Advertisement

ಸ್ವಉದ್ಯೋಗದಿಂದ ಸ್ವಾವಲಂಬಿಗಳಾಗಿ: ಆಂಜನೇಯ

12:29 PM Jul 31, 2017 | |

ಚಿತ್ರದುರ್ಗ: ಶಿಕ್ಷಣ ಪಡೆದವರು ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ಯಾವುದಾದರೂ ತರಬೇತಿ, ಸರ್ಕಾರದ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಬೇಕು ಎಂದು ಸಮಾಜಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಕರೆ ನೀಡಿದರು.

Advertisement

ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ಸಂಕೀರ್ಣದಲ್ಲಿ ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲೆಯ ಪರಿಶಿಷ್ಟ ಜಾತಿಯ 180 ಜನ ಚರ್ಮ  ಶಲಕಮಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆ ತರಬೇತಿ ಶಿಬಿರವನ್ನು  ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆ ಕಲಿತ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ. ನೌಕರಿಯನ್ನು ಅಂಕ, ಮೆರಿಟ್‌ ಆಧಾರದ ಮೇಲೆ ನೀಡಲಾಗುತ್ತಿದೆ. ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲದವರು ಸ್ವಯಂ ಉದ್ಯೋಗದತ್ತ ಮನಸ್ಸು ಮಾಡಬೇಕು ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ನಿರುದ್ಯೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ವಿದ್ಯಾವಂತರು, ಕುಲಕಸುಬುದಾರರು ಯಾರೂ ನಿರುದ್ಯೋಗಿಗಳಾಗಬಾರದೆಂದು ವಿವಿಧ ಸಂಸ್ಥೆಗಳಿಂದ ಉದ್ಯೋಗಾಧಾರಿತ ತರಬೇತಿ ನೀಡುವುದರ ಜೊತೆಗೆ ಸವಲತ್ತು ಒದಗಿಸಲು ಪರಿಶಿಷ್ಟ ಜಾತಿ/ಪಂಗಡಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಇಂತಹ ತರಬೇತಿಗಳನ್ನು ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದರು. ಲಿಡ್ಕರ್‌ ಅಧ್ಯಕ್ಷರಾಗಿ ಒ. ಶಂಕರ್‌ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯಾದ್ಯಂತ ಸಂಚರಿಸಿ ನಿಗಮದಿಂದ ಸಾಕಷ್ಟು ಜನರಿಗೆ ತರಬೇತಿ ಕೊಡಿಸಿ ಸವಲತ್ತು ವಿತರಿಸುತ್ತಿರುವುದು ಶ್ಲಾಘನೀಯ. ತರಬೇತಿ ಪಡೆದವರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಶೆಡ್‌ (ಕಾರ್ಯಾಗಾರ) ನಿರ್ಮಿಸಿಕೊಡಲಾಗುವುದು. ಕುಶಲಕರ್ಮಿಗಳಿಗೆ ವಸತಿ ಸಮುತ್ಛಯ ನಿರ್ಮಿಸಿ ವಾಸಕ್ಕೆ ಅನುವು ಮಾಡಿಕೊಡಲಾಗುವುದು. ಎಸ್‌ಸಿಎಸ್‌ಟಿ ವರ್ಗದ ನಿರುದ್ಯೋಗಿಗಳು ಕೈಗಾರಿಕೆ ಪ್ರಾರಂಭಿಸಲು 10 ಕೋಟಿ ರೂ. ಸಾಲ ನೀಡಲಾಗುತ್ತಿದೆ. 5 ಸಾವಿರ ರೂ. ತರಬೇತಿ ಭತ್ಯೆ ನೀಡಲಾಗುವುದು. ಇದರ ಪ್ರಯೋಜನ ಪಡೆದುಕೊಂಡು ಪುರುಷರು, ಮಹಿಳೆಯರು ಸ್ವಯಂ ಉದ್ಯೋಗ ಮಾಡಬೇಕು ಎಂದರು. ಭರಮಸಾಗರದ ಬಳಿ ಸಿಡಿಲು ಬಡಿದು ಮೃತಪಟ್ಟ ರೈತನ ಪತ್ನಿ ಜಯಮ್ಮ ಅವರಿಗೆ ಸಚಿವರು 4 ಲಕ್ಷ ರೂ.ಗಳ ಚೆಕ್‌ ವಿತರಿಸಿದರು. 

ಕಾರ್ಯಕ್ರಮದಲ್ಲಿ ಸಂಸದ ಬಿ.ಎನ್‌. ಚಂದ್ರಪ್ಪ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಮಾಜಿ ಸದಸ್ಯ ಆರ್‌.ವಿ. ವೆಂಕಟೇಶ್‌, ನಗರಸಭೆ ಪ್ರಭಾರಿ ಅಧ್ಯಕ್ಷ ಕೆ. ಮಲ್ಲೇಶಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸರ್ದಾರ್‌, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯ ಜೋತ್ಸಾ°, ಉಪವಿಭಾಗಾಧಿ  ಕಾರಿ ಟಿ. ರಾಘವೇಂದ್ರ, ತಹಶೀಲ್ದಾರ್‌ ಮಲ್ಲಿಕಾರ್ಜುನ ಭಾಗವಹಿಸಿದ್ದರು. ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಒ. ಶಂಕರ್‌ ಸ್ವಾಗತಿಸಿದರು. 

ಉದ್ಯೋಗಿಗಳು ತಯಾರಿಸುವ ಉತ್ಪನ್ನಗಳು ಗುಣಮಟ್ಟದ್ದಾಗಿದ್ದು, ಜನಸಾಮಾನ್ಯರಿಗೆ ಕೈಗೆಟಕುವ  ದರದಲ್ಲಿ ಸಿಗುವಂತಿರಬೇಕು. ಆಗ ಲಿಡ್ಕರ್‌ ನಿಗಮ ಉತ್ಪನ್ನಗಳನ್ನು ಖರೀದಿಸುತ್ತದೆ. ಅಲ್ಲದೆ ಸಾರ್ವಜನಿಕರು ತಮ್ಮನ್ನು ಹುಡುಕಿಕೊಂಡು ಬರುತ್ತಾರೆ. 
ಎಚ್‌. ಆಂಜನೇಯ, ಸಮಾಜಕಲ್ಯಾಣ ಇಲಾಖೆ ಸಚಿವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next