Advertisement

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

03:28 PM Feb 10, 2021 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Advertisement

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಕಾರ್ಯತಂತ್ರ ಯಶಸ್ವಿಯಾಗಿದ್ದು, ಕ್ಷೇತ್ರವನ್ನು ಕೇಸರಿಮಯ ಮಾಡಲು ಮಾಡಿರುವ ಪ್ರಯತ್ನ ಸಫಲ ಕಾಣುವಂತಾಗಿದೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಮಂಚೇನಹಳ್ಳಿ ಹೋಬಳಿ ಹಳೇಹಳ್ಳಿ ಪಂಚಾಯಿತಿಸೇರಿದಂತೆ, ಮಂಡಿಕಲ್‌, ತಿಪ್ಪೇನಹಳ್ಳಿ ಹಾಗೂ ಹಾರೋಬಂಡೆ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಹೊಸಹುಡ್ಯ, ಅಡ್ಡಗಲ್‌ ಹಾಗೂ ಅಂಗರೇಖನಹಳ್ಳಿ ಗ್ರಾಪಂಗಳಲ್ಲಿ ಚುನಾವಣೆ ನಡೆಯಿತು.

ಹಳೇಹಳ್ಳಿ ಗ್ರಾಪಂ: ಅಧ್ಯಕ್ಷರಾಗಿ ಕೊಲಿಮೇನಹಳ್ಳಿ ಗ್ರಾಮದ ಭಾಗ್ಯಮ್ಮ ನರಸಿಂಹಮೂರ್ತಿ, ಉಪಾಧ್ಯಕ್ಷ ರಾಗಿ ದೇವರಕೊಂಡಹಳ್ಳಿ ನಗುಮಯ್ಯ ಆಯ್ಕೆ.

ಮಂಡಿಕಲ್‌: ಅಧ್ಯಕ್ಷರಾಗಿ ಮಂಡಿಕಲ್‌ನ ಶಂಷಾದ್‌ ಬಾನು ಫ‌ಯಾಜ್‌, ಉಪಾಧ್ಯಕ್ಷರಾಗಿ ಮಂಡಿಕಲ್‌ ರಾಮಕೃಷ್ಣ.

Advertisement

ತಿಪ್ಪೇನಹಳ್ಳಿ: ಅಧ್ಯಕ್ಷರಾಗಿ ಭೋದಗಾನಹಳ್ಳಿ ಗ್ರಾಮದ ಉಷಾ ಮುರಳಿ, ಉಪಾಧ್ಯಕ್ಷರಾಗಿ ದಿನ್ನೆಹೊಸಹಳ್ಳಿ ಗ್ರಾಮದ ಮಾಲಾ ನಾಗರಾಜ್‌.

ಹಾರೋಬಂಡೆ: ಅಧ್ಯಕ್ಷರಾಗಿ ಮರಸನಹಳ್ಳಿ ಗ್ರಾಮದ ಯಶೋಧಮ್ಮ ವೆಂಕಟೇಶ್‌, ಉಪಾಧ್ಯಕ್ಷರಾಗಿ ಗಂಡ್ಲಹಳ್ಳಿ ವೆಂಕಟೇಶ್‌.

ಅಡ್ಡಗಲ್‌: ಚುನಾವಣೆಯಲ್ಲಿ ಒಂದು ಮತ ಅಂತರದಿಂದ ಅಧ್ಯಕ್ಷರಾಗಿ ಅಡ್ಡಗಲ್‌ನ ಕಲಾವತಿ ಪ್ರಭಾಕರ್‌, ಉಪಾಧ್ಯಕ್ಷರಾಗಿ ಶೆಟ್ಟಿಗೆರೆ ತಿಮ್ಮಪ್ಪ ಆಯ್ಕೆಯಾಗಿದ್ದು, ಹೊಸಹುಡ್ಯ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಒಂದು ಮತ ಅಂತರದಿಂದ ಅಧ್ಯಕ್ಷರಾಗಿ ಕೇಶವಾರದ ಲಕ್ಷ್ಮೀದೇವಮ್ಮ ರಾಮಯ್ಯ, ಉಪಾಧ್ಯಕ್ಷರಾಗಿ ಹೊಸಹುಡ್ಯದ ಲಕ್ಷ್ಮೀನರಸಮ್ಮ ಆಯ್ಕೆಯಾಗಿದ್ದಾರೆ.

ಅಂಗರೇಖನಹಳ್ಳಿ: ಅಧ್ಯಕ್ಷರಾಗಿ ವಿ.ಗಣೇಶ್‌, ಉಪಾಧ್ಯಕ್ಷರಾಗಿ ಭವಾನಿ ಆಯ್ಕೆಯಾಗಿದ್ದಾರೆ

ಕುರೂಡಿ ಗ್ರಾಪಂಗೆ ರಾಧಮ್ಮ ಅಧ್ಯಕೆ :

ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿಯ ಕುರೂಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ರಾಧಮ್ಮ ರಂಗನಾಥ್‌ಆಯ್ಕೆಯಾಗಿದ್ದು, ಇವರಿಗೆ ಡಾ.ಕೆಂಪರಾಜು ಹಾಗೂ ಸಿ.ಆರ್‌.ನರಸಿಂಹಮೂರ್ತಿ ಅಭಿನಂದಿಸಿದ್ದಾರೆ. ಕೆಂಪರಾಜುಮಾತನಾಡಿ, 1995ರಿಂದಲೂ ನಾನು ಜನಸೇವೆಯಲ್ಲಿದ್ದು,ಗ್ರಾಪಂನಿಂದ ಜಿಪಂ ಮಟ್ಟದಲ್ಲಿ ಗ್ರಾಮಗಳಲ್ಲಿ ಆಗಬೇಕಾದಮೂಲ ಸೌಕರ್ಯಗಳ ಬಗ್ಗೆ ಗಮನ ನೀಡಿ ಅಭಿವೃದ್ಧಿಮಾಡಿರುವ ಅನುಭವವಿದ್ದು, ಸುಸ್ಥಿರ ಅಭಿವೃದ್ಧಿಗಾಗಿ ಸಹಕರಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next