Advertisement

ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕ: ಗೃಹ ಸಚಿವ ಬೊಮ್ಮಾಯಿ

10:11 AM Feb 14, 2020 | Team Udayavani |

ಕೊಪ್ಪಳ: ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವರ್ಷ ಆರು ಸಾವಿರ ನೇಮಕ ಮಾಡಿ ಮುಂದಿನ ವರ್ಷ ಉಳಿದದ್ದು ನೇಮಕಾತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು. ಠಾಣೆಗೆ ಬರುವ ಜನರೊಂದಿಗೆ ಬೆರೆತು ಸಮಸ್ಯೆ ಬಗೆ ಹರಿಸಲು ಜನ ಸ್ನೇಹಿ ಪೊಲೀಸ್ ಕಾರ್ಯಕ್ರಮವನ್ನು ಈ ಬಾರಿಯ ಬಜೆಟ್ ನಲ್ಲಿ ಪ್ರಸ್ತಾಪಕ್ಕೆ ಬರಲಿದೆ.‌ ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಪ್ಪಳದ ಡಿಆರ್ ನೇಮಕಾತಿ ಸಮಸ್ಯೆಯಾಗಿದೆ. ಅದು ನನ್ನ ಗಮನಕ್ಕೂ ಬಂದಿದೆ. ಪೈಲ್ ಗೆ ಅದಕ್ಕೆ ಉತ್ತರ ಬರೆದಿದ್ದು ಅದೂ ಸಹಿತ ಶೀಘ್ರ ಬಗೆಹರಿಸಲಾಗುವು ಎಂದರು.

ಕೊಪ್ಪಳದಲ್ಲಿ ಮರಳು ದಂಧೆ, ಇಸ್ಪೀಟು ಆಟದ ಕುರಿತು ನನಗೂ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ಅದನ್ನೂ ಮೀರಿಯೂ ಅಕ್ರಮದಲ್ಲಿ ತೊಡಗಿದರೆ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳದ ಬಾಂಗ್ಲಾ ವಲಸಿಗರ ಕುರಿತಂತೆ ಅವರು ಏಲ್ಲಿ ಕೆಲಸ ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಕೈಗಾರಿಕೆಯಲ್ಲಿ ಕೆಲಸ ಮಾಡಲು ಬಂದಿದ್ದಾರೆ. ಇಲ್ಲಿ ಬಂದಿರುವ ಜನರ ಬಗ್ಗೆ ಆಯಾ ಪೊಲೀಸ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದರು.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಈಗಾಗಲೆ ಸಿಎಂ ಯಡಿಯೂರಪ್ಪ ಅವರು ಹಲವು ಸಭೆ ನಡೆಸಿದ್ದಾರೆ. ಕೃಷ್ಣಾ ಯೋಜನೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಎಂ ಅವರು ಹೇಳಿದ್ದಾರೆ. ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ ಅವರು ಖಾತೆಯ ಹೊಣೆ ಹೊತ್ತಿದ್ದಾರೆ. ಈ ಭಾಗದ ನೀರಾವರಿಗೆ ಒತ್ತು ನೀಡಲಾಗುವುದು ಎಂದರಲ್ಲದೆ ಬಸವರಾಜ ರಾಯರಡ್ಡಿ ಅವರು ಈಗ ಕೃಷ್ಣಾ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರದ್ದೇ ಸರ್ಕಾರ 6 ವರ್ಷ ಅಧಿಕಾರದಲ್ಲಿತ್ತಲ್ಲ. ಆಗೊಂದು ಮಾತು, ಈಗೊಂದು ಅವರಿಂದ ಬರುತ್ತಿದೆ‌. ಅವರಲ್ಲಿಯೇ ದ್ವಂದ್ವ ಮಾತುಗಳು ಬರುತ್ತಿವೆ ಎಂದರು.

Advertisement

ಇನ್ನು ಗಂಗಾವತಿ ತಾಲೂಕಿನ ಬಳಿ 24 ಕೋಟಿ ವೆಚ್ಚದಲ್ಲಿ ನವಲು ಜಲಾಶಯದ ಡಿಪಿಆರ್ ಕೈಗೊಳ್ಳಲು ಸಿಎಂ ಅವರು ಆದೇಶ ಮಾಡಿದ್ದಾರೆ ಎಂದರು.

ಹೊಸಪೇಟೆ ಬಳಿ ಸಚಿವರ ಪುತ್ರನ ಕಾರು ಅಪಘಾತ ಪ್ರಕರಣದಲ್ಲಿ ಅವರ ಪುತ್ರನನ್ನ ಪೊಲೀಸ್ ಇಲಾಖೆ ಸೇಫ್ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿ ಏನಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ನಾನು ಪ್ರತಿಕ್ರಿಯೆ ನೀಡಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next