತ್ರೆ ಚಿತ್ರಗಳ ಕುರಿತಾಗಿ ಹುಡುಕಹೊರಟರೆ ಹಲವು ಸಿನಿಮಾಗಳು ಸಿಗುತ್ತವೆ.

“ಅಮರಶಿಲ್ಪಿ ಜಕಣಾಚಾರಿ’, “ಭಕ್ತ ಕನಕದಾಸ’, “ಶ್ರೀ ಪುರಂದರ ದಾಸರು’, “ಗಾನಯೋಗಿ ಪಂಚಾಕ್ಷರಿ ಗವಾಯಿ’,”ರಸಋಷಿ ಕುವೆಂಪು’, “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’,”ಸಂತ ಶಿಶುನಾಳ ಷರೀಫ‌’, “ಕ್ರಾಂತಿಯೋಗಿ ಬಸವಣ್ಣ’, “ಶಿವಯೋಗಿ ಶ್ರೀ ಪುಟ್ಟಜಯ್ಯ’,”ಮಹಾಶರಣ ಹರಳಯ್ಯ’, “ಅಲ್ಲಮ’, “ಬಾಲಕ ಅಂಬೇಡ್ಕರ್’, “ಡಾ.ಬಿ.ಆರ್‌. ಅಂಬೇಡ್ಕರ್‌’,”ರಮಾಬಾಯಿ’, “ಭಗವಾನ್‌ ಶ್ರೀ ಸಾಯಿಬಾಬ’,”ಮಹಾವೀರ ಮಾಚಿದೇವ’, “ಅಬ್ಬೆ ತುಮಕೂರು ಸಿದಟಛಿಪುರುಷ ವಿಶ್ವರಾಧ್ಯರು’,”ಕಬೀರ’ ಸೇರಿದಂತೆ ಹಲವು ಚಿತ್ರಗಳನ್ನು ಹೆಸರಿಸಬಹುದು. ನಟಿ ಕಲ್ಪನಾ ಕುರಿತ “ಅಭಿನೇತ್ರಿ’ ಎಂಬ ಬಯೋಪಿಕ್‌ ಬಂದಿತ್ತು.

ಇನ್ನು ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಮಹನೀ ಯರ ಕುರಿತ ಹಲವು ಚಿತ್ರಗಳು 
ಬಿಡುಗಡೆಯಾಗುತ್ತಿದ್ದು,”ಕ್ರಾಂತಿವೀರ ಮಹಾದೇವರು’ ಸೇರಿದಂತೆ ಕೆಲವು ಚಿತ್ರಗಳು ನಿರ್ಮಾಣವಾಗುತ್ತಿವೆ.

ಇತ್ತಿàಚಿನ ದಿನಗಳಲ್ಲಿ ದೊಡ್ಡ ಸುದ್ದಿ ಮಾಡಿದ ಬಯೋಪಿಕ್‌ ಎಂದರೆ, ಅದು ದಿವಂಗತ ನಟಿ ಕಲ್ಪನಾ ಅವರ ಕುರಿತಾದ
“ಅಭಿನೇತ್ರಿ’. ಪೂಜಾ ಗಾಂಧಿ ಅಭಿನಯದ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದೆರೆ, ಜನ ಇಟ್ಟಿದ್ದ
ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರ ಮೂಡಿ ಬರಲಿಲ್ಲ. ಮಿಕ್ಕಂತೆ ಸರ್‌.ಎಂ. ವಿಶ್ವೇಶ್ವರಯ್ಯನವರ ಕುರಿತು ಒಂದು ಚಿತ್ರ
ನಿರ್ಮಾಣವಾಗಲಿದೆ ಎಂಬ ಸುದ್ದಿ ಹಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಕಾರಣಾಂತರಗಳಿಂದ ಆ ಚಿತ್ರ
ನಿರ್ಮಾಣವಾಗಲೇ ಇಲ್ಲ. 

ಈಗಲೂ ಕನ್ನಡದ ಖ್ಯಾತ ಗಾಯಕ ದಿವಂಗತ ಪಿ. ಕಾಳಿಂಗರಾಯರ ಕುರಿತಾಗಿ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇದೆ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ಅವರು ನಿರ್ಮಿಸಿದರೆ,
ಹಂಸಲೇಖ ಅವರ ಸಂಗೀತ ಸಂಯೋಜನೆ ಇರುತ್ತದಂತೆ. ಒಟ್ಟಿನಲ್ಲಿ ಬರೀ ರೀಲ್‌ ನಾಯಕರ ಹೀರೋಯಿಸಂ ನೋಡಿದ್ದ ಪ್ರೇಕ್ಷಕರಿಗೆ ಇಂದು ಬಯೋಪಿಕ್‌ಗಳ ಮೂಲಕ ರಿಯಲ್‌ ಹೀರೋಗಳ ಜೀವನವನ್ನು, ಆಗಿನ ಕಾಲಘಟ್ಟವನ್ನು, ಅವರು ನೀಡಿರುವ ಸಂದೇಶವನ್ನು ತೆರೆಯ ಮೇಲೆ ನೋಡುವುದಕ್ಕೆ ಅವಕಾಶ ಸಿಗುತ್ತಿದೆ. ಈ ದೆಸೆಯಲ್ಲಿ ಇನ್ನಷ್ಟು ರಿಯಲ್‌ ಹೀರೋಗಳ ದರ್ಶನ ಸಿನಿಮಾಗಳ ಮೂಲಕ ಆಗುತ್ತದಾ ನೋಡಬೇಕು.

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next