ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕೆಎಎಸ್ ಗ್ರೂಪ್- ಎ (ಕಿರಿಯ ಶ್ರೇಣಿ) ಹುದ್ದೆಗೆ 59 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಲ ಷರತ್ತುಗಳಿಗೆ ಒಳಪಟ್ಟಂತೆ ಅಧಿಸೂಚನೆ ಹೊರಡಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕು. ಈ ಅವಧಿಯಲ್ಲಿ ಕೆಎಎಸ್ ಗ್ರೂಪ್- ಎ (ಕಿರಿಯ ಶ್ರೇಣಿ) ಹುದ್ದೆ ನಿಗದಿಪಡಿಸಿರುವ ಎಲ್ಲ ಇಲಾಖಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗಬೇಕು. ರಾಜ್ಯ ಹೈಕೋರ್ಟ್‌ನಲ್ಲಿನ ರಿಟ್ ಅರ್ಜಿ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿನ ಅರ್ಜಿ ಹಾಗೂ ಈ ಆಯ್ಕೆ ಬಗ್ಗೆ ಇತರೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದಲ್ಲಿ ಆಯ್ಕೆ ಬಗ್ಗೆ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿ ಪರಿಷ್ಕರಣೆಯಾಗಲಿದೆ. ಈ ನೇಮಕಾತಿ ತಾತ್ಕಾಲಿಕವಾಗಿದ್ದು, ಕಾಲ ಕಾಲಕ್ಕೆ ಜಾರಿಯಲ್ಲಿರುವ ನಿಯಮ/ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಭತ್ಯೆ ಪಡೆಯಲು ಅವಕಾಶವಿಲ್ಲ. ಅಭ್ಯರ್ಥಿಗಳು ನೀಡಿರುವ ಯಾವುದೇ ಮಾಹಿತಿ ಯಾವುದೇ ಸಮಯದಲ್ಲಿ ತಪ್ಪು ಎಂದು ಕಂಡು ಬಂದಲ್ಲಿ ನಿಯಮಾನುಸಾರ ತಕ್ಷಣದಿಂದಲೇ ಸೇವೆಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗೆ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳ ವಿವರ: ಐಶ್ವರ್ಯ ಆರ್.- ಮೈಸೂರು, ರಮೇಶ್ ಕೋಲಾರ- ಬಾಗಲಕೋಟೆ, ಸಂತೋಷ್ ಕಾಮಗೌಡ- ಬೆಳಗಾವಿ, ಮಂಜುನಾಥ ಡೊಂಬರ- ಧಾರವಾಡ, ರಾಯಪ್ಪ ಹುಣಸಗಿ- ವಿಜಯಪುರ, ಈಶ್ವರ ಉಳ್ಳಾಗಡ್ಡಿ- ಬೆಳಗಾವಿ, ಯತೀಶ್ ಉಲ್ಲಾಳ್- ದಕ್ಷಿಣ ಕನ್ನಡ, ನಾರಾಯಣರೆಡ್ಡಿ ಕನಕರೆಡ್ಡಿ- ಧಾರವಾಡ, ಮದನ್ ಮೋಹನ್ ಸಿ.- ಬೆಂಗಳೂರು, ಕಲಾಶ್ರೀ ಸಿ.ಆರ್.- ಮಂಡ್ಯ. ಅನ್ನಪೂರ್ಣ ನಾಗಪ್ಪ ಮುದುಕಮ್ಮನವರ- ದಾವಣಗೆರೆ, ಆಕಾಶ್ ಎಸ್.- ಬೆಂಗಳೂರು, ಬಲರಾಮ ಲಮಾಣಿ- ವಿಜಯಪುರ, ಸೂರಜ್ ಎ.ಆರ್.- ಬೆಂಗಳೂರು, ಅಬೀದ ಗದ್ಯಾಳ- ಬಾಗಲಕೋಟೆ, ಅಶೋಕ ತೇಲಿ- ವಿಜಯಪುರ, ಮಮತಾ ಹೊಸಗೌಡರ- ಬಾಗಲಕೋಟೆ, ಸಿದ್ರಾಮೇಶ್ವರ- ರಾಯಚೂರು, ಅಜಯ್ ವಿ.- ಬೆಂಗಳೂರು, ಪ್ರಸನ್ನ ಕುಮಾರ್ ವಿ.ಕೆ.- ಬಳ್ಳಾರಿ, ಮಧು ಎನ್.ಎನ್.- ಚಿತ್ರದುರ್ಗ, ಶೇಖರ್ ಜಿ.ಡಿ.- ಮಂಡ್ಯ, ಸೋಮಶೇಖರ ವಿ.- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಯಲಕ್ಷ್ಮೀ- ಕಲಬುರಗಿ, ಪ್ರಶಾಂತ್ ಹನಗಂಡಿ- ಬಾಗಲಕೋಟೆ, ಅದಾ ಫಾತಿಮಾ- ಬೆಂಗಳೂರು, ಅಜಿತ್ ಎಂ.- ದಕ್ಷಿಣ ಕನ್ನಡ, ರಘುನಂದನ್ ಎ.ಎನ್.- ತುಮಕೂರು, ಬಸಂತಿ ಬಿ.ಎಸ್.- ಬೆಂಗಳೂರು. ನಟರಾಜ ಜಿ.ಆರ್.- ಮಂಡ್ಯ, ಮಮತಾ ದೇವಿ ಜಿ.ಎಸ್.- ಬೆಂಗಳೂರು, ಕೈಕಶನ್- ಬೆಂಗಳೂರು, ಪಾರ್ವತಿ- ಬೀದರ್, ಧರ್ಮಪಾಲ್ ಎಸ್.- ಬೆಂಗಳೂರು, ರಾಮಚಂದ್ರ ಗಡದೆ- ಕಲಬುರಗಿ, ಮೊಹಮ್ಮದನಯೀಂ ಮೊಮಿನ್- ಬಾಗಲಕೋಟೆ, ನಾಗರಾಜ ಎಲ್.- ಶಿವಮೊಗ್ಗ, ಗಂಗಪ್ಪ ಎಂ.- ಚಿಕ್ಕಬಳ್ಳಾಪುರ, ವಿದ್ಯಾಶ್ರೀ ಚಂದರಗಿ- ಬೆಳಗಾವಿ, ಕೃಷ್ಣಕುಮಾರ್ ಎಂ.ಪಿ.- ರಾಮನಗರ, ರಘು ಎ.ಇ.- ಮೈಸೂರು, ಚಂದ್ರಯ್ಯ ಆರ್.- ರಾಮನಗರ, ಮಮತಾ ಕುಮಾರಿ- ಬೆಂಗಳೂರು, ಗೀತಾ ಹುಡೇದ- ರಾಯಚೂರು, ಶಿವಣ್ಣ ಎಂ.ಜಿ.- ಚಿಕ್ಕಬಳ್ಳಾಪುರ, ಸಹನ ಎಸ್.ಎಚ್.- ಬೆಂಗಳೂರು, ನಿಖೀತಾ ಎಂ.ಚಿನ್ನಸ್ವಾಮಿ- ಬೆಂಗಳೂರು. ಕಮಲಾಬಾಯಿ ಬಿ.- ಬೆಂಗಳೂರು, ಬಿನಯ್ ಪಿ.ಕೆ.- ಬೆಂಗಳೂರು, ಮಂಜುನಾಥ ಹೆಗಡೆ- ಮೈಸೂರು, ಶ್ರೀನಿವಾಸಗೌಡ ವಿ.- ಬೆಂಗಳೂರು, ಗಿರೀಶ್ ನಂದನ್ ಎಂ.- ಬೆಂಗಳೂರು, ರಾಜು ಕೆ.- ಶಿವಮೊಗ್ಗ, ಎಸ್.ಬಿ.ದೊಡಗೌಡರ- ಬೆಳಗಾವಿ, ಸೋಮಪ್ಪ ಕಡಕೋಳ- ವಿಜಯಪುರ, ಸಿದ್ಧಲಿಂಗರೆಡ್ಡಿ- ಬಳ್ಳಾರಿ, ಸುರೇಖಾ- ಕಲಬುರಗಿ, ಜಿ.ಸಂತೋಷ್ ಕುಮಾರ್- ಮೈಸೂರು, ಹೋಟೆಲ್ ಶಿವಪ್ಪ- ಬಳ್ಳಾರಿ.