Advertisement
ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಕಾರಿಗಳ ಕಚೇರಿ ಆವರಣದಲ್ಲಿ ಬನ್ನಿಕುಪ್ಪೆ ಜಿಪಂ ವ್ಯಾಪ್ತಿಯ ಗ್ರಾಪಂಗಳು, ಸ್ನೇಹ ಜೀವಿಸಂಸ್ಥೆ, ಗೋಗ್ರೀನ್‌ಕ್ಲಬ್, ಅರಣ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೀಡ್‌ಬಾಲ್ ಹಸಿರು ಕ್ರಾಂತಿಯಲ್ಲಿ ನೆರೆದಿದ್ದ ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸುಮಾರು 7 ಸಾವಿರಕ್ಕೂ ಹೆಚ್ಚು ಸೀಡ್‌ಬಾಲ್ ತಯಾರಿಸಿದರು.
Related Articles
Advertisement
ಮಣ್ಣಿನುಂಡೆ: ರೈತರು ಮಳೆಗಾಲಕ್ಕೂ ಮುನ್ನ ಸಸಿ ತಯಾರಿಸುವ ಸಲುವಾಗಿ ಕೆಮ್ಮಣ್ಣನ್ನು ಸಗಣಿ, ಗೋ ಮೂತ್ರದೊಂದಿಗೆ ಮಿಶ್ರಮಾಡಿ ಮೂರ್‍ನಾಲ್ಕು ದಿನಗಳ ಕಾಲ ಒಂದೆಡೆ ರಾಶಿಹಾಕಿದ ನಂತರ ಉಂಡೆ ಮಾಡಿಕೊಂಡು ಮಧ್ಯದಲ್ಲಿ ತಮ್ಮ ಜಮೀನಿಗೆ ಬೇಕಾದ ಸಸಿಗಳ ಬೀಜವನ್ನು ಉಂಡೆಯೊಳಗೆ ಹಾಕಿ ನಂತರ ಉಂಡೆಗಳನ್ನು ಒಂದೆಡೆ ಶೇಖರಿಸಿ, ಸಸಿ ಮೊಳಕೆಯೊಡೆದ ನಂತರ ಅಗತ್ಯವಿರುವ ಕಡೆಗಳಲ್ಲಿ ಹಾಕಿ ಪೋಷಿಸುವುದೇ ಸೀಡ್‌ಬಾಲ್.
ಅಧಿಕಾರಿಗಳು, ಸ್ವಯಂ ಸೇವಕರೂ ಭಾಗಿ: ಈ ಕಾರ್ಯಕ್ರಮದಲ್ಲಿ ಗೋಗ್ರೀನ್ ಸಂಸ್ಥೆ, ಸ್ನೇಹಜೀವಿ ಸಂಸ್ಥೆ, ಅರಣ್ಯ ಸಿಬ್ಬಂದಿ, ಮಹಿಳಾ ಸಂಘಗಳವರ ಜೊತೆಗೆ ಪಿಡಿಒಗಳಾದ ನರಹರಿ, ಶ್ರೀಶೈಲ, ಸೋಮಣ್ಣ, ಭವ್ಯ ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಕೆಲ ಸ್ವಯಂಸೇವಕರು ಸಹ ಮಣ್ಣಿನುಂಡೆ ಮಾಡಿ ಬೀಜ ನೆಟ್ಟು, ಪರಿಸರ ಪ್ರೀತಿ ಮೆರೆದರು.
ಮೊಳಕೆ ಕಂಡು ಹರ್ಷ: ವಿಶ್ವ ಭೂಮಿ ದಿನಾಚರಣೆಯಂದು ವಿವಿಧ ತಳಿಗಳ ಬೀಜಹಾಕಿ, ತಯಾರಿಸಿದ್ದ ಮಣ್ಣಿನುಂಡೆಯನ್ನು ಪ್ರಾಯೋಗಿಕವಾಗಿ ಅರಣ್ಯ ಇಲಾಖೆ ಆವರಣದಲ್ಲಿ ಹಾಕಲಾಗಿತ್ತು. ಮಳೆ ಬೀಳುತ್ತಿದ್ದಂತೆ ಅಲ್ಲಲ್ಲಿ ನೂರಾರು ಸೀಡ್ ಬಾಲ್ ಗಳಿಂದ ಸಸಿಯ ಮೊಳಕೆಯಾಗಿದ್ದನ್ನು ಅರಣ್ಯ ಇಲಾಖೆಯ ಸಸಿ ಮಡಿ ನಿರ್ವಹಣೆಯ ನೌಕರ ರಮೇಶ ತೋರಿಸಿದ್ದನ್ನು ಕಣ್ತುಂಬಿಕೊಂಡ ಜಿಪಂ ಸದಸ್ಯೆ ಡಾ.ಪುಷ್ಪ, ಇಒ ಕಷ್ಣಕುಮಾರ್ ಸೇರಿದಂತೆ ಅನೇಕರು ಪುಳಕಿತಗೊಂಡು ಸೀಡ್‌ಬಾಲ್ ತಯಾರಿಕೆಯ ಸಾರ್ಥಕತೆಯಲ್ಲಿ ಮಿಂದೆದ್ದರು.