ಹೊಸದಿಲ್ಲಿ: ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್ ಈ ಬಾರಿಯ ಐಪಿಎಲ್ ಸಾಧನೆಯನ್ನು ಪರಿಗಣಿಸಿ ಹನ್ನೊಂದರ ಬಳಗವೊಂದನ್ನು ರಚಿಸಿದ್ದಾರೆ. ಇದಕ್ಕೆ ಅಷ್ಟೇನೂ ಯಶಸ್ಸು ಕಾಣದ ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ನೇಮಿಸಿದ್ದಾರೆ.
ಮತ್ತೂಂದು ಅಚ್ಚರಿಯೆಂದರೆ ಆರಂಭಕಾರ ಡೇವಿಡ್ ವಾರ್ನರ್ ಅವರನ್ನು ಮಧ್ಯಮ ಸರದಿಯಲ್ಲಿ ಸೇರಿಸಿದ್ದು. ಹೆಚ್ಚುವರಿಯಾಗಿ 12ನೇ ಹಾಗೂ 13ನೇ ಆಟಗಾರರನ್ನೂ ಸೆಹವಾಗ್ ಹೆಸರಿಸಿದ್ದಾರೆ. ಇವರೆಂದರೆ ಇಶಾನ್ ಕಿಶನ್ ಮತ್ತು ಜೋಫ್ರಾ ಆರ್ಚರ್.
ಸೆಹವಾಗ್ ಐಪಿಎಲ್ ಇಲೆವೆನ್: ಕೆ.ಎಲ್.ರಾಹುಲ್ (ವಿ.ಕೀ.), ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ಡೇವಿಡ್ ವಾರ್ನರ್, ಎಬಿ ಡಿ ವಿಲಿಯರ್, ಕಾಗಿಸೊ ರಬಾಡ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಲ್, ರಶೀದ್ ಖಾನ್.
ರೋಹಿತ್ ಫಿಟ್ ಆಗಿಲ್ಲ
ರೋಹಿತ್ ಶರ್ಮ ಇನ್ನೂ ಪೂರ್ತಿ ಫಿಟ್‌ನೆಸ್ ಹೊಂದಿಲ್ಲ, ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಸೀಮಿತ ಓವರ್‌ಗಳ ಸರಣಿಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
“ರೋಹಿತ್ ಶರ್ಮ ಕೇವಲ ಶೇ. 70ರಷ್ಟು ಫಿಟ್‌ನೆಸ್ ಹೊಂದಿದ್ದಾರೆ. ಚೇತರಿಕೆಗೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ. ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಗಿರಿಸಲಾಯಿತು. ಟೆಸ್ಟ್ ಸರಣಿ ವೇಳೆ ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಗಂಗೂಲಿ ಹೇಳಿದರು.