Advertisement

ಕರ್ಮಫ‌ಲ ಶಿಕಣದಿಂದ ಆತ್ಮೋನ್ನತಿ; ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಕರುಣ

06:05 PM Jul 05, 2024 | Team Udayavani |

ಮಣಿಪಾಲ: ಮನುಷ್ಯನಿಗೆ ಕರ್ಮಫ‌ಲ ಶಿಕ್ಷಣದಿಂದ ಆತ್ಮೋನ್ನತಿಯ ಜ್ಞಾನೋದಯ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ವಿ.ವಿ.ಯು ಧರ್ಮ ಸಂಸ್ಕಾರದ ಶಿಕ್ಷಣದಲ್ಲಿ ಕರ್ಮಫ‌ಲ ಶಿಕ್ಷಣವನ್ನು ವಿದ್ಯೆಯ ರೂಪದಲ್ಲಿ ಜಗತ್ತಿನಾದ್ಯಂತ ಕಲಿಸುತ್ತಿದೆ ಎಂದು ಮೌಂಟ್‌ ಅಬುವಿನ ಮ್ಯಾನೇಜ್‌ಮೆಂಟ್‌ ಕಮಿಟಿ ಮೆಂಬರ್‌ ಆಫ್ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯ, ಟ್ರಸ್ಟಿ ಉಡುಪಿ ಜಿಲ್ಲೆಯ ನಡೂರು ಮೂಲದ ಕರುಣಾಕರ್‌ ಶೆಟ್ಟಿ (ಬಿ.ಕೆ.ಕರುಣ)ಹೇಳಿದರು.

Advertisement

ಬುಧವಾರ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮನುಷ್ಯ ಸತ್ತ ಅನಂತರ ಬರಿಗೈನಲ್ಲಿ ತೆರಳಿದ ಎನ್ನುತ್ತಾರೆ. ಆದರೆ ಆತನೊಂದಿಗೆ  ಪಾಪ ಮತ್ತು ಪುಣ್ಯಗಳು ಜತೆಗಿರುವುದು ಸತ್ಯ. ಜಗತ್ತಿನಲ್ಲಿ ಹಣ, ವ್ಯಕ್ತಿತ್ವ ಸಂಪಾದನೆಯನ್ನೇ ದೊಡ್ಡ ವಿಚಾರ ಎಂಬಂತೆ ತಿಳಿದಿದ್ದೇವೆ. ಇದಕ್ಕಿಂತ ಮಹತ್ವದ್ದು ಆತ್ಮೋನ್ನತಿಯಾಗಿದೆ.

ದೇವರು ಒಬ್ಬ ಎಂಬ ಜ್ಞಾನದಲ್ಲಿ ಬದುಕು ಸಾಗಬೇಕು. ಭಗವಂತ ಈಶ್ವರನು ನಮ್ಮೆಲ್ಲರ ಆತ್ಮಗಳ ತಂದೆಯಾಗಿದ್ದಾರೆ ಎಂದು
ವಿಶ್ಲೇಷಿಸಿದರು. ಪ್ರಸ್ತುತ ಬ್ರಹ್ಮಾಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯ 140 ದೇಶಗಳಲ್ಲಿ ಶಾಖೆಗಳನ್ನು ಹೊಂದಿ ಆಧ್ಯಾತ್ಮ ಶಿಕ್ಷಣ ನೀಡುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಇಂದಿನ ಒತ್ತಡ ಜೀವನದಲ್ಲಿ ಅಗತ್ಯವಾಗಿ ಬೇಕಿದೆ. ಆತ್ಮ ಜ್ಞಾನದ ಜತೆಗೆ ಶಾರೀರಿಕ ಆರೋಗ್ಯ ಜಾಗೃತಿಯ ಬಗ್ಗೆಯೂ ಸಂಸ್ಥೆ ಕೆಲಸ ಮಾಡುತ್ತಿದ್ದು, ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ಜವಾಬ್ದಾರಿ
ಕೋಟ್ಯಂತರ ಮಂದಿ ಅನುಯಾಯಿಗಳನ್ನು ಹೊಂದಿರುವ ಪ್ರಜಾಪಿತ ಬ್ರಹ್ಮಾಕುಮಾರೀಸ್‌ ಸಂಸ್ಥೆಯಲ್ಲಿ ಆರಂಭದಿಂದಲೂ ಇಲ್ಲಿಯವರೆಗೂ ಮಾಧ್ಯಮ ಪ್ರಚಾರ ವಿಭಾಗದಲ್ಲಿ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಪ್ರಸ್ತುತ ಮೌಂಟ್‌ ಅಬುವಿನ ಮ್ಯಾನೇಜ್‌ಮೆಂಟ್‌ ಕಮಿಟಿ ಮೆಂಬರ್‌ ಹಾಗೂ ಟ್ರಸ್ಟಿಯಾಗಿದ್ದಾರೆ. ಸಂಸ್ಥೆಯ ಜಾಯಿಂಟ್‌ ಸೆಕ್ರೇಟರಿ ಜನರಲ್‌ ಆಗಿದ್ದಾರೆ. ಡೈರೆಕ್ಟರ್‌ ಆಫ್ ಪಬ್ಲಿಕ್‌ ರಿಲೇಶನ್ಸ್‌, ರಾಜಯೋಗ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ ಫೌಂಡೇಶನ್‌ನ
ಕಾರ್ಯದರ್ಶಿ, ಹೆಡ್‌ ಪೀಸ್‌ ಆಫ್ ಮೈಂಡ್‌ ಟಿವಿ ಸಂಸ್ಥಾಪಕ, ರೆಡಿಯೋ ಮಧುಬನ್‌ ಕಮ್ಯೂನಿಟಿ ಸೊಸೈಟಿಯ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಮೂಲತಃ ಬಾರಕೂರಿನವರು
ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ನಡೂರಿನವರಾದ ಕರುಣಾಕರ್‌ ಶೆಟ್ಟಿ ನಡೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬಾರಕೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬೆಂಗಳೂರಿನಲ್ಲಿರುವ ಎಚ್‌ಎಂಟಿ ಸಂಸ್ಥೆಯಲ್ಲಿ ತಂತ್ರಜ್ಞರಾಗಿ ಕರ್ತವ್ಯಕ್ಕೆ ಸೇರಿದ್ದರು. ಇವರ ತಂದೆ ಮಂಜಯ್ಯ ಶೆಟ್ಟಿ ಶಿಕ್ಷಕರಾಗಿದ್ದರು. 1960ರಿಂದ ಆಧ್ಯಾತ್ಮ ಶಿಕ್ಷಣದ ಸೆಳೆತ ಇವರನ್ನು ಪೂರ್ಣಕಾಲಿಕವಾಗಿ ಪ್ರಜಾಪಿತ ಬ್ರಹ್ಮಾಕುಮಾರೀಸ್‌ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next