ಕಲಬುರಗಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿಗೆ ಜ.20 ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ 20 ಜನರಲ್ಲಿ 15 ಜನರು ಚುನಾಯಿತರಾಗಿದ್ದಾರೆ.
ಅಧ್ಯಕ್ಷರಾಗಿ ಭವಾನಿ ಸಿಂಗ್ ಠಾಕೂರ್157 ಮತಗಳನ್ನು ಪಡೆದು, 101 ಮತಗಳ ಆಂತರದಿಂದ ಚುನಾಯಿತರಾಗಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿಗಳಾದ ಶಿವರಂಜನ ಸತ್ಯಂಪೇಟೆ (56), ಶೇಷಮೂರ್ತಿ ಅವಧಾನಿ (29) ಹಾಗೂ ಎಸ್.ಬಿ.ಜೋಶಿ (4) ಮತಗಳನ್ನು ಪಡೆದಿದ್ದಾರೆ. ಅದೇ ರೀತಿ ಪ್ರಧಾನ ಕಾರ್ಯರ್ಶಿಯಾಗಿ ದೇವೇಂದ್ರಪ್ಪ ಆವಂಟಿ (159) ಮತಗಳನ್ನು ಪಡೆದು 65 ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಸುರೇಶ ಬಡಿಗೇರ (85) ಮತಗಳನ್ನು ಪಡೆದಿದ್ದಾರೆ. ನಗರ ಕಾರ್ಯದರ್ಶಿಯಾಗಿ ರಮೇಶ ಕಮಿತ್ಕ್ರ್ (130) ಮತಗಳನ್ನು ಪಡೆದು ಚುನಾಯಿತರಾದರು. ಪ್ರತಿಸ್ಪರ್ಧಿ ಅಭ್ಯರ್ಥಿ ಮಲ್ಲಿಕಾರ್ಜುನ ನಾಯಿಕೋಡಿ (85) ಮತಗಳನ್ನು ಪಡೆದಿದ್ದಾರೆ.
ಕಾರ್ಯಕಾರಿ ಮಂಡಳಿಗೆ ಅರುಣ ಕದಮ (194), ಸಂಗಮನಾಥ ರೇವತಗಾಂವ (180), ರಾಜಕುಮಾರ ಉದನೂರ (171), ವಿಜಯಕುಮಾರ ವಾರದ (163), ಅಶೋಕ ಕಪನೂರ (160), ಶಿವರಾಮ ಆಸುಂಡಿ ಹಾಗೂ ಎಂ.ರಾಘವೇಂದ್ರ ತಲಾ (149), ಚನ್ನಬಸವ ಗುರುವಿನ್ (148), ಭೀಮಬಾಯಿ ದೇಶಮುಖ (138), ಆಯಾತುಲ್ಲಾ ಸರಮಸ್ತ (135), ಮಹ್ಮದ್ ಮುಕ್ತಾರೋದ್ದಿನ್ (134), ರಾಜಶೇಖರಯ್ನಾ (123), ರಾಮಕೃಷ್ಣ ಬಡಶೇಷಿ (120), ಮಲ್ಲಿಕಾರ್ಜುನ ಜೋಗ (117) ಹಾಗೂ ಮಹ್ಮದ್ ಮುಜೀಬ್ ಅಲಿಖಾನ್ (113) ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.
ಸೋಲುಂಡವರು: ಬೌದ್ಧಪ್ರಿಯಾ ನಾಗಸೇನ (109), ಗೋಪಾಲ ಕುಲಕರ್ಣಿ (102), ಚಂದ್ರಕಾಂತ ಹಾವನೂರ (86), ರವೀಂದ್ರ ವಕೀಲ (99), ಸತೀಶ ಸಿಂಗ್ (97) ಇವರುಗಳು ಕಾರ್ಯಕಾರಿ ಮಂಡಳಿ ಆಯ್ಕೆಗೆ ಅಗತ್ಯ ಮತ ಪಡೆಯದೇ ಸೋಲು ಕಂಡಿದ್ದಾರೆ.
ಅವಿರೋಧ ಆಯ್ಕೆ: ಈಗಾಗಲೇ ಉಪಾಧ್ಯಕ್ಷ (ನಗರ) ಸ್ಥಾನಕ್ಕೆ ಶಾಮಕುಮಾರ ಶಿಂಧೆ, ಉಪಾಧ್ಯಕ್ಷ (ಗ್ರಾಮೀಣ) ಸ್ಥಾನಕ್ಕೆ ಗುರುಬಸಪ್ಪ ಸಜ್ಜನಶೆಟ್ಟಿ, ಕಾರ್ಯದರ್ಶಿ(ಗ್ರಾಮೀಣ) ಸ್ಥಾನಕ್ಕೆ ವೀರೇಂದ್ರ ಕೊಲ್ಲೂರ, ಜಿಲ್ಲಾ ಖಜಾಂಚಿಯಾಗಿ ರಾಜು ದೇಶಮುಖ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯಕಾರಿಣಿಗೆ ಆಯ್ಕೆ: ‘ಉದಯವಾಣಿ’ ವರದಿಗಾರ ಹಣಮಂತರಾವ ಭೈರಾಮಡಗಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ 110 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದು, 172ಮತಗಳನ್ನು ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ಪ್ರಭುಲಿಂಗ ನೀಲೂರೆ ಕೇವಲ 62 ಮತಗಳನ್ನು ಪಡೆದಿದ್ದಾರೆ. ಚುನಾವಣಾಧಿಕಾರಿಯಾಗಿ ಹಿರಿಯ ಪ್ರತಕರ್ತ ಬಿ.ವಿ.ಚಕ್ರವರ್ತಿ ಕಾರ್ಯ ನಿರ್ವಹಿಸಿದ್ದರು.