ಮಂಡ್ಯ: ಮಂಡ್ಯ ಸಿಟಿ ಕೋಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಗೆ ಮೊದಲ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆನಡೆಯದೆ ಎಲ್ಲ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬ್ಯಾಂಕ್ ಆರಂಭವಾದ 1985ರಿಂದಲೂ 2015ರವರೆಗೂ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿತ್ತು. ಆದರೆ, ಮೊದಲ ಬಾರಿಗೆ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜು ಹಾಗೂ ಮಾಜಿ ನಿರ್ದೇಶಕ ಎಚ್.ಅಶೋಕ್ ಗುಂಪುಗಳ ನಡುವೆಮಾತುಕತೆ ನಡೆದು ಒಮ್ಮತದ ನಿರ್ಣಯದಿಂದ ಬಿ.ಟಿ.ನಾಗರಾಜುಬಣದ ಐದು ಮಂದಿ ಕಣದಿಂದಹಿಂದೆ ಸರಿದಿದ್ದರಿಂದ, ಅಶೋಕ್‌ಬಣದ 9 ಮಂದಿ ಹಾಗೂ ಬಿ.ಟಿ. ನಾಗರಾಜು ಬಣದ ನಾಲ್ಕು ಮಂದಿಅವಿರೋಧವಾಗಿ ಆಯ್ಕೆಯಾದರು.
ಎಚ್.ಅಶೋಕ್ ಗುಂಪಿನಿಂದಸಿ.ಸುಂದರ, ಸಿ.ಬೋರೇಗೌಡ, ಎಚ್. ಅಶೋಕ್, ಆನಂದ್, ಬಿ.ಲಿಂಗರಾಜು,ಎಚ್.ಎಸ್.ಚನ್ನಪ್ಪ, ಎಚ್.ಆರ್.ರಮ್ಯಾ, ತಿರುಮಲಾಚಾರಿ, ಸೋಮ ಶೇಖರ್ ಕೆರಗೋಡು ಆಯ್ಕೆಯಾದರೆ,ಬಿ.ಟಿ.ನಾಗರಾಜು ಬಣದಿಂದ ಎಸ್.ಕೃಷ್ಣಶೆಟ್ಟಿ, ಎಸ್.ಸತ್ಯಸಾವಿತ್ರಿ, ಬಿ.ಚೌಡಯ್ಯ, ಆರ್.ನಾಗಯ್ಯ ಆಯ್ಕೆಯಾಗಿದ್ದಾರೆ. ಬಿ.ಟಿ.ನಾಗರಾಜು, ಮಹೇಶ್, ಎ.ಎನ್.ಸತೀಶ್, ಎಚ್.ಎಲ್.ಸ್ವಾಮಿ, ನೇತ್ರಾವತಿ ಕಣದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ 13ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆ ಘೋಷಿಸಲಾಯಿತು ಎಂದು ಚುನಾವಣಾಧಿಕಾರಿ ಎಚ್.ಆರ್.ನಾಗಭೂಷಣ್ ಘೋಷಿಸಿದರು.
21ಕ್ಕೆ ಅಧ್ಯಕ್ಷರ ಚುನಾವಣೆ: ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಯ 13 ನಿರ್ದೇಶಕಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಬಯಸಿ 46 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 6 ನಾಮಪತ್ರ ತಿರಸ್ಕೃತಗೊಂಡರೆ, 40 ನಾಮ ಪತ್ರಗಳು ಕ್ರಮ ಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯಲು ಗುರುವಾರ ಕೊನೆ ದಿನವಾಗಿತ್ತು. 40 ಮಂದಿಯ ಪೈಕಿ 27 ಮಂದಿತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ 13 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದ್ದು,ಇದು ಬ್ಯಾಂಕ್‌ನ ಇತಿಹಾಸದಲ್ಲೇ ಮೊದಲಾಗಿದೆ. ಇದರಿಂದಾಗಿ ಬ್ಯಾಂಕ್ ಗೆ ಸುಮಾರು 5 ಲಕ್ಷ ರೂ. ಉಳಿ ತಾಯವಾಗಿದೆ ಎಂದು ಚುನಾವಣಾಧಿಕಾರಿ ಎಚ್.ಆರ್.ನಾಗಭೂಷಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣೆ ಘೋಷಣೆಯಾದಾಗ 258 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ನಂತರದಲ್ಲಿ 650 ಮಂದಿ ನ್ಯಾಯಾಲಯದಿಂದ ಮತದಾನ ಮಾಡುವ ಹಕ್ಕು ಪಡೆದುಕೊಂಡ ಬಂದ ಹಿನ್ನೆಲೆಯಲ್ಲಿ ಒಟ್ಟು 908 ಮಂದಿ ಮತದಾರರಿದ್ದರು. ಆದರೆ,ಚುನಾವಣೆ ನಡೆಯದೆ ಎಲ್ಲವೂ ಸುಖಾಂತ್ಯವಾಗಿ ಕೊನೆ ಗೊಂಡಿದೆ ಎಂದು ವಿವರಿಸಿದರು.
ನೂತನ ನಿರ್ದೇಶಕರಾದ ಎಚ್.ಅಶೋಕ್, ಸಿ.ಸುಂದರ, ಸಿ.ಬೋರೇಗೌಡ, ಆನಂದ್, ಬಿ.ಲಿಂಗರಾಜು, ಎಚ್.ಎಸ್. ಚನ್ನಪ್ಪ, ತಿರುಮಲಾಚಾರಿ, ಸೋಮಶೇಖರ್ ಕೆರಗೋಡು ಹಾಜರಿದ್ದರು