Advertisement
ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಗಿಡವನ್ನು ನೆಟ್ಟರೆ ಸಾಲದು, ಅದನ್ನು ಸಂರಕ್ಷಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಪರಿಸರದ ಸ್ವಚ್ಛತೆ ದಿನನಿತ್ಯದ ವಿಚಾರವಾಗಬೇಕು. ಹಸಿರಿನಿಂದ ಉಸಿರು ಎನ್ನುವುದನ್ನು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಗಿಡ ನೆಡುವುದು ಫ್ಯಾಶನ್ ಆಗಿದೆ. ಅದರ ಫೋಟೋ ಹಾಕಿ ಪ್ರಚಾರ ಪಡೆಯುವುದಷ್ಟೇ ಗುರಿಯಾಗಿದ್ದು ,ನೆಟ್ಟ ಮರುದಿನದಿಂದ ಆ ಗಿಡದ ಸಂರಕ್ಷಣೆಯ ಬಗ್ಗೆ ಯಾವುದೇ ಗಮನಹರಿಸುವುದಿಲ್ಲ .ನೆಡುವುದರ ಜೊತೆಗೆ ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳನ್ನು ನಾವು ಸಂರಕ್ಷಿಸಿದರೆ ಮಾತ್ರ ಅಲ್ಲಿ ಹುಟ್ಟುವ ನಮ್ಮ ನದಿ ಮೂಲಗಳು ಉಳಿಯಲು ಸಾಧ್ಯ ಆ ನಿಟ್ಟಿನಲ್ಲಿ ನಾವೆಲ್ಲರೂ ಅದರ ಸಂರಕ್ಷಣೆಯ ಹೊಣೆ ಹೊರುವುದರ ಜೊತೆಗೆ ಪರಿಸರಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಸಹ್ಯಾದ್ರಿ ಸಂರಕ್ಷಣಾ ಸಮಿತಿಯ ಸಂಚಾಲಕರು,ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಂಗಳೂರು ಹೇಳಿದರು.
ಊರಿನ ಜನ ಹಾಗೆ ಮಕ್ಕಳು ಬಹಳ ಪ್ರೀತಿಯಿಂದ ಸೇರಿಕೊಂಡು ಬೀಜದುಂಡೆಗಳನ್ನು ತಯಾರಿಸಿ ಖುಷಿ ಪಟ್ಟರು.ಈ ಸಂದರ್ಭದಲ್ಲಿ ಯರುಕೋಣೆ ಆಲಗದ್ದೆ ಕೇರಿ ಸ.ಕಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಯ ಅಣ್ಣು, ಯರುಕೋಣೆ ಭಾಗದ ಅರಣ್ಯ ರಕ್ಷಕ ಜನಾರ್ದನ ಬೈಂದೂರು ಉಪಸ್ಥಿತರಿದ್ದರು. ಯರುಕೊಣೆ ಆಲಗದ್ದೆ ಕೇರಿ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಅಣ್ಣು,ಅರಣ್ಯ ರಕ್ಷಕ ಜನಾರ್ದನ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. 98.3 ರೆಡ್ ಎಫ್ ಎಂ ಖ್ಯಾತಿಯ ನಿರೂಪಕಿ ಆರ್.ಜೆ. ನಯನಾ ಶೆಟ್ಟಿ ಯರುಕೋಣೆ ಕಾರ್ಯಕ್ರಮ ನಿರ್ವಹಿಸಿದರು.