Advertisement
ಇದನ್ನೂ ಓದಿ:18 ತಿಂಗಳ ಬಳಿಕ “OnlyFansʼ ಸಿಇಓ ಹುದ್ದೆಯಿಂದ ಕೆಳಗಿಳಿದ ಇಂಡಿಯನ್-ಅಮೆರಿಕನ್ ಮೂಲದ ಗ್ಯಾನ್
Related Articles
Advertisement
ಪಾಕಿಸ್ತಾನದ ಸೀಮಾ ಹೈದರ್ ಳನ್ನು ಉತ್ತರಪ್ರದೇಶದ ನೋಯ್ಡಾ ತಲುಪಲು ನೆರವು ನೀಡಿದ ವ್ಯಕ್ತಿಗಳನ್ನು ಇನ್ನಷ್ಟೇ ಗುರುತಪತ್ತೆಹಚ್ಚಬೇಕಾಗಿದೆ. ಅಷ್ಟೇ ಅಲ್ಲ ಸೀಮಾ ಹೈದರ್ ಕೆಲವು ಮಿಲಿಟರಿ ಅಧಿಕಾರಿಗಳಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿರುವುದನ್ನು ಎಟಿಎಸ್ ಪತ್ತೆ ಹಚ್ಚಿದೆ. ಭಾರತಕ್ಕೆ ಆಗಮಿಸುವ ಮೊದಲು ಸೀಮಾ 70,000 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಅನ್ನು ಖರೀದಿಸಿದ್ದಳು. ಈ ಮೊಬೈಲ್ ಫೋನ್ ನಿಂದ ಸಂದೇಶ ಕಳುಹಿಸುವಾಗ ಅಥವಾ ಚಾಟ್ ಮಾಡುವಾಗ ಜಾಗರೂಕರಾಗಿರಲು ಯಾರಾದರು ಸೂಚನೆ ನೀಡಿದ್ದಾರೆಯೇ ಎಂದು ಎಟಿಎಸ್ ಸೀಮಾಳನ್ನು ಪ್ರಶ್ನಿಸಿದೆ.
ಕೋಡ್ ವರ್ಡ್ಸ್ ಬಳಕೆ ಬಗ್ಗೆ ಎಟಿಎಸ್ ಅಧಿಕಾರಿಗಳು ಸೀಮಾಳನ್ನು ವಿಚಾರಿಸಿದ್ದು, ತನಗೆ ಉರ್ದು ಭಾಷೆಯ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ ಎಂದು ತಿಳಿಸಿದ್ದಾಳೆ. ಅಲ್ಲದೇ ಪಾಕ್ ಐಎಸ್ ಐ ಬಳಸುವ Fufi (ಐಎಸ್ ಐಗೆ ಮಾಹಿತಿ ರವಾನಿಸುವವ) ಹಾಗೂ Fruit (ಹಣ) ಕೋಡ್ ವರ್ಡ್ಸ್ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ. ಆದರೆ ಆಕೆ ನಿರರ್ಗಳವಾಗಿ ಹಿಂದಿ ಮಾತನಾಡುತ್ತಿದ್ದು, ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡುತ್ತಿರುವುದು ಎಟಿಎಸ್ ಅಧಿಕಾರಿಗಳಲ್ಲಿ ಸಂಶಯ ಹುಟ್ಟುಹಾಕಿರುವುದಾಗಿ ವರದಿ ವಿವರಿಸಿದೆ.
ವಿಚಾರಣೆ ವೇಳೆ ಸೀಮಾ ಹೈದರ್ ತನ್ನು ಮೊಬೈಲ್ ಫೋನ್ ಬಿಲ್ (ಮೇ 8) ಅನ್ನು ಅಧಿಕಾರಿಗಳಿಗೆ ನೀಡಿದ್ದು, ಅದೇ ದಿನ ಆಕೆಗೆ ಪಾಸ್ ಪೋರ್ಟ್ ಕೂಡಾ ನೀಡಲಾಗಿತ್ತು. ನಂತರ ಕೇವಲ ಎರಡೇ ದಿನದಲ್ಲಿ (ಮೇ 10) ಆಕೆ ಪಾಕಿಸ್ತಾನ ತೊರೆದಿದ್ದು, ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದು, ಆಕೆಯ ನಡೆಯ ಬಗ್ಗೆ ತೀವ್ರ ವಿಚಾರಣೆ ಮುಂದುವರಿಸಲಾಗಿದೆ ಎಂದು ಎಟಿಎಸ್ ತಿಳಿಸಿದೆ.