Advertisement

ರಾಗಿ ಶ್ಯಾವಿಗೆ ರುಚಿ ನೋಡಿ

03:07 PM Jul 28, 2018 | |

ಅಕ್ಕಿಯಿಂದ ಶ್ಯಾವಿಗೆ ತಯಾರಿಸಿಕಾಯಿ ಹಾಲು, ಹುಳಿ ಗೊಜ್ಜು, ಸಾಂಬಾರಿನೊಂದಿಗೆ ರುಚಿ ನೋಡಿದ್ದೇವೆ. ರಾಗಿ ಶ್ಯಾವಿಗೆಯನ್ನು ಎಲ್ಲೋ ಸವಿದ ನೆನಪು. ಮತ್ತೆ ಮತ್ತೆ ರುಚಿ ನೋಡಬೇಕು, ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆಯಾದರೆ ಮನೆಯಲ್ಲಿ ರಾಗಿ ಶ್ಯಾವಿಗೆ ಮಾಡಿ ನೋಡಬಹುದು. ಒಂದು ಕಪ್‌ ರಾಗಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ.

Advertisement

ಅನಂತರ ತಣಿಸಿ. ಒಂದು ಪಾತ್ರೆಯಲ್ಲಿ ಒಂದು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ತಣಿದ ರಾಗಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ಈ ಹಿಟ್ಟನ್ನು ಶಾವಿಗೆ ಅಚ್ಚಿಗೆ ಹಾಕಿ ಇಡ್ಲಿ ಪ್ಲೇಟ್‌ನಲ್ಲಿ ಚಿಕ್ಕವೃತ್ತದಂತೆ ಒತ್ತಿ. ಉಗಿಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ಆರೋಗ್ಯಕರವಾದ ರಾಗಿ ಶ್ಯಾವಿಗೆಯನ್ನು ಚಟ್ನಿಯೊಂದಿಗೆ ಸವಿಯಿರಿ.

TIPS
1. ಕರಿದ ಪದಾರ್ಥಗಳನ್ನು ಎಣ್ಣೆಯಿಂದ ತೆಗೆದ ತತ್‌ಕ್ಷಣ ಪೇಪರ್‌ ಮೇಲೆ ಹಾಕಿದರೆ ಅದು ಸ್ವಲ್ಪ ಎಣ್ಣೆ ಹೀರಿಕೊಳ್ಳುವುದು. 

2. ಬಾಳೆ ಎಲೆಯಲ್ಲಿ ಆಹಾರ ಕಟ್ಟುವ ಮೊದಲು ಅದನ್ನು ಸ್ವಲ್ಪ ಬೆಂಕಿಗೆ ಹಿಡಿದು ಅಥವಾ ಬಿಸಿ ನೀರು ಹಾಕಿ ಬಾಡಿಸಿ. ಇದರಿಂದ ಆಹಾರ ಹಸಿ ವಾಸನೆ ಬರುವುದಿಲ್ಲ ಹಾಗೂ ಬಾಳೆ ಹರಿಯುವುದಿಲ್ಲ.

3. ತೆಂಗಿನ ಕಾಯಿ ಚಟ್ನಿ ಮಾಡುವಾಗ ಸ್ವಲ್ಪ ಹುರಿಗಡಲೆ ಸೇರಿಸಿದರೆ ಒದಗು ಬರುತ್ತದೆ, ರುಚಿ ಹೆಚ್ಚಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next