ಹೊಸದಿಲ್ಲಿ: ಭಾರತ ಕ್ರಿಕೆಟ್ ಕಂಡ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಭಾರತದ ನ್ಯೂ ಕಬಡ್ಡಿ ಫೆಡರೇಷನ್ ಶುರು ಮಾಡಿರುವ ಬಂಡಾಯ ಕಬಡ್ಡಿ ಲೀಗ್; ಐಪಿಕೆಎಲ್ (ಇಂಡೋ ಪ್ರೀಮಿಯರ್ ಕಬಡ್ಡಿ ಲೀಗ್) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್ “ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ 2001-02ರಲ್ಲಿ ಹೋರಾಡಿದ್ದರ ಫಲವಾಗಿ ಈಗಿನ ಕ್ರಿಕೆಟಿಗರು ಆರ್ಥಿಕ ಭದ್ರತೆ ಹೊಂದಿದ್ದಾರೆ.
ಈಗಿನ ಕ್ರಿಕೆಟಿಗರು ಅವರಿಗೆ ಕೃತಜ್ಞವಾಗಿರಬೇಕು. ಬಿಸಿಸಿಐ ಟಿ.ವಿ ಆದಾಯದ ಮೂಲಕ ಪಡೆಯುವ ಹಣದಲ್ಲಿ ಆಟಗಾರರಿ ಗೆ ಪಾಲು ನೀಡಬೇಕೆಂದು ಈ ಕ್ರಿಕೆಟಿಗರು ಒತ್ತಾಯಿಸಿದ್ದರು. ಆಗಲೇ ಆಟಗಾರರ ಸಂಘ ಸ್ಥಾಪನೆಗೆ ಶ್ರಮಿಸಿದ್ದರು. ಆ ಹೋರಾಟ ಫಲ ನೀಡಲು ದೀರ್ಘಕಾಲ ತೆಗೆದುಕೊಂಡಿತು ಎಂದು ಸೆಹ್ವಾಗ್ ಹೇಳಿದ್ದಾರೆ.
“ಈಗ ಶುರುವಾಗಿರುವ ಐಪಿಕೆಎಲ್, ತನ್ನ ಆದಾಯದಲ್ಲಿ ಶೇ.20 ಹಣವನ್ನು ಆಟಗಾರರಿಗೆ ನೀಡುವುದಾಗಿ ಘೋಷಿಸಿದೆ. ಇದು ಉಳಿದೆಲ್ಲ ಕ್ರೀಡೆಗಳಿಗೆ ಮಾದರಿಯಾ ಗಬೇಕು. ನಾನು ಒಂದು ಬಾರಿ ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್‌ರೊಂದಿಗೆ ಮಾತನಾಡಿದ್ದಾಗ, “ನನಗೆ ಪಂದ್ಯದ ಶುಲ್ಕವೆಲ್ಲ ಸಿಗುವುದಿಲ್ಲ, ಕೇವಲ ಟಿಎಡಿಎ ಮಾತ್ರ ಸಿಗುತ್ತದೆ ಎಂದಿದ್ದರು. ಹಾಕಿ ಮತ್ತು ಫುಟ್‌ಬಾಲ್‌ನಲ್ಲಿರುವ ಈ ಪರಿಸ್ಥಿತಿ ಬದಲಾದರೆ, ಅದು ಒಳ್ಳೆಯ ಸುದ್ದಿ ಎಂದು ಸೆಹ್ವಾಗ್ ಹೇಳಿದರು. ಈ ಕೂಟ ಡಿನ್ಪೋರ್ಟ್ಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ.