ಕುಷ್ಟಗಿ: ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳು ಮುಂದುವರಿಯುವುದು ಅನುಮಾನ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಲಿಂಗಸುಗೂರಿನಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ ಧರ್ಮ ಸಮ್ಮೆಳನದಲ್ಲಿ ಭಾಗವಹಿಸಲು ಕುಷ್ಟಗಿ ಮಾರ್ಗವಾಗಿ ತೆರಳುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅನುಷ್ಠಾನಗೊಂಡಿರುವ ಯೋಜನೆಗಳು ಕಾಗದದಲ್ಲಿ ಮಾತ್ರ ಜಾರಿಯಲ್ಲಿದ್ದು, ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇಂದಿರಾ ಕ್ಯಾಂಟೀನ್ ಮುಚ್ಚಿದಂತೆ ಈ ಯೋಜನೆಗಳು ಬಂದ್ ಆಗಲಿವೆ. ರೈತರ ಕೃಷಿ ಪಂಪಸೆಟ್ ಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಸಲು ಅಸಮರ್ಥವಾಗಿರುವ ಕಾಂಗ್ರೆಸ್ ಸರ್ಕಾರ ಕೇವಲ 5 ತಾಸಿಗೆ ಸೀಮಿತಗೊಳಿಸಿದ್ದು, ರೈತರೊಂದಿಗೆ ಕಣ್ಣಾ ಮುಚ್ಚಾಲೆಯಾಟ ಆಡುತ್ತಿದೆ. ರಾಜ್ಯಾದಾದ್ಯಂತ ಕಾಂಗ್ರೆಸ್ ಧೋರಣೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಇದೆ ವೇಳೆ ‘ದಸರಾ ಬಳಿಕ ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ’ ಎಂದು ತಿಳಿಸಿದರು.
ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಅಶೋಕ ಬಳೂಟಗಿ, ಜಯತೀರ್ಥ ಸೌಧಿ, ಮಹಾಲಿಂಗಪ್ಪ ದೋಟಿಹಾಳ, ಲಾಡಸಾಬ್ ಕೊಳ್ಳಿ, ಚಂದ್ರು ವಡಿಗೇರಿ, ಭರಮಗೌಡ ಬ್ಯಾಲಿಹಾಳ ಮತ್ತಿತರ ರಿದ್ದರು.