ಸೀತಾಂಗೋಳಿ: ವಿದ್ಯಾರ್ಥಿಯ ಮೃತದೇಹ ಶನಿವಾರ ಮುಜುಂಗಾವು ಕೊಳದಲ್ಲಿ ಪತ್ತೆಯಾಗಿದೆ.
Advertisement
ಮಂಗಳೂರು ಕಾಲೇಜಿನಲ್ಲಿ ಪಿಯುಸಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಶರತ್(17) ಮೃತಪಟ್ಟ ಯುವಕ.
ಸೂರಂಬೈಲು ನಿವಾಸಿ ಗೋಪಾಲ- ವಸಂತಿ ದಂಪತಿಯ ಪುತ್ರ ಶರತ್ ನ ಚಪ್ಪಲಿ ಹಾಗೂ ಮೊಬೈಲ್ ಪೋನ್ ಕೊಳದ ಬಳಿ ಕಂಡು ಬಂದಿತ್ತು. ಸ್ಥಳೀಯರು ನೀಡಿದ ಮಾಹಿತಿ ಬಳಿಕ ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿಗಳು ಕೊಳದಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಮೃತ ಶರತ್, ತಂದೆ, ತಾಯಿ ಸಹೋದರ ಸಾಕ್ಷಾತ್, ಸಹೋದರಿ ಸಾಕ್ಷಿಯವರನ್ನು ಅಗಲಿದ್ದಾನೆ.