Advertisement

Mangaluru ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆ ಪ್ರಕ್ರಿಯೆ ವಿವರ

11:57 PM Dec 18, 2023 | Team Udayavani |

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಜಿಲ್ಲಾ ಕ್ರೀಡಾ ವಸತಿ ನಿಲಯದ 5ನೇ ತರಗತಿಗೆ ಪ್ರವೇಶ ಹಾಗೂ ರಾಜ್ಯದ ಎಲ್ಲ ಕ್ರೀಡಾ ಶಾಲೆ ಅಥವಾ ವಸತಿ ನಿಲಯಗಳ 8ನೇ ತರಗತಿ ಮತ್ತು ಪ್ರಥಮ ಪಿಯುಸಿಗೆ ಪ್ರವೇಶಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ವಿವರ ಇಂತಿದೆ.

Advertisement

ಕಿರಿಯರ ವಿಭಾಗ: 5ನೇ ತರಗತಿ
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿದ್ದು, 2024-25ರಲ್ಲಿ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು.2024ರ ಜೂ. 1ಕ್ಕೆ 11 ವರ್ಷದೊಳಗಿರಬೇಕು.

ಕಿರಿಯರ ವಿಭಾಗ – 8ನೇ ತರಗತಿ

ಪ್ರಸ್ತುತ ವರ್ಷ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024- 25ರಲ್ಲಿ 8ನೇ ತರಗತಿಗೆ ಅರ್ಹತೆ ಪಡೆಯಬೇಕು. 2024ರ ಜೂ. 1ಕ್ಕೆ 14 ವರ್ಷದೊಳ‌ಗಿನವರಾಗಿರಬೇಕು.

ತಾಲೂಕು ಮಟ್ಟದಲ್ಲಿ ಅರ್ಹತೆ
ಪಡೆದು ರಾಜ್ಯ ಮಟ್ಟದ ಕ್ರೀಡಾ ಶಾಲೆ/ನಿಲಯಕ್ಕೆ ಆಯ್ಕೆ ಬಯಸುವ ವರು 2024ರ ಜ.19ರಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.

ಹಿರಿಯರ ವಿಭಾಗ

ಹಿರಿಯ ವಿಭಾಗದ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಆಯ್ಕೆ ಬಯಸುವವರು ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿದ್ದು, 2024-25ರಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಹರಾಗಿರಬೇಕು. 2024ರ ಜೂ. 1ಕ್ಕೆ 17ವರ್ಷದೊಳಗಿನ ವರಾಗಿರಬೇಕು. ಜ. 20ರಂದು ಅಜ್ಜರಕಾಡಿನಲ್ಲಿ ನಡೆಯುವ ಆಯ್ಕೆಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next