ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಕಾರ್ಯಕ್ರಮದ ಅಂಗವಾಗಿ ನೀಡುವ ಮಹಿಳಾ ಗ್ರಂಥ ಬಹುಮಾನ- 2022 ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ನಾಲ್ಕು ಗ್ರಂಥಗಳನ್ನು ಆಯ್ಕೆ ಮಾಡಲಾಗಿದೆ.
ದೀಪ್ತಿ ಭದ್ರಾವತಿ, ಭದ್ರಾವತಿ ಅವರ ಅಷ್ಟೇ….. (ಕವನ ಸಂಕಲನ), ಡಾ.ಕಮಲಾ ನರಸಿಂಹ, ತುಮಕೂರು ಅವರ ಸುವರ್ಣ ಮುಖಿ (ಕಥಾ ಸಂಕಲನ), ಉಷಾ ನರಸಿಂಹನ್, ಮೈಸೂರು ಅವರ ಕೆಂಡದ ರೊಟ್ಟಿ (ಕಾದಂಬರಿ), ಡಾ.ಗೀತಾ ವಸಂತ, ತುಮಕೂರು ಅವರ ಅವಳ ಅರಿವು (ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳು) ಆಯ್ಕೆಗೊಂಡಿವೆ.
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಪುಸ್ತಕ ಬಹುಮಾನವನ್ನು 1977 ರಿಂದ ಅಂದರೆ 48 ವರ್ಷಗಳಿಂದ ಸಂಘವು ನೀಡುತ್ತಾ ಬಂದಿದ್ದು, ಈ ವರ್ಷದಿಂದ ಮಹಿಳಾ ಸಾಹಿತ್ಯದ ೪ ಪ್ರಕಾರಗಳಿಗೆ ಪ್ರಾಶಸ್ತ್ರ್ಯ ನೀಡಲು ಆರಂಭಿಸಿದೆ. ಈ ಬಹುಮಾನವನ್ನು ಏಪ್ರಿಲ್ ಮೊದಲ ವಾರದಲ್ಲಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಈ ಬಹುಮಾದ ಆಯ್ಕೆಗಾಗಿ ಬಂದ ಮಹಿಳಾ ಲೇಖಕರ 140 ಕೃತಿಗಳಲ್ಲಿ ನಾಲ್ಕು ಕನ್ನಡ ಕೃತಿಗಳನ್ನು
ನಿರ್ಣಾಯಕರ ಸಮಿತಿ ಆಯ್ಕೆ ಮಾಡಿದ್ದು, ಪ್ರತಿ ಬಹುಮಾನ ಕೃತಿಗೆ 15,000 ರೂ.ಗಳನ್ನು ನೀಡಿ ಫಲಕದೊಂದಿಗೆ ಸನ್ಮಾನಿಸಿ ಬಹುಮಾನ ನೀಡಲಾಗುವುದು ಎಂದು ಕವಿಸಂನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Lok Sabha Election: ಬಂಗಾಳದ ಈ ಕ್ಷೇತ್ರದಲ್ಲಿ ಮಾಜಿ ಪತಿ-ಪತ್ನಿಯ ನಡುವೆ ರಾಜಕೀಯ ಸಮರ